ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಬುಧವಾರ ತಡರಾತ್ರಿ ತೀವ್ರ ಹೊಟ್ಟೆ ನೋವಿನ ಕಾರಣದಿಂದ ಆಸ್ಪತ್ರೆಗೆ ದಾಖಲಾದರು. ಮಾನ್ ಅವರಿಗೆ ಹೊಸದಿಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಿಲ್ಲಿಯ ಸರಿತಾ ವಿಹಾರ್ ನ ಇಂದ್ರಪ್ರಸ್ಥ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೂ ಮುನ್ನ ರಾಜ್ಯದಲ್ಲಿ ಇಬ್ಬರು ದರೋಡೆಕೋರರ ವಿರುದ್ಧ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿದ ರಾಜ್ಯ ಪೊಲೀಸರು ಮತ್ತು ದರೋಡೆಕೋರರ ನಿಗ್ರಹ ಕಾರ್ಯಪಡೆಯನ್ನು ಪಂಜಾಬ್ ಸಿಎಂ ಅಭಿನಂದಿಸಿದ್ದಾರೆ. ಅಮೃತಸರದ ಭಕ್ನಾ ಗ್ರಾಮದಲ್ಲಿ ಪಂಜಾಬ್ ಪೊಲೀಸರೊಂದಿಗೆ ನಡೆದ ಎನ್‌ಕೌಂಟರ್ ನಲ್ಲಿ ಜಗ್ರೂಪ್ ಸಿಂಗ್ ರೂಪ ಮತ್ತು ಮನ್‌ಪ್ರೀತ್ ಸಿಂಗ್, ಅಲಿಯಾಸ್ ಮಣ್ಣು ಕುಸಾ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮುಖ್ಯಮಂತ್ರಿಗಳ ದೆಹಲಿ ಪ್ರವಾಸ: ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಸಾಧ್ಯತೆ
ಆದ್ಮಿ ಪಕ್ಷದ ನೇತೃತ್ವದ ಪಂಜಾಬ್ ಸರ್ಕಾರವು ರಾಜ್ಯದಲ್ಲಿ ದುಷ್ಕರ್ಮಿಗಳು ಮತ್ತು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ನಿರ್ಣಾಯಕ ಯುದ್ಧವನ್ನು ಪ್ರಾರಂಭಿಸಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ.