Advertisement

ಈ ದೇಶದಲ್ಲಿ ಮಾಸ್ಕ್ ಧರಿಸದಿದ್ದರೆ 3 ತಿಂಗಳು ವೇತನ ರಹಿತ ಕೆಲಸದ ಶಿಕ್ಷೆ

05:15 PM Jul 26, 2020 | sudhir |

ಫ್ಯೂಗ್ಯಾಂಗ್‌: ವಿಶ್ವದಾದ್ಯಂತ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಸೋಂಕು ಹರಡುವಿಕೆ ತಡೆಗಟ್ಟಲು ನಾನಾ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಹೀಗೆ ನಾನಾ ಕ್ರಮಗಳನ್ನು ಕಠಿನವಾಗಿ ಜಾರಿಗೊಳಿಸಲಾಗುತ್ತಿದೆ.

Advertisement

ಅನೇಕ ರಾಷ್ಟ್ರಗಳು ಸರಕಾರದ ಮಾರ್ಗಸೂಚಿಗಳನ್ನು ಪಾಲಿಸದವರಿಗೆ ನಾನಾ ರೀತಿಯಲ್ಲಿ ದಂಡ, ಶಿಕ್ಷೆ ವಿಧಿಸುತ್ತಿದ್ದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಅವರು ಮಾಸ್ಕ್ ಧರಿಸದವರಿಗೆ ಮೂರು ತಿಂಗಳು ವೇತನ ರಹಿತ ಕೆಲಸ ಮಾಡಬೇಕೆಂಬ ಕಠಿನ ಶಿಕ್ಷೆ ವಿಧಿಸುವಂತೆ ಘೋಷಿಸಿರುವುದು ವಿಶೇಷವಾಗಿದೆ.

ಈ ಕುರಿತು ಅಮೆರಿಕದ ಸುದ್ದಿ ತಾಣ ರೇಡಿಯೊ ಫ್ರೀ ಏಷ್ಯಾ (ಆರ್‌ಎಫ್ಎ) ಸುದ್ದಿ ಬಿತ್ತರಿಸಿದ್ದು, ಉತ್ತರ ಕೊರಿಯನ್ನರು ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ಸರಕಾರದ ಕಠಿನ ಕ್ರಮಗಳನ್ನು ಪಾಲಿಸಬೇಕಾಗಿದೆ. ಇದೀಗ ಮಾಸ್ಕ್ ಧರಿಸದವರು ಮೂರು ತಿಂಗಳು ವೇತನ ರಹಿತವಾಗಿ ಸರಕಾರ ಸೂಚಿಸಿದ ಕೆಲಸ ಮಾಡಬೇಕೆಂದು ಸರ್ವಾಧಿಕಾರಿಯವರ ಆಜ್ಞೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಉತ್ತರ ಕೊರಿಯಾ ಆಡಳಿತದಿಂದ ಕಾಲೇಜು ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ಜನರ ಮೇಲೆ ನಿಗಾ ಇಡುತ್ತವೆ ಮತ್ತು ಮಾಸ್ಕ್ ಧರಿಸದೇ ಇರುವವರನ್ನು ಕಂಡರೆ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next