Advertisement

ಪ್ರೊ ಕಬಡ್ಡಿ: ಮತ್ತೆ ಅಗ್ರಸ್ಥಾನಕ್ಕೆ ನೆಗೆದ ಪುನೇರಿ ಪಲ್ಟಾನ್‌

10:07 PM Dec 03, 2022 | Team Udayavani |

ಹೈದರಾಬಾದ್‌: ಶನಿವಾರದ ಜಿದ್ದಾಜಿದ್ದಿ ಸೆಣೆಸಾಟದಲ್ಲಿ ದಬಾಂಗ್‌ ಡೆಲ್ಲಿ ವಿರುದ್ಧ 47-44 ಅಂತರದ ಗೆಲುವು ಸಾಧಿಸಿದ ಪುನೇರಿ ಪಲ್ಟಾನ್‌ ಮತ್ತೆ ಪ್ರೊ ಕಬಡ್ಡಿ ಅಂಕಪಟ್ಟಿಯ ಅಗ್ರಸ್ಥಾನಕ್ಕೆ ನೆಗೆದಿದೆ.

Advertisement

ಇದು 20ನೇ ಪಂದ್ಯದಲ್ಲಿ ಪುನೇರಿಗೆ ಒಲಿದ 13ನೇ ಜಯ. ಅದೀಗ 74 ಅಂಕ ಹೊಂದಿದೆ. ಈ ಫ‌ಲಿತಾಂಶದಿಂದ ಜೈಪುರ ದ್ವಿತೀಯ ಸ್ಥಾನಕ್ಕೆ ಕುಸಿಯಿತು (69). ಯೋಧಾಸ್‌ 3ನೇ (65 ಅಂಕ) ಮತ್ತು ಬೆಂಗಳೂರು ಬುಲ್ಸ್‌ 4ನೇ (63 ಅಂಕ) ಸ್ಥಾನದಲ್ಲಿವೆ.

ರೈಡರ್‌ಗಳಾದ ಆಕಾಶ್‌ ಶಿಂಧೆ (16 ಅಂಕ) ಮತ್ತು ಪಂಕಜ್‌ ಮೋಹಿತೆ (11 ಅಂಕ) ಪುನೇರಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದರು. ಡೆಲ್ಲಿ ಪರ ನಾಯಕ ನವೀನ್‌ ಕುಮಾರ್‌ 16 ಅಂಕ, ಆಶು ಮಲಿಕ್‌ 9 ಅಂಕ ಗಳಿಸಿದರು. ಇದು 20 ಪಂದ್ಯಗಳಲ್ಲಿ ಡೆಲ್ಲಿಗೆ ಎದುರಾದ 10ನೇ ಸೋಲು. ಅದು 55 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next