Advertisement
ರಾಘವೇಂದ್ರ ರಾಜ್ ಕುಮಾರ ಮಾತನಾಡಿ, ಪುನೀತ್ ರಾಜ್ ಕುಮಾರ ನಮ್ಮೆಲ್ಲರ ಹೃದಯದಲ್ಲಿ ಅಮರರಾಗಿದ್ದಾರೆ. ಯಾರೇ ಕೈಬಿಟ್ಟರು, ಹೊಸಪೇಟೆ ಜನ ನಮ್ಮನ್ನು ಕೈಬಿಡುವುದಿಲ್ಲ ಎಂದು ಅಪ್ಪು ಯಾವಾಗಲೂ ಹೇಳುತ್ತಿದ್ದರು ಎಂದರು. ಅಪ್ಪು ಮಾನವೀಯತೆಯನ್ನು ಮೆರೆದು, ನಮ್ಮೆಲ್ಲರಿಗೂ ಆದರ್ಶರಾಗಿದ್ದಾರೆ. ಪುನೀತ್ ಪುಣ್ಯಾತ್ಮ, ಅವರ ಸಮಾಜಮುಖಿ ಗುಣಗಳನ್ನು ಅಳವಡಿಸಿಕೊಳ್ಳೋಣ ಎಂದರು. ಅಪ್ಪ- ಅಮ್ಮ ಹೋದಾಗ ನನಗೆ ಅಷ್ಟೊಂದು ನೋವು ಕಾಡಲಿಲ್ಲ. ಈಗ ಅಪ್ಪು ಹೋದಾಗ ಅಪ್ಪ-ಅಮ್ಮ ಹೋದಷ್ಟು ನೋವು, ಆಘಾತ ಆಗಿದೆ ಎಂದರು.
Related Articles
Advertisement
ಅಮರ ಜ್ಯೋತಿ ಮೆರವಣಿಗೆ
ನಗರದ ವಡಕರಾಯ ದೇಗುಲದಿಂದ ಪುನೀತ್ ರಾಜ್ ಕುಮಾರ ಅವರ ಅಮರ ಜ್ಯೋತಿಯನ್ನು ಅಭಿಮಾನಿಗಳು ಮೆರವಣಿಗೆಯಲ್ಲಿ ತಂದರು. ಸ್ಥಳೀಯ ಕಲಾವಿದರು, ಡ್ಯಾನ್ಸ್ ಕಲಾವಿದ ಹುಡುಗರು ಹಾಗು ಚಿತ್ರ ಕಲಾವಿದರು ರಸಮಂಜರಿ ಕಾರ್ಯಕ್ರಮ ನೀಡಿದರು.
ಅಭಿಮಾನಿಗಳ ನೂಕುನುಗ್ಗಲು
ನಗರದ ಪುನೀತ್ ರಾಜ್ ಕುಮಾರ ಕಂಚಿನ ಪುತ್ಥಳಿ ಅನಾವರಣ ವೇಳೆ ನೂಕುನುಗ್ಗಲು ತಳ್ಳಾಟವೂ ನಡೆಯಿತು. ಕೆಲ ಕಡೆ ಯುವಕರು ಬಡಿದಾಡಿಕೊಂಡ ಘಟನೆಯು ನಡೆಯಿತು.
ನಗರದಲ್ಲಿ ಭಾನುವಾರ ನಡೆದ ದಿ.ಡಾ.ಪುನೀತ್ ರಾಜಕುಮಾರ್ ಕಂಚಿನ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಅಭಿಮಾನಿಗಳ ಅತಿರೇಕದ ವರ್ತನೆಗೆ ಸಾವಿರಾರು ಕುರ್ಚಿಗಳು ಮುರಿದು ಚೂರು, ಚೂರಾಗಿವೆ.