ಬೆಂಗಳೂರು: ನಟ ಪುನೀತ್ ರಾಜಕುಮಾರ್ ಮೊದಲ ಪುಣ್ಯಸ್ಮರಣೆ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಕೊನೆಯ “ಗಂಧದ ಗುಡಿ’ ಡಾಕ್ಯುಮೆಂಟರಿ ಸಿನಿಮಾ ಶುಕ್ರ ವಾ ರ ತೆರೆ ಕಾಣುತ್ತಿದೆ. ಮತ್ತೂಂದೆಡೆ ಪುನೀತ್ ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶನಿವಾರ ನಡೆಯಲಿದ್ದು, ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜಕುಮಾರ್ ಸಮಾಧಿ ಬಳಿ ಭರದಿಂದ ತಯಾರಿ ನಡೆಯುತ್ತಿದೆ.
ಪುನೀತ್ ರಾಜಕುಮಾರ್ 1975 ರಲ್ಲಿ ಜನಿಸಿದ್ದರಿಂದ, ಕಂಠೀರವ ಸ್ಟುಡಿಯೋದ ಸುತ್ತಮುತ್ತ ಪುನೀತ್ ಅವರ ವಿಭಿನ್ನ ಗೆಟಪ್‌ಗ್ಳಿರುವ ಸುಮಾರು 75 ಕಟೌಟ್ ಗಳನ್ನು ನಿಲ್ಲಿಸಲು ಫ್ಯಾನ್ಸ್ ನಿರ್ಧರಿಸಿದ್ದಾರೆ.
24 ಗಂಟೆ ಸಮಾಧಿ ದರ್ಶನಕ್ಕೆ ಅವಕಾಶ: “ಗಂಧದ ಗುಡಿ’ ರಿಲೀಸ್ ಹಾಗೂ ಪುನೀತ್ ರಾಜಕುಮಾರ್ ಮೊದಲನೇ ಪುಣ್ಯತಿಥಿ ಅಂಗವಾಗಿ ಕಂಠೀರವ ಸ್ಟುಡಿಯೋ ಸಿಂಗಾರಗೊಳ್ಳುತ್ತಿದೆ. ಪುನೀತ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಶುಕ್ರವಾರ ಮತ್ತು ಶನಿವಾರ ದಿನಪೂರ್ತಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಯಲ್ಲಿ ಅಭಿಮಾನಿಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಯನ್ನು ‘ದೇಶಭಕ್ತ’ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಡಾ. ರಾಜಕುಮಾರ್, ಪಾರ್ವತಮ್ಮ ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸಮಾಧಿಯನ್ನು ವಿವಿಧ ಹೂವುಗಳು ಮತ್ತು ಕಲರ್‌ಫುಲ್ ಬೆಳಕುಗಳಿಂದ ಅಲಂಕಾರ ಮಾಡಲಾಗುತ್ತಿದೆ. ಕಂಠೀರವ ಸ್ಟುಡಿಯೋದ ಮುಂಭಾಗದ ರಸ್ತೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಬಾವುಟಗಳು ರಾರಾಜಿಸಲಿವೆ.
ಸಾಧುಕೋಕಿಲ ತಂಡದಿಂದ ಗಾನ ನಮನ: ಹಾಸ್ಯನಟ ಮತ್ತು ಸಂಗೀತ ನಿರ್ದೇಶಕ ಸಾಧುಕೋಕಿಲ ಮತ್ತು ತಂಡದಿಂದ ಪುನೀತ್ ರಾಜಕುಮಾರ್ ಸಮಾಧಿಯ ಮುಂದೆ ಮನರಂಜನಾ ಕಾರ್ಯಕ್ರಮ ಜರುಗಲಿದೆ. ಸಾಧು ಕೋಕಿಲಾ ಹಾಗೂ ಅವರ ತಂಡ 24 ಗಂಟೆಗಳ ಕಾಲ ನಿರಂತರ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಅಕ್ಟೋಬರ್ 28ರ ಮಧ್ಯರಾತ್ರಿ 12 ಗಂಟೆಯಿಂದ ಈ ಸಂಗೀತ ಕಾರ್ಯಕ್ರಮ ಆರಂಭ ಆಗಲಿದ್ದು, ಅಕ್ಟೋಬರ್ 29ರ ಮಧ್ಯರಾತ್ರಿ 12 ಗಂಟೆವರೆಗೆ ಸಂಗೀತ ಕಾರ್ಯಕ್ರಮ ಜರುಗಲಿದೆ. ಪುನೀತ್ ರಾಜಕುಮಾರ್ ಗೌರವಾರ್ಥ ಈ ಕಾರ್ಯಕ್ರಮವನ್ನು ಸಾಧುಕೋಕಿಲ ಮತ್ತು ತಂಡ ಹಮ್ಮಿಕೊಂಡಿದೆ.