Advertisement

Puneeth Rajkumar; ಇಂದು ‘ಜಾಕಿ’ ರೀ ರಿಲೀಸ್

10:19 AM Mar 15, 2024 | Team Udayavani |

ಪುನೀತ್‌ ರಾಜ್‌ಕುಮಾರ್‌ ನಟನೆಯ “ಜಾಕಿ’ ಚಿತ್ರ ಇಂದು ರೀ ರಿಲೀಸ್‌ ಆಗುತ್ತಿದೆ. ಮಾ.15ರಂದು ಚಿತ್ರವನ್ನು ಮರುಬಿಡುಗಡೆ ಮಾಡುವ ಮೂಲಕ ಅಪ್ಪು ಅಭಿಮಾನಿಗಳಿಗೆ ಖುಷಿ ನೀಡಲಿದೆ ಚಿತ್ರತಂಡ.

Advertisement

ನಿಮಗೆ ಗೊತ್ತಿರುವಂತೆ ಮಾ.17 ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಎರಡು ದಿನ ಮೊದಲೇ ಈ ಚಿತ್ರವನ್ನು ರಿಲೀಸ್‌ ಮಾಡುವ ಮೂಲಕ ಅಪ್ಪು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗುತ್ತಿದೆ ಚಿತ್ರತಂಡ. ಈ ಚಿತ್ರವನ್ನು ಸೂರಿ ನಿರ್ದೇಶನ ಮಾಡಿದ್ದಾರೆ.

ಇನ್ನು, ಈಗ ದೈಹಿಕವಾಗಿ ಪುನೀತ್‌ ನಮ್ಮ ಜೊತೆಗಿಲ್ಲ. ಹಾಗಂತ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸದೇ ದೂರ ಇರುವವರಲ್ಲ. ಈ ಬಾರಿ ಯೂ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಹುಟ್ಟುಹಬ್ಬ ದಿನ ಅನ್ನದಾನ, ರಕ್ತದಾನ, ನೇತ್ರದಾನ, ಅನಾಥ ಮಕ್ಕಳಿಗೆ ಸಹಾಯ ಸೇರಿದಂತೆ ಅನೇಕ ಸಾಮಾಜಿಕಾರ್ಯಗಳ ಮೂಲಕ ಹುಟ್ಟುಹಬ್ಬ ಆಚರಿಸಲು ಮುಂದಾಗಿದ್ದಾರೆ. ಈಗಾಗಲೇ ಪುನೀತ್‌ ಅಭಿಮಾನಿ ಸಂಘಗಳು ಈ ಕುರಿತು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next