Advertisement

ಸಾಹಸ ಸಿಂಹನಿಗೆ ಅವಹೇಳನಕಾರಿ ಹೇಳಿಕೆ: ಕ್ಷಮೆಯಾಚಿಸಿದ ವಿಜಯ್ ರಂಗರಾಜು

06:34 PM Dec 13, 2020 | Adarsha |

ಬೆಂಗಳೂರು: ಕನ್ನಡ ಚಿತ್ರರಂಗದ ಮೇರು ಕಲಾವಿದ ಸಾಹಸ ಸಿಂಹ ದಿವಂಗತ ವಿಷ್ಣುವರ್ದನ್ ಅವರ ಕುರಿತಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡುವುದರ ಮೂಲಕ ಕನ್ನಡ ಸಿನಿಪ್ರಿಯರ ಹಾಗೂ ಚಿತ್ರರಂಗ ಬಳಗದ ಕೆಂಗಣ್ಣಿಗೆ ಗುರಿಯಾಗಿದ್ದ ತೆಲುಗು ನಟ ವಿಜಯ್ ರಂಗರಾಜು ಕ್ಷಮೆ ಯಾಚಿಸಿದ್ದಾರೆ.

Advertisement

ಕೆಲ ದಿನಗಳ ಹಿಂದೆ ತೆಲುಗು ಮಾಧ್ಯಮವೊಂದರಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಮೂಲಕ ನಟ ವಿಜಯ್ ರಂಗರಾಜು ವಿವಾದ ಸೃಷ್ಟಿಸಿಕೊಂಡಿದ್ದರು.

ಇದಾದ ಬಳಿಕ ಸ್ಯಾಂಡಲ್ ವುಡ್ ನ ಪುನೀತ್ ರಾಜ್ ಕುಮಾರ್, ಸುದೀಪ್ ಸೇರಿದಂತೆ ಹಲವು ನಟರು ಮತ್ತು ಅಭಿಮಾನಿಗಳು ಇವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಕೋವಿಡ್ ಸೋಂಕು ದೃಢ

ಇದೀಗ ಈ ಕುರಿತಾಗಿ ನಟ ವಿಜಯ್ ರಂಗರಾಜು ವೀಡಿಯೋ ಒಂದರ ಮೂಲಕ ಕ್ಷಮೆ ಯಾಚಿಸಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.  ಈ ವೀಡಿಯೋದ ಮೂಲಕ ನಾನು ವಿಷ್ಣು ದಾದ  ಅವರ ಕುರಿತಾಗಿ ತಪ್ಪು ಮಾತನಾಡಿದ್ದೇನೆ. ನನ್ನ ತಪ್ಪಿಗೆ ನಾನು ಈಗಾಗಲೇ ತಕ್ಕ ಶಿಕ್ಷೆ  ಅನುಭವಿಸುತ್ತಿದ್ದು, ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದೇನೆ. ನಾನು ಮಾಡಿರುವ ತಪ್ಪಿಗೆ ವಿಷ್ಣುವರ್ದನ್ ಅವರ ಅಭಿಮಾನಿಗಳು, ಕುಟುಂಬಸ್ಥರು, ಹಾಗೂ ನಟರಲ್ಲಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.

Advertisement

ವಿಜಯ್ ರಂಗರಾಜು  ಹೇಳಿಕೆಯ ಕುರಿತಾಗಿ ನಟ ಸುದೀಪ್ ವೀಡಿಯೋದ ಮೂಲಕ ತಮ್ಮ  ಅಸಮಧಾನವನ್ನು ವ್ಯಕ್ತಪಡಿಸಿದ್ದರು. ನಟ ಪುನೀತ್ ರಾಜ್ ಕುಮಾರ್ ಕೂಡಾ ಈ ಕುರಿತಾಗಿ ಟ್ಟೀಟ್ ಮಾಡುವ ಮೂಲಕ ಭಾರತೀಯ ಚಿತ್ರರಂಗ ಒಂದು ಮನೆ, ಎಲ್ಲಾ ಕಲಾವಿದರೂ ಒಂದೇ ಕುಟುಂಬ, ಪ್ರತಿಯೊಬ್ಬ ಕಲಾವಿದರು  ಇತರ ಕಲಾವಿದರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು. ವಿಷ್ಣುವರ್ದನ್ ಅವರ ಕುರಿತಾಗಿ ಅವಹೇಳನಕಾರಿ ಮಾತನಾಡಿದ ವಿಜಯ್ ರಂಗರಾಜು  ಅವರು ಕ್ಷಮೆ ಕೇಳಬೇಕು ಎಂದು ಹೇಳಿದ್ದರು.

ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ  ತಾವು ದಿವಂಗತ ನಟ ವಿಷ್ಣುವರ್ದನ್ ಅವರ ಜೊತೆ ನಟಿಸಿದ್ದಾಗಿ ಹೇಳಿದ್ದರು. ಈ ಸಂದರ್ಭದಲ್ಲಿ ವಿಷ್ಣುವರ್ದನ್ ಅವರ ನಡತೆಯ ಕುರಿಯಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next