Advertisement
ಬಾಲನಟ ಮುಟ್ಟಿದ್ದೆಲ್ಲ ಚಿನ್ನ1980ರಲ್ಲಿ ತೆರೆಕಂಡ “ವಸಂತ ಗೀತ’, 1981ರ “ಭಾಗ್ಯವಂತ’, 1982ರಲ್ಲಿ ತೆರೆಕಂಡ “ಚಲಿಸುವ ಮೋಡಗಳು’, 1983ರಲ್ಲಿ ಬಿಡುಗಡೆಯಾದ “ಎರಡು ನಕ್ಷತ್ರಗಳು’, “ಭಕ್ತ ಪ್ರಹ್ಲಾದ’, 1984ರಲ್ಲಿ ಮೂಡಿಬಂದ “ಯಾರಿವನು’ 1985ರಲ್ಲಿ ಮನಸೂರೆಗೊಳಿಸಿದ “ಬೆಟ್ಟದ ಹೂವು’, 1988ರ “ಶಿವ ಮೆಚ್ಚಿದ ಕಣ್ಣಪ್ಪ’, 1989ರಲ್ಲಿ ತೆರೆಕಂಡ “ಪರಶುರಾಮ್’- ಇವು ಮಾ. ಲೋಹಿತ್ ಬಾಲನಟನಾಗಿ ಅಭಿನಯಿಸಿ ಸಕ್ಸಸ್ ಕಂಡಿದ್ದ ಪ್ರಮುಖ ಚಿತ್ರಗಳು.
ಮೊದಲ ಬಾರಿಗೆ ಮಾ. ಲೋಹಿತ್ ಹೆಸರು ಜಾಹೀರುಗೊಂಡಿದ್ದು, 1981ರಲ್ಲಿ ತೆರೆಕಂಡ “ಭಾಗ್ಯವಂತ’ ಚಿತ್ರದ ಮೂಲಕ. ಅನಾಥ ಮಗುವಿನ ಪಾತ್ರಕ್ಕೆ ಜೀವ ತುಂಬುವ ಮಾ. ಲೋಹಿತ್ ಎಲ್ಲರಿಂದಲೂ ನತದೃಷ್ಟ ಎನಿಸಿಕೊಳ್ಳುತ್ತಾರೆ. ಆದರೆ ರೈಲೊಂದನ್ನು ಅಪಾಯದಿಂದ ಪಾರು ಮಾಡಿ ಅದರ ಚಾಲಕ (ತೂಗುದೀಪ ಶ್ರೀನಿವಾಸ್)ನಿಂದ “ಭಾಗ್ಯವಂತ’ ಎಂದು ಹೊಗಳಿಸಿಕೊಳ್ಳುತ್ತಾರೆ. ಇಂದಿಗೂ ಜನರ ಬಾಯಲ್ಲಿ ಆಗಾಗ್ಗೆ ಗುನುಗುಡುವ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ’, “ಗುರುವಾರ ಬಂತಮ್ಮ’ ಜನಪ್ರಿಯ ಹಾಡುಗಳಾಗಿವೆ.
Related Articles
1985ರಲ್ಲಿ ತೆರೆಕಂಡ “ಬೆಟ್ಟದ ಹೂವು’ ಬಡ ಹುಡುಗನ ಕಲಿಕೆಯ ಆಸಕ್ತಿ ಕಟ್ಟಿಕೊಡುವ ಅಪರೂಪದ ಚಿತ್ರ. ಈ ಚಿತ್ರದ “ತಾಯಿ ಶಾರದೆ ಲೋಕ ಪೂಜಿತೆ’ ಹಾಡು ಇಂದಿಗೂ ಅದೆಷ್ಟೋ ಶಾಲೆಗಳಲ್ಲಿ ಪ್ರತಿನಿತ್ಯ ಕಡ್ಡಾಯವಾಗಿ ಹಾಡುವ ಗೀತೆಯಾಗಿದೆ. ಈ “ಬೆಟ್ಟದ ಹೂವು’ ಚಿತ್ರದ ಅಭಿನಯಕ್ಕಾಗಿ ಮಾ. ಲೋಹಿತ್‌ಗೆ ಎರಡನೇ ಬಾರಿಗೆ “ಅತ್ಯುತ್ತಮ ಬಾಲನಟ’ ಪ್ರಶಸ್ತಿ ದೊರೆತಿತ್ತು. ಈ “ಚಿತ್ರದ ಬಿಸಿಲೇ ಇರಲಿ, ಮಳೆಯೇ ಬರಲಿ’ ಹಾಡು ಜನಪ್ರಿಯ ಗೀತೆಯಾಗಿದೆ.
Advertisement
ಇದನ್ನೂ ಓದಿ:ಕರಾಳ ದಿನ : ಪುನೀತ್ ಅಗಲಿಕೆಗೆ ಪ್ರಧಾನಿ ಮೋದಿ, ರಾಹುಲ್ ಸೇರಿ ಗಣ್ಯರ ಕಂಬನಿ
ನಾಯಕ ನಟನಾಗಿ ಗ್ರ್ಯಾಂಡ್ ಎಂಟ್ರಿಬಾಲನಟನಾಗಿ ಎಲ್ಲರ ಮೆಚ್ಚುಗೆ ಪಡೆದಿದ್ದ ಪುನೀತ್ ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, “ಅಪ್ಪು’ ಸಿನೆಮಾ ಮೂಲಕ. 2002ರಲ್ಲಿ ತೆರೆಕಂಡ ಈ ಚಿತ್ರವನ್ನು ತೆಲುಗಿನ ಪುರಿ ಜಗನ್ನಾಥ್ ನಿರ್ದೇಶಿಸಿದ್ದರು. ವಜ್ರೇಶ್ವರಿ ಕಂಬೈನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಪುನೀತ್ ಸಖತ್ ಡ್ಯಾಶಿಂಗ್ ಲುಕ್ ಹಾಗೂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಹಾಗೂ ಅದರ “ತಾಲಿಬಾನ್ ಅಲ್ಲ, ಅಲ್ಲ…’, “ಬಾರೇ ಬಾರೇ’, “ಎಲ್ಲಿಂದ ಆರಂಭವೋ’, “ಜಾಲಿಗೋ ಜಾಲಿಗೋ’ ಹಾಡುಗಳು ಹಿಟ್‌ಲಿಸ್ಟ್ ಸೇರಿದ್ದವು. ಅನಂತರ ಬಂದ “ಅಭಿ’, “ವೀರ ಕನ್ನಡಿಗ’, “ಮೌರ್ಯ’, “ಆಕಾಶ್’, “ಅಜೇಯ್’, “ಅರಸು’… ಹೀಗೆ ಸಾಲು ಸಾಲು ಸಿನೆಮಾಗಳ ಮೂಲಕ ಹಿಟ್ ಕೊಡುತ್ತಲೇ ಬಂದ ಪುನೀತ್, ಬಹುಬೇಗನೇ ಕನ್ನಡ ಚಿತ್ರರಂಗದ ಸ್ಟಾರ್‌ನಟರಾಗುವ ಜತೆಗೆ ನಿರ್ಮಾಪಕ ಸ್ನೇಹಿ ನಟ ಎನಿಸಿಕೊಂಡರು. ತಾವು ಸ್ಟಾರ್ ನಟರಾದರೂ ಅದನ್ನು ತಲೆಗೇರಿಸಿಕೊಳ್ಳದೆ, ಸಮಚಿತ್ತದಿಂದ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಬಂದ ಪರಿಣಾಮ, ಅವರ ಕೆರಿಯರ್‌ಗ್ರಾಫ್ ಎಲ್ಲೂ ದೊಡ್ಡ ಮಟ್ಟದಲ್ಲಿ ಕುಸಿಯಲಿಲ್ಲ. ಯಶಸ್ವಿ ಚಿತ್ರಗಳೊಂದಿಗೆ ಪಯಣ ಮುಂದುವರಿಸುತ್ತಲೇ ಬಂದರು. ಕೊನೆಯದಾಗಿ ಬಿಡುಗಡೆಯಾದ “ಯುವರತ್ನ’ ಚಿತ್ರ ಒಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಆಗಿತ್ತು. ಪ್ರಸ್ತುತ ಪುನೀತ್ “ಜೇಮ್ಸ್’ ಚಿತ್ರದಲ್ಲಿ ನಟಿಸುತ್ತಿದ್ದರು. ಆ ಚಿತ್ರದ ಬಹುತೇಕ ಚಿತ್ರೀಕರಣ ಕೂಡ ಮುಗಿದಿತ್ತು. ಇದಲ್ಲದೇ, “ದ್ವಿತ್ವ’ ಸೇರಿದಂತೆ ಇನ್ನೊಂದೆರಡು ಚಿತ್ರಗಳು ಪುನೀತ್ ಕೈಯಲ್ಲಿದ್ದವು. ಪುನೀತ್ ಹಿಟ್ ಸಿನೆಮಾಗಳು
ಪುನೀತ್ ರಾಜಕುಮಾರ್ ನಾಯಕ ನಟನಾಗಿ ಅಭಿನಯದ 28 ಸಿನೆಮಾಗಳ ಪೈಕಿ, 20ಕ್ಕೂ ಹೆಚ್ಚು ಸಿನೆಮಾಗಳು ಪುನೀತ್ ಸಿನಿ ಕೆರಿಯರ್‌ನ ಸೂಪರ್ ಹಿಟ್ ಸಿನೆಮಾಗಳಲ್ಲಿ ನಿಲ್ಲುತ್ತವೆ. ಪುನೀತ್ ನಾಯಕನಾಗಿ ಎಂಟ್ರಿಯಾದ ಮೊದಲ ಸಿನೆಮಾ “ಅಪ್ಪು’, ಎರಡನೇ ಸಿನೆಮಾ “ಅಭಿ’, “ಆಕಾಶ್’, “ನಮ್ಮ ಬಸವ’, “ಅಜಯ್’, “ಮಿಲನ’, “ರಾಮ್’, “ಪೃಥ್ವಿ’, “ಜಾಕಿ’, “ಹುಡುಗರು’, “ಅಣ್ಣಾಬಾಂಡ್’, “ಪರಮಾತ್ಮ’, “ರಾಜಕುಮಾರ’, “ಯುವರತ್ನ’ ಹೀಗೆ ಹಲವು ಸಿನೆಮಾಗಳು ಸಿಗುತ್ತವೆ. ನಿರ್ಮಾಪಕರ ಪಾಲಿಗೆ ಸಿನೆಮಾಕ್ಕೆ ಹಾಕಿದ ಬಂಡವಾಳವನ್ನು “ಮಿನಿಮಂ ಗ್ಯಾರೆಂಟಿ’ಯ ಜೊತೆಗೆ ತಂದು ಕೊಡುವ ಸ್ಟಾರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪುನೀತ್ ರಾಜಕುಮಾರ್ ಅವರದ್ದು. ಗಾಯಕರಾಗಿ ಹಿಟ್
ಡಾ| ರಾಜ್‌ಕುಮಾರ್ ನಾಯಕ ನಟರಾಗಿ ಹೇಗೆ ಖ್ಯಾತಿ ಪಡೆದಿದ್ದರೋ, ಗಾಯಕರಾಗಿಯೂ ಅಷ್ಟೇ ಜನಪ್ರಿಯತೆ ಹೊಂದಿದ್ದರು. ರಾಜ್ ಅವರ ಆ ಗುಣ ಪುನೀತ್ ಅವರಿಗೂ ಬಂದಿತ್ತು. ಪುನೀತ್ ಕೂಡಾ ನಾಯಕ ನಟರಾಗಿ ಹಿಟ್ ಆಗುವ ಜೊತೆಗೆ ಗಾಯಕರಾಗಿಯೂ ಯಶಸ್ಸು ಕಂಡಿದ್ದರು. ಬಾಲನಟರಾಗಿ 10ಕ್ಕೂ ಹೆಚ್ಚು ಹಾಡುಗಳು ಹಾಗೂ ನಾಯಕ ನಟರಾದ ನಂತರ 80ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ ಖ್ಯಾತಿ ಪುನೀತ್ ಅವರದು.