Advertisement

‘ಫೀಲ್‌ ದಿ ಪವರ್‌’ ಹಾಡಲ್ಲಿ ಪುನೀತ್‌ ರಗಡ್‌ ಲುಕ್

02:36 PM Mar 13, 2021 | Team Udayavani |

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ”ಯುವರತ್ನ’ ಚಿತ್ರದ 5ನೇ ಹಾಡು ಶುಕ್ರವಾರ ಬಿಡುಗಡೆಯಾಗಿದೆ. “ಫೀಲ್‌ ದಿ ಪವರ್‌’ ಎಂಬ ಸಾಲಿನಿಂದ ಪ್ರಾರಂಭವಾಗುವ ಈ ಹಾಡಿನಲ್ಲಿ ಪುನೀತ್‌ ರಾಜಕುಮಾರ್‌ ದಾಡಿ ಬಿಟ್ಟು, ಕೈನಲ್ಲಿ ಗನ್‌ ಹಿಡಿದು, ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ.

Advertisement

ಈ ಹಾಡಿಗೆ ಶಶಾಂಕ್‌ ಶೇಷಗಿರಿ ಧ್ವನಿಯಾಗಿದ್ದು, ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ಸಾಹಿತ್ಯ ರಚಿಸಿದ್ದಾರೆ.  ಎಸ್‌. ತಮನ್‌ ಸಂಗೀತಾ ಸಂಯೋಜಿಸಿರುವ ಈ ಹಾಡಿಗೆ ಜಾನಿ ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:ಕಲರ್‌ಫ‌ುಲ್‌ ನೋಡು ಶಿವ

ಇನ್ನು “ಫೀಲ್‌ ದಿ ಪವರ್‌’ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯು-ಟ್ಯೂಬ್‌ನಲ್ಲಿ ಸುಮಾರು 1 ಮಿಲಿಯನ್‌ಗೂ ಅಧಿಕ ವಿವ್ಸ್‌ ಪಡೆದುಕೊಂಡಿದ್ದು, ಹಾಡು ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ. ಅಂದಹಾಗೆ, ಇದೇ ಏಪ್ರಿಲ್‌ 1 ರಂದು “ಯುವರತ್ನ’ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದ್ದಾರೆ.

ಇದನ್ನೂ ಓದಿ: ನಾಯಕಿಯ ಹುಡುಕಾಟದಲ್ಲಿ ‘ಕಥಾನಾಯಕ’

Advertisement
Advertisement

Udayavani is now on Telegram. Click here to join our channel and stay updated with the latest news.

Next