Advertisement

ಜ್ಞಾನ ಮಂದಿರಕ್ಕೆ  ಆರ್ಥಿಕ ನೆರವು ನೀಡಿದ್ದ ಅಪ್ಪು 

03:03 PM Oct 31, 2021 | Team Udayavani |

ಕಂಪ್ಲಿ: ಕಳೆದ ಹಲವು ವರ್ಷಗಳ ಹಿಂದೆ ಆರಂಭವಾದ ಮಹಾಸ್ತೂಪ ಡಾ| ರಾಜಕುಮಾರ್‌ ಜ್ಞಾನಮಂದಿರಕ್ಕೆ ಖ್ಯಾತ ನಟ, ರಾಜರತ್ನ ಪುನೀತ್‌ ರಾಜಕುಮಾರ್‌50 ಸಾವಿರ ರೂಗಳನ್ನು ಸಂಸ್ಥೆ ಬೆಳವಣಿಗೆಗೆ ನೀಡುವ ಮೂಲಕ ನೆರವಾಗಿದ್ದರು ಎಂದು ಜ್ಞಾನ ಮಂದಿರದ ಅಧ್ಯಕ್ಷ ಸಿ.ವೆಂಕಟೇಶ್‌ ಸ್ಮರಿಸಿದರು.

Advertisement

ಅವರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, 2016ರಲ್ಲಿ ಹಂಪಿ ತಳವಾರ ಘಟ್ಟದ ಹತ್ತಿರದಲ್ಲಿ “ರಣವಿಕ್ರಮ’ ಚಿತ್ರೀಕರಣಕ್ಕೆ ಆಗಮಿಸಿದಾಗ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದರು. ಅಪ್ಪು ಸಂಸ್ಥೆಯ ಪದಾ ಧಿಕಾರಿಗಳನ್ನು ಆಹ್ವಾನಿಸಿ ತಮ್ಮ ತಂದೆಯ ಹೆಸರಿನಲ್ಲಿ ನಡೆಯುತ್ತಿರುವ ಶಾಲೆ ಇನ್ನು ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಹೊಂದಬೇಕು. ಇದರಿಂದ ಹತ್ತಾರು ಜನರಿಗೆ ಪ್ರಯೋಜನವಾಗಬೇಕು ಎಂದು ಹಾರೈಸಿದ್ದನ್ನು ನೆನಪಿಸಿಕೊಂಡು ಗದ್ಗದಿತರಾದರು.

ಈ ಸಂದರ್ಭದಲ್ಲಿ ಶಾಲೆ ಮುಖ್ಯ ಗುರುಗಳಾದ ಕುಲಷ್ಮಾ, ಶಿಕ್ಷಕಿಯರಾದ ಮಮತಾ, ಜಾನಕಿ, ಮೀನಾಕ್ಷಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿವಿಧೆಡೆ ಶ್ರದ್ಧಾಂಜಲಿ: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ನಿಧನಕ್ಕೆ ಪಟ್ಟಣದ ಅಖೀಲ ಕರ್ನಾಟಕ ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ ಮತ್ತು ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿಮಾನಿಗಳಸೇವಾ ಸಮಿತಿ ಸದಸ್ಯರು ಶುಕ್ರವಾರ ಸಂಜೆ ಪುನೀತ್‌ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಎಚ್‌. ರಾಮಚಂದ್ರ, ಗೌರವಾಧ್ಯಕ್ಷ ಚಿನ್ನಯಲ್ಲಪ್ಪ, ಪದಾಧಿ  ಕಾರಿಗಳಾದ ಸೋಫಿಯಾಸಾಬ್‌, ಪವನ್‌ಕುಮಾರ್‌, ಪಾಂಡುರಂಗ, ಮನೋಹರ್‌, ಶಂಕರ್‌, ವಿ. ಶೇಖರ್‌, ಸಣ್ಣ ಪರಶುರಾಮ್‌, ರಾಮಾಂಜಿನಿ, ಬಾಬು, ಪರಶುರಾಮ್‌, ಜಂಬಣ್ಣ, ಕರಿಯಪ್ಪ, ಗೋವಿಂದ ಇದ್ದರು.

Advertisement

ಕಂಪ್ಲಿ ಕಿಯೋನಿಕ್ಸ್‌ ಕಂಪ್ಯೂಟರ್‌ ಕೇಂದ್ರದಲ್ಲಿ ಡಾ| ಎಪಿಜೆ ಅಬ್ದುಲ್‌ ಕಲಾಂ ಟ್ರಸ್ಟ್‌ ವತಿಯಿಂದ ನಟ ಪುನೀತ್‌ ರಾಜಕುಮಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷರಾದ ಎಂ.ಎಸ್‌. ಮುನ್ನಾ, ಸಂಚಾಳಕ ಬಡಿಗೇರ್‌ ಜಿಲಾನ್‌, ಪ್ರಮುಖರಾದ ರೇಣುಕಮ್ಮ, ಶ್ವೇತಾ, ಕಲಾಂಜಲಿ, ಉಮಾ, ತೌಫಿಕ್‌ ಇದ್ದರು. ವಿವಿಧ ಶಾಲಾ ಕಾಲೇಜುಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next