Advertisement
ಆದರೆ, ಅಭಿಮಾನಿಗಳು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ತಮ್ಮ ನೆಚ್ಚಿನ ನಟನಿಲ್ಲ ಎಂಬ ನೋವನ್ನು ಮನಸ್ಸಲ್ಲಿಟ್ಟುಕೊಂಡೇ ಪುನೀತ್ ಅವರ ಹುಟ್ಟುಹಬ್ಬವನ್ನು ನಾನಾ ಕಾರ್ಯಗಳ ಮೂಲಕ ಆಚರಿಸಲು ನಿರ್ಧರಿಸಿದ್ದಾರೆ. ಅದರಂತೆ ಈಗಾಗಲೇ ಅಭಿಮಾನಿ ಗಳು ಸಿದ್ಧತೆ ನಡೆಸಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ಬಳಿ ಅಭಿಮಾನಿಗಳು ಪುನೀತ್ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ
Related Articles
Advertisement
4 ಸಾವಿರಕ್ಕೂ ಹೆಚ್ಚು ಶೋ: “ಜೇಮ್ಸ್’ ಚಿತ್ರ ಇಂದು ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಶೋಗೆ ಸಾಕ್ಷಿಯಾಗಲಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿ ಪುನೀತ್ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಎಲ್ಲಾ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಚಿತ್ರ ಕಲೆಕ್ಷನ್ ವಿಷಯದಲ್ಲೂ ದಾಖಲೆ ಬರೆಯಲಿದೆ.
ರಾಘಣ್ಣ- ಶಿವಣ್ಣ ನಟನೆ: “ಜೇಮ್ಸ್’ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ. ಸಹಜವಾಗಿಯೇ ಅಭಿಮಾನಿಗಳಿಂದ ಹಿಡಿದು ಅವರ ಕುಟುಂಬ ವರ್ಗಕ್ಕೆ ಇದು ಅಪ್ಪು ಅವರ ಕೊನೆಯ ಸಿನಿಮಾ ಎಂಬುದನ್ನು ನೆನೆಸಿಕೊಂಡರೆ ಹೃದಯ ಭಾರವಾಗುತ್ತದೆ. ಈಗ ಅಪ್ಪು ಅವರ ಕೊನೆಯ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ಮೂವರು ಅಣ್ಣ ತಮ್ಮಂದಿರು ಒಂದೇ ಚಿತ್ರದಲ್ಲಿ ನಟಿಸಬೇಕೆಂಬ ಆಲೋಚನೆ ಇತ್ತು. ಆದರೆ, ಅದು ಕೂಡಿಬರಲಿಲ್ಲ.
ಹಾಗಾಗಿ, ಈಗ ಪುನೀತ್ ನಟನೆಯ “ಜೇಮ್ಸ್’ ಸಿನಿಮಾದಲ್ಲಿ ಶಿವಣ್ಣ ಹಾಗೂ ರಾಘಣ್ಣ ಇಬ್ಬರೂ ನಟಿಸಿದ್ದು, ಒಂದು ವಿಶೇಷವಾದ ಪಾತ್ರ ಮಾಡಿದ್ದಾರೆ. ಈ ಮೂಲಕ “ಜೇಮ್ಸ್’ನಲ್ಲಿ ಚಿತ್ರ ಮೂವರು ಒಟ್ಟಾಗಿ ನಟಿಸಿದಂತಾಗಿದೆ. ಇಂದು ಸ್ಯಾಂಡಲ್‌ವುಡ್‌ನಿಂದ “ಜೇಮ್ಸ್’ ಒಂದೇ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೆ ಕಾರಣ “ಜೇಮ್ಸ್’. ಪುನೀತ್‌ರಾಜ್‌ಕುಮಾರ್ ಮೇಲಿನ ಪ್ರೀತಿ ಹಾಗೂ ಗೌರವದಿಂದ ಪುನೀತ್‌ರಾಜ್ ಕನ್ನಡದಿಂದ ಯಾವುದೇ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಈ ಮೂಲಕ ಸ್ಯಾಂಡಲ್‌ವುಡ್‌ನಿಂದ ಅಂದು “ಜೇಮ್ಸ್’ ಒಂದೇ ಚಿತ್ರ ತೆರೆಕಾಣಲಿದೆ.