Advertisement

ಪ್ರೀತಿಯಿಂದ ಎಲವನ್ನೂ ಗೆದ್ದವರು ಪುನೀತ್‌

02:14 PM Mar 23, 2022 | Team Udayavani |

ಗುಳೇದಗುಡ್ಡ: ವ್ಯಕ್ತಿಗೆ ಬೆಲೆ ಸಿಗುವುದು ಅವರ ಆದರ್ಶಗಳಿಗೆ, ಸಮಾಜಸೇವೆ ಮತ್ತು ಸಾಧನೆಗೆ ಇದರಿಂದ ವ್ಯಕ್ತಿ ಭೌತಿಕವಾಗಿ ನಮ್ಮಿಂದ ದೂರವಾದರೂ ಅಮರರಾಗಿರುತ್ತಾರೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

Advertisement

ಪಟ್ಟಣದ ಸಾಲೇಶ್ವರ ತೇರಿನ ಮನೆಯ ಮುಂದೆ ಹಾಕಿದ ಭವ್ಯ ವೇದಿಕೆಯಲ್ಲಿ ಪುನೀತ್‌ ರಾಜಕುಮಾರ ಅವರ ಅಭಿಮಾನಿ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುನೀತ್‌ ಜನ್ಮದಿನದ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುನೀತ್‌ ಬದುಕಿದ್ದಾಗ ಅಭಿಮಾನಿಗಳಿಗೆ ಅವರೊಬ್ಬ ನಟರಾಗಿ ಕಂಡ ಅವರು, ನಮ್ಮಿಂದ ದೂರವಾದ ಕ್ಷಣದಿಂದ ಅವರೊಬ್ಬ ಸಮಾಜಸೇವಕ, ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಎಂಬುದು ಇಡೀ ಜಗತ್ತೇ ಕಣ್ಣೀರಿಟ್ಟಿತ್ತು ಎಂದು ಹೇಳಿದರು.

ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ. ಪುನೀತ್‌ ಪ್ರೀತಿಯಿಂದ ಎಲ್ಲವನ್ನು ಗೆದ್ದವರು, ವ್ಯಕ್ತಿ ಗೆಲ್ಲುವುದಿಲ್ಲ, ವ್ಯಕ್ತಿತ್ವ ಗೆಲ್ಲುತ್ತದೆ ಎಂದು ಹೇಳಿದರು.

ಪುರಸಭೆ ಸದಸ್ಯ ಉಮೇಶ ಹುನಗುಂದ, ಚಂದ್ರಕಾಂತ ಶೇಖಾ ಮಾತನಾಡಿದರು. ಪ್ರಕಾಶ ವಾಳದುಂಕಿ, ಪುರಸಭೆ ಸದಸ್ಯರಾದ ಜ್ಯೋತಿ ಗೋವನಕೊಪ್ಪ. ಸಂತೋಷ ನಾಯನೇಗಲಿ, ಸುಮಿತ್ರಾ ಕೊಡಬಳಿ, ರಾಜೇಶ್ವರಿ ಉಂಕಿ, ಹಿರಿಯರಾದ ರವಿ ಗೌಡ್ರ, ಗಣೇಶ ಹೆಗಡೆ, ಗೌರವೀಶಪ್ಪ ಭಾವಿ, ಪುಂಡಲೀಕ ಕಂಠಿ, ಮಂಜುನಾಥ ರಾಜನಾಳ, ಬಸವರಾಜ ಗೌಡರ, ರಾಘು ಕೆಂಚಗಳ್ಳಿ, ಸಚೀನ ರಾಮಪುರ ಇತರರು ಇದ್ದರು.

ಗೀತ ನಮನ: ಕಾರ್ಯಕ್ರಮದ ನಂತರ ಗುಳೇದಗುಡ್ಡ ಜ್ಯೋತಿ ಅವರ ಕಲಾತಂಡದ ವತಿಯಿಂದ ಪುನೀತ್‌ ಅವರಿಗೆ ಗೀತ ನಮನ ಸಂಗೀತ ಕಾರ್ಯಕ್ರಮ ನಡೆಯಿತು. ಜ್ಯೋತಿ ಗುಳೇದಗುಡ್ಡ, ಜ್ಯೂ.ರವಿಚಂದ್ರನ್‌, ಜ್ಯೂ. ವಿಷ್ಣುವರ್ಧನ, ನೃತ್ಯಗಾರ್ತಿ ಕಲ್ಪನಾ ಬೆಂಗಳೂರು ಅವರ ಹಾಡು ನೃತ್ಯ ರಂಜಿಸಿದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next