ದಾವಣಗೆರೆ: ಇತ್ತೀಚೆಗೆ ಅಸ್ತಂಗತರಾದ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅವರಿಗೆ ಇಲ್ಲಿಯ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ’ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಕೋಶಾಧ್ಯಕ್ಷ ಮಂಜುನಾಥಸ್ವಾಮಿ ಮಾತನಾಡಿ, ದೈಹಿಕವಾಗಿ ನಮ್ಮನ್ನು ಅಗಲಿದ ಅಪ್ಪು ಮಾನವೀಯ ಮೌಲ್ಯಗಳ ಸಮಾಜಸೇವೆಯೊಂದಿಗೆ ವಿಶಿಷ್ಟ ವ್ಯಕ್ತಿತ್ವದೊಂದಿಗೆ ಕೋಟಿ, ಕೋಟಿ ಜನರ ಅವರ ಅಭಿಮಾನಿಗಳ ಹೃದಯಲ್ಲಿ ನೆಲೆಸಿದ್ದಾರೆ. ಅವರ ಈ ಆದರ್ಶ ಗುಣಗಳು ಇತರ ನಟ-ನಟಿಯರಿಗೆ, ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕರಲ್ಲೋರ್ವರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಪುನಿತ್ ಚಲನಚಿತ್ರ ನಟನೆಗಷ್ಟೇ ಸೀಮಿತವಾಗದ ಅವರ ಜೀವನ ಸಮಾಜಮುಖೀ ಸತ್ಕಾರ್ಯ, ಸಾಧನೆ ಒಂದು ದಾಖಲೆ ಎಂದರು. ಒಂದು ನಿಮಿಷ ಮೌನಾಚರಣೆ ಮಾಡಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಆರ್.ಟಿ. ಮೃತ್ಯುಂಜಯ, ಗಜಾನನ ಭೂತೆ, ಸುರಭಿ ಶಿವಮೂರ್ತಿ, ಭಾವನ್ನಾರಾಯಣ, ಮಲ್ಲಿಕಾರ್ಜುನ ಮುಂತಾದವರು ಇದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಜಿ. ಜಗದೀಶ್ ಸ್ವಾಗತಿಸಿ, ವಂದಿಸಿದರು.
ಶದ್ಧಾಂಜಲಿ
ಜಗಳೂರು: ಕನ್ನಡದ ಯುವ ರತ್ನ ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್ ಅವರು ಅಕಾಲಿಕ ಮರಣದ ಅಗಲಿಗೆಯಿಂದ ಜಗಳೂರು ಪಟ್ಟಣ ಅಲ್ ಫಾತೀಮಾ ಸಂಸ್ಥೆಯ ಕಚೇರಿ ಆವರಣದಲ್ಲಿ ಅಲ್ ಫಾತೀಮಾ ಸಮಸ್ಥೆ ಹಾಗೂ ಲಯನ್ ಕ್ಲಬ್ ಇವರ ವತಿಯಿಂದ ಶದ್ಧಾಂಜಲಿ ಸಲ್ಲಿಸಿದರು. ಆಲ್ ಫಾತೀಮ ಸಮಸ್ಯೆ ಕಾರ್ಯದರ್ಶಿ ಶಾಹೀನ ಬೇಗಂ, ಕರವೇ ತಾಲೂಕು ಅಧ್ಯಕ್ಷ ಎಂ.ವೈ. ಮಹಾತೇಶ್, ವಿದ್ಯಾರ್ಥಿ ಘಟಕಗ ಅಧ್ಯಕ್ಷ ಎಂ.ಡಿ. ಅಬ್ದುಲ್ ರಖೀಬ್, ಜಗಳೂರು ಗೊಲ್ಲರಹಟ್ಟಿ ಗ್ರಾಮ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ಎಫ್‌ಎಸ್‌ಐ ವ್ಯವಸ್ಥಾಪಕ ಶಂಕರ್, ಮುಖಂಡರಾ ಶಂಸು œನ್, ಶಿವಣ್ಣ, ಮೌಲ, ಟೈಲರಿಂಗ್ ಶಿಕ್ಷಣಕ್ಕಿ ಮಂಜುಳಾ, ಕಂಪ್ಯೂಟರ್ ಶಿಕ್ಷಕಿ ತ್ರಿವೇಣಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.