Advertisement

“ಸಲಗ’ಫ‌ಸ್ಟ್‌ಲುಕ್‌ ರಿಲೀಸ್‌ ಮಾಡಿದ ಪುನೀತ್‌

12:05 PM Sep 02, 2019 | Lakshmi GovindaRaj |

“ದುನಿಯಾ’ ವಿಜಯ್‌ ಇದೇ ಮೊದಲ ಸಲ ನಿರ್ದೇಶನಕ್ಕಿಳಿದಿರುವುದು ಎಲ್ಲರಿಗೂ ಗೊತ್ತಿದೆ. ನಿರ್ದೇಶನದ ಜೊತೆಗೆ ನಾಯಕರಾಗಿಯೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಒಂದಷ್ಟು ಚಿತ್ರೀಕರಣ ಮುಗಿಸಿರುವ “ದುನಿಯಾ’ ವಿಜಯ್‌, ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಪುನೀತ್‌ರಾಜಕುಮಾರ್‌ ಅವರಿಂದ ಬಿಡುಗಡೆ ಮಾಡಿಸಿದ್ದಾರೆ. ಲಾಂಗ್‌ ಹಿಡಿದು ರಗಡ್‌ ಲುಕ್‌ನಲ್ಲಿ ಕುಳಿತು ಕೊಟ್ಟಿರುವ ಪೋಸ್ಟರ್‌ ನೋಡಿ, ಬಿಡುಗಡೆ ಮಾಡಿದ ಪುನೀತ್‌ರಾಜಕುಮಾರ್‌, “ಸಲಗ’ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

Advertisement

“ದುನಿಯಾ’ ವಿಜಯ್‌ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಹಾಗಾಗಿ ಅವರು ಭರ್ಜರಿಯಾಗಿಯೇ ತಯಾರಿ ಮಾಡಿಕೊಂಡು ಫೀಲ್ಡ್‌ಗಿಳಿದಿದ್ದಾರೆ. ಮೊದಲ ಬಾರಿಗೆ ನಿರ್ದೇಶಕನ ಪಟ್ಟ ಅಲಂಕರಿಸಿರುವುದರಿಂದ ಸಹಜವಾಗಿಯೇ “ದುನಿಯಾ’ ವಿಜಯ್‌ ಅವರಿಗೆ ಇದು ಚಾಲೆಂಜ್‌. ಕಾರಣ, ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ.

ಹಾಗಾಗಿ, ಎರಡನ್ನೂ ಸವಾಲಾಗಿಯೇ ಸ್ವೀಕರಿಸಿರುವ “ದುನಿಯಾ’ ವಿಜಯ್‌, ಒಳ್ಳೆಯ ತಂಡವನ್ನು ಕಟ್ಟಿಕೊಂಡು ಪೂರ್ವ ತಯಾರಿಯೊಂದಿಗೆ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇದೊಂದು ಪಕ್ಕಾ ಮಾಸ್‌ ಚಿತ್ರವಾಗಿದ್ದು, ಚಿತ್ರದ ಕಥಾಹಂದರದ ಜವಾಬ್ದಾರಿಯನ್ನು “ದುನಿಯಾ’ ವಿಜಯ್‌ ವಹಿಸಿಕೊಂಡಿದ್ದಾರೆ. ಇನ್ನು, ಕೆ.ಪಿ.ಶ್ರೀಕಾಂತ್‌ ಚಿತ್ರಕ್ಕೆ ನಿರ್ಮಾಪಕರಾಗಿದ್ದು, ಶಿವಸೀನ ಛಾಯಾಗ್ರಹಣವಿದೆ. ಚರಣ್‌ರಾಜ್‌ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ “ದುನಿಯಾ’ ವಿಜಯ್‌ ಅವರಿಗೆ ಜೋಡಿಯಾಗಿ ಸಂಜನಾ ಆನಂದ್‌ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next