ಚಾಮರಾಜನಗರ: ಪುನೀತ್ ತವರು ಜಿಲ್ಲೆಯಾದ ಚಾಮರಾಜ ನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡಬೇಕು ಹಾಗೂ ನೂತನ ಕಲಾಮಂದಿರಕ್ಕೆ ಡಾ.ರಾಜ್ ಕುಮಾರ್ ಅವರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಗರದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಪುನೀತ್ ಅಭಿಮಾನಿ ಬಳಗ, ಈಶ್ವರಿ ಸಂಗೀತ ಶಾಲೆ, ಆಜಾದ್ ಹಿಂದೂ ಸೇನೆ, ಡಾ. ಅಂಬೇಡ್ಕರ್ ಸೇನೆ, ವೀರಶೈವ ಮಹಾಸಭಾ, ಭಾರತೀಯ ಪರಿವರ್ತನಾ ಸಂಘ, ಅಪ್ಪುಬ್ರಿಗೇಡ್, ಶಿವಸೈನ್ಯ, ಕನ್ನಡಪರ ಸಂಘಟನೆಗಳ ಒಕ್ಕೂಟ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಒಕ್ಕೂಟ, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸಂಘ ಸೇರಿ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಮಾವೇಶಗೊಂಡು ಅಲ್ಲಿಂದ ಮೌನ ಮೆರವಣಿಗೆ ಹೊರಟು ಭುವನೇಶ್ವರಿವೃತ್ತ, ಬಿ. ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಧರಣಿ ನಡೆಸಿದರು. ಪುನೀತ್ ಚಾಮರಾಜನಗರ ಜಿಲ್ಲೆಯವರು.
ಇದನ್ನೂ ಓದಿ:- ಕುಂಚಾವರಂ ಗಡಿಭಾಗದ ತಾಂಡಾಗಳ ಯುವತಿಯರಿಂದ ಲಂಬಾಣಿ ನೃತ್ಯದ ಮೂಲಕ ದೀಪಾವಳಿ ಆಚರಣೆ
ಜಿಲ್ಲೆಯ ಸಾಂಸ್ಕೃತಿಕ ರಾಯಭಾರಿಯಾಗಿದ್ದರು. ರಾಷ್ಟ್ರಪ್ರಶಸ್ತಿ ಪಡೆದ ಕಲಾವಿದ. ನಟನೆಯಿಂದಾಚೆ ಅವರು ಸಾವಿರಾರು ವಿದ್ಯಾರ್ಥಿಗಳಿಗೆ, ಬಡ ಜನರಿಗೆ ನೆರವು ನೀಡಿದ್ದಾರೆ. ಅವರು ಅಕಾಲಿಕವಾಗಿ ನಿಧನರಾದಾಗ ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳು ಅದನ್ನು ಬಿತ್ತರಿಸಿದವು. ಇಂಥ ಪ್ರಸಿದ್ಧ ಕಲಾವಿದನ ಹೆಸರನ್ನು ಅವರ ತವರು ಜಿಲ್ಲೆಯ ಜಿಲ್ಲಾ ಕೇಂದ್ರವಾದ ಚಾಮರಾಜನಗರದ ಡೀವಿಯೇಷನ್ ರಸ್ತೆಗೆ ನಾಮಕರಣ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಡೀವಿಯೇಷನ್ ರಸ್ತೆಗೆ ಪುನೀತ್ ಹೆಸರಿಡಲು ಕ್ರಮ ವಹಿಸಲಾಗುವುದು. ನಗರಸಭೆಯಲ್ಲಿ ಈ ಬಗ್ಗೆ ಅನುಮೋದನೆ ಪಡೆಯಬೇಕಿದೆ. ಕಲಾಮಂದಿರಕ್ಕೆ ಡಾ. ರಾಜ್ ಹೆಸರು ಇಡುವುದು ಈಗಾಗಲೇ ನಿಶ್ಚಿತವಾಗಿದೆ ಎಂದರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಶಿವರಾಜ್, ಸುರೇಶ್, ಚಂದ್ರಶೇಖರ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಸಿಂಹ ಚಿತ್ರಮಂದಿರದ ಮಾಲಿಕ ಎ.ಜಯಸಿಂಹ, ಈಶ್ವರಿ ಸಂಗೀತ ಶಾಲೆ ಅಧ್ಯಕ್ಷ ವೆಂಕಟೇಶ್, ರಂಗವಾಹಿನಿ ಅಧ್ಯಕ್ಷ ನರಸಿಂಹಮೂರ್ತಿ, ರಂಗಜಂಗಮ ಅಧ್ಯಕ್ಷ ಮಹೇಶ್, ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಭಾರತೀಯ ಪರಿವರ್ತನಾ ಸಂಘದ ಅಧ್ಯಕ್ಷ ಆಲೂರುಮಲ್ಲು, ಬಿಜೆಪಿ ಮುಖಂಡ ನಟರಾಜ್, ಮಾರ್ಕೇಟ್ ಗಿರೀಶ್, ಡಾ. ರಾಜ್‌ಕುಮಾರ್, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಎಲೆಕ್ಟ್ರಿಕಲ್ ಚಂದ್ರು, ಎಸ್.ಪಿ ಬಾಲಸುಬ್ರಹ್ಮಣ್ಯ ಸಂಘ ಶಿವಣ್ಣ, ಬುಲೆಟ್ ಚಂದ್ರು, ಅಜಾದ್ ಹಿಂದೂ ಸೇನೆ ಅಧ್ಯಕ್ಷ ಪೃಥ್ವಿರಾಜ್, ಜಿಲ್ಲಾಧ್ಯಕ್ಷ ಶಿವುವಿರಾಟ್. ಅವತಾರ್ ಡ್ರ್ಯಾನ್ಸ್ ಪ್ರವೀಣ್, ಚಾಮರಾಜೇಶ್ವರ ಕಲಾಬಳಗದ ಮನ, ಚಂದ್ರಶೇಖರ್, ಟೌನ್ ಅಧ್ಯಕ್ಷ ಶಿವು, ಪುನೀತ್ ಅಭಿಮಾನಿ ಬಳಗದ ಮಣಿಕಂಠ, ಅರ್ಜುನ್, ನವೀನ್ ಕ್ವಾಲಿಟಿ, ಅಜೇಯ್, ಬುಲೆಟ್ ಚಂದ್ರು, ನಗು, ಬಾಬು, ವಾಸು,.
ಅಂಬೇಡ್ಕರ್ ಸೇನೆಯ ಅಧ್ಯಕ್ಷ ಗಣೇಶ್ ಪ್ರಸಾದ್ , ನಟ, ವೆಂಕಿ, ಮಹೇಶ್ ಮಾರ್ಕೆಟ್ ಕ್ಯಾಂಟೀನ್ ಮಂಜು ಉಪ್ಪಾರ ಸಂಘಟನೆಗಳ ಕಾರ್ಯಕರ್ತರು, ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ಸಂಘದ ಸದಸ್ಯರು ಹಾಗೂ ರಾಜರತ್ನ ಅಭಿಮಾನಿಗಳು ಮತ್ತಿತರರು ಹಾಜರಿದ್ದರು.