Advertisement

ಪುನೀತ್ ರಾಜ್ ಕುಮಾರ್ ಫ್ಲೆಕ್ಸ್ ಹರಿದವನಿಗೆ ಹಿಗ್ಗಾಮುಗ್ಗಾ ಗೂಸಾ

11:54 AM Nov 22, 2021 | Team Udayavani |

ಚಿಕ್ಕಮಗಳೂರು : ಇತ್ತೀಚೆಗೆ ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಫೋಟೋ ಹರಿದ ಯುವಕನೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.

Advertisement

ಫ್ಲೆಕ್ಸ್ ಹರಿಯುತ್ತಿದುದನ್ನು ಕಂಡು ರೊಚ್ಚಿಗೆದ್ದ ಯುವಕರು ಸ್ಥಳದಲ್ಲೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ಹರಿದ ಫ್ಲೆಕ್ಸನ್ನು ಯುವಕನ ಮೇಲೆ ಹೊದಿಸಿ ಠಾಣೆಗೆ ಎಳೆದು ತಂದಿದ್ದಾರೆ.

ಆಕ್ರೋಶದಲ್ಲಿದ್ದ ಯುವಕರು ರಸ್ತೆಯುದ್ಧಕ್ಕೂ ಹೊಡೆದುಕೊಂಡೇ ಯುವಕನನ್ನು ಠಾಣೆಗೆ ಎಳೆದು ತಂದಿದ್ದಾರೆ.

ಫ್ಲೆಕ್ಸ್ ಹರಿಯುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ಚಿಕ್ಕಮಗಳೂರು ನಗರ ಠಾಣೆಗೆ ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಈ ಕೃತ್ಯದ ವಿರುದ್ಧ ಸಾರ್ವಜನಿಕರು, ಅಪ್ಪು ಅಭಿಮಾನಿಗಳು ತೀವ್ರ ಆಕ್ರೋಶ ಹೊರ ಹಾಕಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next