Advertisement
ಅವರು ಪಿಂಪ್ರಿಯ ಹೊಟೇಲ್ ಸಾಯಿಸಾಗರ್‌ನ ಕ್ರಿಸ್ಟಲ್ ಕೋರ್ಟ್ ಸಭಾಗೃಹದಲ್ಲಿ ನಡೆದ ಪುಣೆ ತುಳು ಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯ ವಿದ್ಯಾನಿಧಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘವು ನೀಡಿದ ಕಿಂಚಿತ್ ವಿದ್ಯಾನಿಧಿಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ನೆರವು ನೀಡಿದ ಸಂಘಕ್ಕೆ ವಿಧೇಯರಾಗಬೇಕು. ನಾವು ತುಳುವರೆಂಬ ಅಭಿಮಾನದೊಂದಿಗೆ ನಮ್ಮ ತುಳು ಭಾಷೆ, ಸಂಸ್ಕೃತಿಯನ್ನು ಮಕ್ಕಳಿಗೂ ಅರುಹುವ ಕಾರ್ಯವನ್ನು ಮಾಡಬೇಕಾಗಿದೆ. ಕರ್ನಾಟಕದ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ಮೀಸಲಾತಿ ಕೋಟಾದಡಿಯಲ್ಲಿ ಸೀಟುಗಳು ಲಭ್ಯವಿದ್ದು ನಮ್ಮ ವಿದ್ಯಾರ್ಥಿಗಳು ಗಮನಿಸಬೇಕಾಗಿದೆ ಎಂದರು.
Related Articles
Advertisement
ಸಮಿತಿಯ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ಮಾತನಾಡಿ, ಸಮಿತಿಯ ಮಹತ್ವಾಕಾಂಕ್ಷೆಯ ವಿದ್ಯಾ ನಿಧಿಯನ್ನು ಬಡ ಮಕ್ಕಳಿಗೆ ನೀಡುವಲ್ಲಿ ಗಣ್ಯ ದಾನಿಗಳ, ಸಮಿತಿ ಪದಾಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ವಿದ್ಯೆ ಎಂಬುವುದು ನಮ್ಮ ಜೀವನವನ್ನು ಸಮೃದ್ಧಗೊಳಿಸುವ ಸಾಧನವಾಗಿದೆ. ಆದುದರಿಂದ ಮಕ್ಕಳು ವಿದ್ಯಾವಂಚಿತರಾಗಬಾರದೆಂಬ ನೆಲೆಯಲ್ಲಿ ನಮ್ಮ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲ ಜಾತಿ-ಮತಗಳ ಭೇದವಿಲ್ಲದೆ ನಾವೆಲ್ಲ ತುಳುನಾಡಿನ ಬಾಂಧವರೆನ್ನುವ ಅಭಿಮಾನದಿಂದ ನಾವೆÇÉಾ ತುಳು ಕೂಟದ ಈ ಸಮಿತಿಯ ಮೂಲಕ ಒಗ್ಗಟ್ಟಾಗಿರುವುದೇ ನಮ್ಮ ಹೆಮ್ಮೆಯಾಗಿದೆ. ಭವಿಷ್ಯದಲ್ಲಿಯೂ ನಿಮ್ಮೆಲ್ಲ ಹೃದಯವಂತರ ಸಹಕಾರ ಸಂಘಕ್ಕಿರಲಿ ಎಂದರು.
ವೇದಿಕೆಯಲ್ಲಿ ಸಮಿತಿ ಉಪ ಕಾರ್ಯಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ, ಹರೀಶ್ ಶೆಟ್ಟಿ ಕುರ್ಕಾಲ್, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಚಾಕಣ್, ಕಾರ್ಯದರ್ಶಿ ನಿತಿನ್ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ ಸಂತೋಷ್ ಕಡಂಬ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿ ಮುನಿಯಾಲ್ ಉಪಸ್ಥಿತರಿದ್ದರು.
ಅತಿಥಿಗಳ ಹಸ್ತದಿಂದ ವಿದ್ಯಾನಿಧಿಯನ್ನು ಮಕ್ಕಳಿಗೆ ನೀಡಲಾಯಿತು. ಅತಿಥಿಗಳನ್ನು ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು. ದಿನೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ನೂತನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಶೆಟ್ಟಿ ನಿಟ್ಟೆ ವಂದಿಸಿದರು. ಸಂತೋಷ್ ಶೆಟ್ಟಿ ಪೆರ್ಡೂರು ಹಾಗೂ ದಿನೇಶ್ ಶೆಟ್ಟಿ ಉಜಿರೆ ಸ್ಥಳದಾನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.
ಪುಣೆ ತುಳುಕೂಟ ಪಿಂಪ್ರಿ-ಚಿಂಚ್ವಾಡ್ ಪ್ರಾದೇಶಿಕ ಸಮಿತಿ ಶೈಕ್ಷಣಿಕ ನೆರವು ವಿತರಣೆಪುಣೆ: ಪುಣೆ ತುಳು ಕೂಟದ ಪಿಂಪ್ರಿ ಚಿಂಚ್ವಾಡ್ ಪ್ರಾದೇಶಿಕ ಸಮಿತಿಯು ಕಳೆದ 7 ವರ್ಷಗಳಿಂದ ಪಿಂಪ್ರಿ ಚಿಂಚ್ವಾಡ್ ಪರಿಸರದ ತುಳುನಾಡಿನ ಜನರನ್ನು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳೊಂದಿಗೆ ಬೆಸೆಯುತ್ತಾ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವನ್ನು ಕಲ್ಪಿಸುತ್ತಾ ಮಾದರಿ ಸಮಿತಿಯಾಗಿ ಗುರುತಿಸಿಕೊಂಡಿದೆ. ಶಿಕ್ಷಣವೆಂಬುವುದು ಜೀವನದ ಅಭ್ಯುದಯಕ್ಕೆ ಮಹತ್ವದ ಕೊಡುಗೆಯನ್ನು ಕಲ್ಪಿಸುತ್ತದೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ವಿದ್ಯಾವಂತ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ ಸರಕಾರದಿಂದ ಎಲ್ಲರಿಗೂ ಉಚಿತ ಶಿಕ್ಷಣ ನೀತಿ ರೂಪಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಪುಣೆ ತುಳು ಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಅವರು ಅಭಿಪ್ರಾಯಪಟ್ಟರು. ಅವರು ಪಿಂಪ್ರಿಯ ಹೊಟೇಲ್ ಸಾಯಿಸಾಗರ್‌ನ ಕ್ರಿಸ್ಟಲ್ ಕೋರ್ಟ್ ಸಭಾಗೃಹದಲ್ಲಿ ನಡೆದ ಪುಣೆ ತುಳು ಕೂಟದ ಪಿಂಪ್ರಿ-ಚಿಂಚಾÌಡ್ ಪ್ರಾದೇಶಿಕ ಸಮಿತಿಯ ವಿದ್ಯಾನಿಧಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘವು ನೀಡಿದ ಕಿಂಚಿತ್ ವಿದ್ಯಾನಿಧಿಯನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ನೆರವು ನೀಡಿದ ಸಂಘಕ್ಕೆ ವಿಧೇಯರಾಗಬೇಕು. ನಾವು ತುಳುವರೆಂಬ ಅಭಿಮಾನದೊಂದಿಗೆ ನಮ್ಮ ತುಳು ಭಾಷೆ, ಸಂಸ್ಕೃತಿಯನ್ನು ಮಕ್ಕಳಿಗೂ ಅರುಹುವ ಕಾರ್ಯವನ್ನು ಮಾಡಬೇಕಾಗಿದೆ. ಕರ್ನಾಟಕದ ವೈದ್ಯಕೀಯ ವಿಶ್ವವಿದ್ಯಾಲಯಗಳಲ್ಲಿ ತುಳು ಭಾಷಿಕ ವಿದ್ಯಾರ್ಥಿಗಳಿಗೆ ಮೀಸಲಾತಿ ಕೋಟಾದಡಿಯಲ್ಲಿ ಸೀಟುಗಳು ಲಭ್ಯವಿದ್ದು ನಮ್ಮ ವಿದ್ಯಾರ್ಥಿಗಳು ಗಮನಿಸಬೇಕಾಗಿದೆ ಎಂದರು. ಅತಿಥಿಗಳಾಗಿ ಉಪಸ್ಥಿತರಿದ್ದ ಪಿಂಪ್ರಿ-ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎರ್ಮಾಳ್ ಸೀತಾರಾಮ ಶೆಟ್ಟಿ ಅವರು ಮಾತನಾಡಿ, ಪುಣೆ ತುಳು ಕೂಟದ ಪಿಂಪ್ರಿ-ಚಿಂಚಾÌಡ್‌ನ ಈ ಪ್ರಾದೇಶಿಕ ಸಮಿತಿಯು ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ನೀಡಿ ಉತ್ತಮ ಕಾರ್ಯವನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳು ಈ ಸಂಘದ ನೆರವನ್ನು ವಿದ್ಯೆಗೆ ಉಪಯೋಗಿಸಿಕೊಂಡು ನೆರವು ನೀಡಿದ ಸಂಘವನ್ನು ನೆನಪಿಟ್ಟುಕೊಂಡು ಭವಿಷ್ಯದಲ್ಲಿ ಯಶಸ್ಸನ್ನು ಪಡೆದು ಸಂಘದ ಹಿತವನ್ನು ಬಯಸುವಂತಾಗಬೇಕು ಎಂದರು. ಪಿಂಪ್ರಿ -ಚಿಂಚಾÌಡ್ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷರಾದ ಕೆ. ಪದ್ಮನಾಭ ಶೆಟ್ಟಿ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ವಿದ್ಯೆ ಪಡೆಯಬೇಕಾದರೆ ಬಹಳ ಕಷ್ಟಪಡಬೇಕಾಗಿತ್ತು. ಎಷ್ಟೋ ದೂರದ ಸ್ಥಳಗಳಿಗೆ ಹೋಗಿ ಕಲಿಯಬೇಕಾಗಿತ್ತು. ಆದರೆ ಆಧುನಿಕ ಪರಿಸ್ಥಿತಿಯಲ್ಲಿ ಅಷ್ಟೊಂದು ಕಷ್ಟದ ದಿನಗಳು ದೂರವಾಗಿದ್ದು ಸಂಘ ಸಂಸ್ಥೆಗಳೂ ವಿದ್ಯಾರ್ಥಿಗಳಿಗೆ ನೆರವು ನೀಡಿ ಪ್ರೋತ್ಸಾಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಬಡ ಮಕ್ಕಳಿಗೆ ವಿದ್ಯಾನಿಧಿಯನ್ನು ನೀಡಿ ಪ್ರೋತ್ಸಾಹಿಸುವ ಸಂಘದ ಕಾರ್ಯ ಪುಣ್ಯ ಕಾರ್ಯವಾಗಿದೆ. ಭವಿಷ್ಯದಲ್ಲಿ ಸಮಿತಿಯು ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡುವಂತಾಗಲಿ ಎಂದರು. ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ವಿದ್ಯೆ ಮಹತ್ವದ ಪಾತ್ರ ವಹಿಸುತ್ತದೆ. ಇಂದಿನ ದಿನಗಳಲ್ಲಿ ಯಾವುದೇ ವ್ಯವಹಾರಕ್ಕೂ ವಿದ್ಯೆ ಪ್ರಧಾನ ಪಾತ್ರ ವಹಿಸುತ್ತದೆ. ವಿದ್ಯೆಯೊಂದಿದ್ದರೆ ಜೀವನದಲ್ಲಿ ಯಶಸ್ಸು ನಮ್ಮದಾಗುವುದರಲ್ಲಿ ಸಂಶಯವಿಲ್ಲ. ಪುಣೆ ತುಳು ಕೂಟದ ಈ ಪ್ರಾದೇಶಿಕ ಸಮಿತಿಯು ಬಡ ಮಕ್ಕಳನ್ನು ಗುರುತಿಸಿ ಧನ ಸಹಕಾರ ನೀಡಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಅಭಿನಂದನೀಯವಾಗಿದೆ. ವಿದ್ಯಾರ್ಥಿಗಳು ಈ ನೆರವನ್ನು ಉಪಯೋಗಿಸಿಕೊಂಡು ಉತ್ತಮ ಯಶಸ್ಸನ್ನು ಕಾಣಲಿ ಎಂದರು. ಸಮಿತಿಯ ಕಾರ್ಯಾಧ್ಯಕ್ಷ ಶ್ಯಾಮ್ ಸುವರ್ಣ ಮಾತನಾಡಿ, ಸಮಿತಿಯ ಮಹತ್ವಾಕಾಂಕ್ಷೆಯ ವಿದ್ಯಾ ನಿಧಿಯನ್ನು ಬಡ ಮಕ್ಕಳಿಗೆ ನೀಡುವಲ್ಲಿ ಗಣ್ಯ ದಾನಿಗಳ, ಸಮಿತಿ ಪದಾಧಿಕಾರಿಗಳ ಸಹಕಾರದಿಂದ ಸಾಧ್ಯವಾಗಿದೆ. ವಿದ್ಯೆ ಎಂಬುವುದು ನಮ್ಮ ಜೀವನವನ್ನು ಸಮೃದ್ಧಗೊಳಿಸುವ ಸಾಧನವಾಗಿದೆ. ಆದುದರಿಂದ ಮಕ್ಕಳು ವಿದ್ಯಾವಂಚಿತರಾಗಬಾರದೆಂಬ ನೆಲೆಯಲ್ಲಿ ನಮ್ಮ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ತುಂಬುವ ಕಾರ್ಯವನ್ನು ಮಾಡುತ್ತಿದ್ದೇವೆ. ಎಲ್ಲ ಜಾತಿ-ಮತಗಳ ಭೇದವಿಲ್ಲದೆ ನಾವೆಲ್ಲ ತುಳುನಾಡಿನ ಬಾಂಧವರೆನ್ನುವ ಅಭಿಮಾನದಿಂದ ನಾವೆÇÉಾ ತುಳು ಕೂಟದ ಈ ಸಮಿತಿಯ ಮೂಲಕ ಒಗ್ಗಟ್ಟಾಗಿರುವುದೇ ನಮ್ಮ ಹೆಮ್ಮೆಯಾಗಿದೆ. ಭವಿಷ್ಯದಲ್ಲಿಯೂ ನಿಮ್ಮೆಲ್ಲ ಹೃದಯವಂತರ ಸಹಕಾರ ಸಂಘಕ್ಕಿರಲಿ ಎಂದರು. ವೇದಿಕೆಯಲ್ಲಿ ಸಮಿತಿ ಉಪ ಕಾರ್ಯಾಧ್ಯಕ್ಷರಾದ ದಿನೇಶ್ ಶೆಟ್ಟಿ ಉಜಿರೆ, ಹರೀಶ್ ಶೆಟ್ಟಿ ಕುರ್ಕಾಲ್, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಶೆಟ್ಟಿ ಚಾಕಣ್, ಕಾರ್ಯದರ್ಶಿ ನಿತಿನ್ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ ಸಂತೋಷ್ ಕಡಂಬ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುದೀಪ್ ಪೂಜಾರಿ ಮುನಿಯಾಲ್ ಉಪಸ್ಥಿತರಿದ್ದರು. ಅತಿಥಿಗಳ ಹಸ್ತದಿಂದ ವಿದ್ಯಾನಿಧಿಯನ್ನು ಮಕ್ಕಳಿಗೆ ನೀಡಲಾಯಿತು. ಅತಿಥಿಗಳನ್ನು ನೆನಪಿನ ಕಾಣಿಕೆಗಳನ್ನು ನೀಡಿ ಸತ್ಕರಿಸಲಾಯಿತು. ದಿನೇಶ್ ಶೆಟ್ಟಿ ಉಜಿರೆ ಸ್ವಾಗತಿಸಿದರು. ನೂತನ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ನಿತಿನ್ ಶೆಟ್ಟಿ ನಿಟ್ಟೆ ವಂದಿಸಿದರು. ಸಂತೋಷ್ ಶೆಟ್ಟಿ ಪೆರ್ಡೂರು ಹಾಗೂ ದಿನೇಶ್ ಶೆಟ್ಟಿ ಉಜಿರೆ ಸ್ಥಳದಾನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು