Advertisement

ಪುಣೆ ತುಳುಕೂಟ ವಾರ್ಷಿಕ ದಸರಾ ಪೂಜೆ ಮತ್ತು ಯಕ್ಷಗಾನ ಪ್ರದರ್ಶನ

03:33 PM Oct 23, 2018 | Team Udayavani |

ಪುಣೆ: ಪುಣೆ ತುಳುಕೂಟದ ವತಿಯಿಂದ ವಾರ್ಷಿಕ  ದಸರಾ ಪೂಜೆ ಹಾಗೂ ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾ ಗ ಹಾಗೂ ಯುವ ವಿಭಾಗದ ಸದಸ್ಯರಿಂದ  ಶಾಂಭವಿ ವಿಜಯ ಯಕ್ಷಗಾನ ಪ್ರದರ್ಶನವು ಅ. 18 ರಂದು ನಗರದ ಗರ್ವಾರೆ  ಕಾಲೇಜು ಸಭಾಂಗಣದಲ್ಲಿ ನಡೆಯಿತು. ಸಂಘದ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಸದಸ್ಯೆಯರು ದೀಪ ಬೆಳಗಿಸಿ ಆರತಿ ಬೆಳಗಿ  ಶ್ರೀದೇವಿಯ ಅಲಂಕೃತ ಮಂಟಪಕ್ಕೆ ಪೂಜೆ ಸಲ್ಲಿಸಿದರು. ಭತ್ತದ ತೆನೆಗಳನ್ನು ಪೂಜಿಸಿ ಸದಸ್ಯರಿಗೆ ಹಂಚಲಾಯಿತು.

Advertisement

ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು ಇವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ  ಚಂದ್ರಶೇಖರ ಶೆಟ್ಟಿ ನಿಟ್ಟೆ, ವಿವೇಕಾನಂದ ಶೆಟ್ಟಿ ಆವರ್ಸೆ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಸುಧಾಕರ ಶೆಟ್ಟಿ ಕೆಮೂ¤ರು, ಪುರುಷೋತ್ತಮ ಶೆಟ್ಟಿ, ಪುಣೆ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ನಾಟ್ಯಗುರು ಮದಂಗಲ್ಲು ಆನಂದ ಭಟ್‌, ಪುಣೆ ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಉಪಾಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ  ಶ್ರೀಧರ ಶೆಟ್ಟಿ ಕÇÉಾಡಿ, ಶಿಕ್ಷಣ ಮತ್ತು  ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ  ದಿವಾಕರ ಶೆಟ್ಟಿ ಮಾಣಿಬೆಟ್ಟು, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಯಶವಂತ್‌ ಶೆಟ್ಟಿ ತಾಮಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ಅಡ್ವೊಕೇಟ್‌ ರೋಹನ್‌ ಪಿ. ಶೆಟ್ಟಿ, ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭ ಸಂಘದ ಅಧ್ಯಕ್ಷ ತಾರಾನಾಥ ಕೆ ರೈ ಮೇಗಿನಗುತ್ತು ಮಾತನಾಡಿ, ಪ್ರತೀ ವರ್ಷ ನಮ್ಮ ಸಂಘದ ಮೂಲಕ ದಸರಾ ಪೂಜೆ, ತೆನೆ ಪೂಜೆ ಯನ್ನು ನಡೆಸುತ್ತಾ ಭತ್ತದ ತೆನೆಗಳನ್ನು ಸದಸ್ಯರಿಗೆ ಹಂಚುವ  ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ತುಳುನಾಡ  ಭಾಷೆ, ಸಂಸ್ಕೃತಿ, ಕಲಾಪ್ರಕಾರಗಳಿಗೆ ವಿಶೇಷ ಆಧ್ಯತೆ ನೀಡುತ್ತಾ ಬಂದಿರುವ ನಮ್ಮ ಸಂಸ್ಥೆ ಬಹಳಷ್ಟು ದಿನಗಳಿಂದ ನಮ್ಮದೇ ಸಂಘದ ಪದಾಧಿಕಾರಿಗಳು ಯಕ್ಷಗಾನ  ಕಲೆಯನ್ನು ಕಲಿತು ಪ್ರದರ್ಶನ ನೀಡಬೇಕೆಂಬ ಬಯಕೆಯನ್ನು ಹೊಂದಿ¨ªೆವು. ಅದು ಇಂದು ಈಡೇರಿರುವುದಕ್ಕೆ ಸಂತಸವಾಗುತ್ತಿದೆ. ಕಳೆದ ಒಂದು ತಿಂಗಳಿನಿಂದ ನಾಟ್ಯಗುರು ಮದಂಗಲ್ಲು ಆನಂದ ಭಟ್‌ ಹಾಗೂ ವಿಕೇಶ್‌ ರೈ ಶೇಣಿ ಸಂಘದ ಸದಸ್ಯರಿಗೆ ನಾಟ್ಯ ತರಬೇತಿಯನ್ನು ನೀಡಿ ಕಲಾವಿದರನ್ನಾಗಿ ಸಜ್ಜುಗೊಳಿಸಿ ಇಂದಿನ ಪ್ರದರ್ಶನಕ್ಕೆ ಸಹಕಾರ ನೀಡಿದ್ದರು. 

ಅಂತೆಯೇ ಶ್ರೀ  ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿಯ ಕಲಾವಿದರೆಲ್ಲರೂ ಸಹಕರಿಸಿ¨ªಾರೆ.  ಯಕ್ಷಗಾನದ  ತರಬೇತಿ ನೀಡುವ  ಮೂಲಕ ಹೊಸ ಹೊಸ ಕಲಾವಿದರು ಉದಯಿಸುವಂತಾದರೆ ಕಲೆ ಬೆಳೆಯಲು ಸಾಧ್ಯ. ಇಂದು ಕಲಾಭಿಮಾನಿಗಳಾಗಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ  ಎಲ್ಲರಿಗೂ ಕೃತಜ್ಞತೆಗಳು. ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರೆಲ್ಲರಿಗೂ ವಂದನೆಗಳು. ನಮ್ಮದೇ ಸಂಘವೆಂಬ ನೆಲೆಯಲ್ಲಿ ಮುಂದೆಯೂ ಪ್ರೋತ್ಸಾಹ ನೀಡಿ ಸಹಕಾರ ನೀಡಿ ಎಂದರು.

ಮನೋರಂಜನೆಯ ಅಂಗವಾಗಿ ಪುಣೆ ತುಳು ಕೂಟದ ಪದಾಧಿಕಾರಿಗಳು, ಮಹಿಳಾ ವಿಭಾ ಗದ ಸದಸ್ಯರು ಹಾಗೂ ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಕಲಾವಿದರು ಅಭಿನಯಿಸಿದ  ಯಕ್ಷ ಗುರು ಮದಂಗಲ್ಲು ಆನಂದ ಭಟ್‌ ಹಾಗೂ  ವಿಕೇಶ್‌  ರೈ ಶೇಣಿ  ನಿರ್ದೇಶನದಲ್ಲಿ ಶಾಂಭವಿ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು.

Advertisement

ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ್‌ ನಾಯ್ಕ… ಇರ್ದೆ, ಚೆಂಡೆಯಲ್ಲಿ ಶ್ರೀಧರ ಎಡಮಲೆ, ಮದ್ದಳೆಯಲ್ಲಿ ಬಾಲಕೃಷ್ಣ ಬೊಮ್ಮಾರು ಹಾಗೂ ಮುಮ್ಮೇಳದಲ್ಲಿ ಕಲಾವಿದರಾಗಿ ನಾಟ್ಯಗುರು ಮದಂಗಲ್ಲು ಆನಂದ್‌ ಭಟ್‌, ನವಿತಾ ಸಂಜೀವ ಪೂಜಾರಿ ಪೆರ್ಡೂರು, ಸಾನ್ವಿ ತಾರಾನಾಥ ರೈ, ಪ್ರಾಪ್ತಿ ಕಿರಣ್‌ ರೈ, ಸರಸ್ವತಿ ಕುಲಾಲ್‌ ಕಾಸರಗೋಡು, ರೀಶ್ಮಾ ರಮೇಶ್‌ ಶೆಟ್ಟಿ, ತಾರಾನಾಥ ಕೆ. ರೈ ಮೇಗಿನಗುತ್ತು, ಕಿರಣ್‌ ಬಿ. ರೈ ಕರ್ನೂರು, ವಾಸು ಕುಲಾಲ್‌ ವಿಟ್ಲ, ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ಜಗದೀಪ್‌ ಶೆಟ್ಟಿ, ಸುದರ್ಶನ್‌ ಪೂಜಾರಿ, ಗೀತಾ ದಿನೇಶ್‌ ಪೂಜಾರಿ ಶೀರೂರು, ನಯನಾ ಸಿ.  ಶೆಟ್ಟಿ ಅಮೂrರುಬಾಳಿಕೆ, ಪಾಂಗಾಳ ವಿಶ್ವನಾಥ ಶೆಟ್ಟಿ, ಪ್ರತೀûಾ ದಿನೇಶ್‌ ಪೂಜಾರಿ ಶೀರೂರು, ಸಹನಾ ಚಂದ್ರಶೇಖರ್‌ ಕುಲಾಲ್‌ ಕಾಸರಗೋಡು, ಶ್ರೇಯಾ ದಿವಾಕರ ಶೆಟ್ಟಿ ಮಾಣಿಬೆಟ್ಟು ಸಹಕರಿಸಿದರು. ಕಲಾವಿದರಾದ ವಾಸು ಕುಲಾಲ್‌ ವಿಟ್ಲ, ಸುಕೇಶ್‌ ಶೆಟ್ಟಿ ಎಣ್ಣೆಹೊಳೆ, ಜಗದೀಪ್‌ ಶೆಟ್ಟಿ, ಸುದರ್ಶನ್‌ ಪೂಜಾರಿ ಸಹಕರಿಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಯಕ್ಷಗಾನ ಮಂಡಳಿ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next