Advertisement

ಪುಣೆ ತುಳುಕೂಟ: ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

02:00 PM Aug 17, 2018 | |

ಪುಣೆ: ಪುಣೆ ತುಳುಕೂಟದ 21 ನೇ ವಾರ್ಷಿಕೋತ್ಸವ ಸಮಾರಂಭವು ಆ. 15 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನ, ಬಾಣೇರ್‌ ಇಲ್ಲಿ ಸಂಭ್ರಮದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸಂಘದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು ಇವರ ಘನ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ  ವಸಂತ್‌ ಶೆಟ್ಟಿ ಬೆಳ್ಳಾರೆ, ಗೌರವ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷರಾದ ಪ್ರೊ|  ತುಕಾರಾಮ ಪೂಜಾರಿ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅವರು ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ವೇದಿಕೆಯಲ್ಲಿ ಸಂಘದ ಸ್ಥಾಪಕಾಧ್ಯಕ್ಷ   ಜಯ ಕೆ. ಶೆಟ್ಟಿ, ಗೌರವಾಧ್ಯಕ್ಷ ಮಿಯ್ನಾರು ರಾಜ್‌ ಕುಮಾರ್‌ ಎಂ. ಶೆಟ್ಟಿ, ಉಪಾಧ್ಯಕ್ಷ  ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಪ್ರಧಾನ ಕಾರ್ಯದರ್ಶಿ ಕಿರಣ್‌ ಬಿ. ರೈ ಕರ್ನೂರು, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮ್‌ ಸುವರ್ಣ ಉಪಸ್ಥಿತರಿದ್ದರು.

ಈ ಸಂದರ್ಭ ಪಿಂಪ್ರಿ-ಚಿಂಚಾÌಡ್‌ ಪರಿಸರದ  ಖ್ಯಾತ ಉದ್ಯಮಿ, ಸಮಾಜ ಸೇವಕ, ಪಿಂಪ್ರಿ ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ ಹಾಗೂ ಕಾರ್ಗಿಲ್‌ ಯುದ್ಧದಲ್ಲಿ ಹೋರಾಡಿ ಅಂಗ ವೈಫಲ್ಯತೆಗೀಡಾಗಿ ನಿವೃತ್ತಿಯಾದ ಯೋಧ ಶ್ಯಾಮರಾಜ್‌ ಎಡನೀರು ಇವರುಗಳನ್ನು ಸಂಘದ ವತಿಯಿಂದ ವರ್ಷದ ಸಾಧಕರನ್ನಾಗಿ ವಿಶೇಷವಾಗಿ ಸಂಘದ ವತಿಯಿಂದ ಸಮ್ಮಾನಿಸಲಾಯಿತು.

ಎಸ್‌ಎಸ್‌ಸಿ ಹಾಗೂ ಎಚ್‌ಎಸ್‌ಸಿ ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.   ಮನೋರಂಜನೆಯ ಅಂಗವಾಗಿ ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ನೃತ್ಯ ವೈವಿಧ್ಯಗಳು, ಖ್ಯಾತ ಸಂಗೀತ ವಿದುಷಿ ನಂದಿನಿ ರಾವ್‌ ಗುಜರ್‌ ಅವರಿಂದ ಸಂಗೀತ ಕಾರ್ಯಕ್ರಮ, ಬಂಟರ ಯುವ ವೇದಿಕೆ ಮುಲ್ಕಿ ಹಾಗೂ ಬಂಟರ ಮಹಿಳಾ ವಿಭಾಗ ಮುಲ್ಕಿ ಕಲಾವಿದರಿಂದ ಖ್ಯಾತ ರಂಗ ನಿರ್ದೇಶಕ  ಜಗದೀಶ್‌  ಶೆಟ್ಟಿ ಕೆಂಚನಕೆರೆ ಇವರ ದಕ್ಷ ನಿರ್ದೇಶನದಲ್ಲಿ ತುಳು ಜಾನಪದ ಐತಿಹಾಸಿಕ, ಕ್ರಾಂತಿಕಾರಿ ತುಳುನಾಟಕ ಸತ್ಯದ ಸಿರಿ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಸಭಾಗೃಹ ಕಿಕ್ಕಿರಿದು ತುಳು-ಕನ್ನಡಿಗರಿಂದ ತುಂಬಿತ್ತು. ಕಾಂತಿ ಸೀತಾರಾಮ ಶೆಟ್ಟಿ   ನಿರೂಪಿಸಿದರು. ನವಿತಾ ಎಸ್‌. ಪೂಜಾರಿ, ಗೀತಾ ಡಿ. ಪೂಜಾರಿ, ಸರಸ್ವತಿ ಸಿ. ಕುಲಾಲ್‌ ಪ್ರಾರ್ಥಿಸಿದರು. ಸಂತೋಷ್‌ ಶೆಟ್ಟಿ, ವಿಕೇಶ್‌ ರೈ ಶೇಣಿ ಅತಿಥಿಗಳನ್ನು ಪರಿಚಯಿಸಿದರು. ಶರತ್‌ ಶೆಟ್ಟಿ ಉಳೆಪಾಡಿ, ಪ್ರಿಯಾ ಎಚ್‌. ದೇವಾಡಿಗ ಸಮ್ಮಾನ ಪತ್ರ ವಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next