Advertisement

ಕೊಹ್ಲಿ ಪಡೆ ಪೆವಿಲಿಯನ್‌ ಪರೇಡ್‌ : ಆಸೀಸ್‌ಗೆ 333 ರನ್‌ ಗೆಲುವು

12:03 PM Feb 25, 2017 | Team Udayavani |

ಪುಣೆ : ಇಲ್ಲಿ ನಡೆದ  ಮೊದಲ ಟೆಸ್ಟ್‌ ಪಂದ್ಯದ 3 ನೇ ದಿನದಾಟದಲ್ಲೇ ಪ್ರವಾಸಿ ಆಸ್ಟೇಲಿಯ ಭಾರತ ತಂಡದ ಎದುರು 333 ರನ್‌ ಅಂತರಗಳಿಂದ ಭರ್ಜರಿ ಗೆಲುವು ಸಾಧಿಸಿ ಸಂಭ್ರಮಿಸಿದೆ.  

Advertisement

ಗೆಲುವಿಗೆ  441 ರನ್‌ಗಳ ಗುರಿ ಪಡೆದ ಕೊಹ್ಲಿ ಪಡೆ  2 ನೇ ಇನ್ನಿಂಗ್ಸ್‌ನಲ್ಲೂ ಪೆವಿಲಿಯನ್‌ ಪರೇಡ್‌ ನಡೆಸಿ 107 ರನ್‌ಗಳಿಗೆ ಆಲೌಟಾಗುವ ಮೂಲಕ ಸೋಲಿಗೆ ಶರಣಾಯಿತು. 

ಮೊದಲ ಇನ್ನಿಂಗ್ಸ್‌ನಲ್ಲಿ  ಮಾರಕ ದಾಳಿ ನಡೆಸಿ 6 ವಿಕೆಟ್‌ ಕಿತ್ತಿದ್ದ  ಕಿಫೆ 2 ನೇ ಇನ್ನಿಂಗ್ಸ್‌ನಲ್ಲೂ 6 ವಿಕೆಟ್‌ ಕಿತ್ತು ಭಾರತೀಯ ಬ್ಯಾಟ್ಸ್‌ಮನ್‌ಗಳಿಗೆ ಸಿಂಹ ಸ್ವಪ್ನರಾದರು. 

ಭಾರತದ ಪರ ಗರಿಷ್ಠ ಪೂಜಾರ 31 , ಕೊಹ್ಲಿ 13 , ರೆಹಾನೆ 18 ಮತ್ತು ರಾಹುಲ್‌ 10 ರನ್‌ ಹೊರತು ಪಡಿಸಿದರೆ ಉಳಿದ ಯಾವ ಆಟಗಾರರೂ ಒಂದಂಕಿ ದಾಟಲಿಲ್ಲ. 

ಎರಡನೇ ಇನ್ನಿಂಗ್ಸ್‌ ಆಟದಲ್ಲಿ ಆಸ್ಟೇಲಿಯ ತಂಡ  ಇಂದು 285 ರನ್‌ ಗಳಿಗೆ ಆಲೌಟಾಗಿದೆ. ಮೊದಲನೇ ಇನ್ನಿಂಗ್ಸ್‌ನಲ್ಲಿ ಆಸ್ಟೇಲಿಯ 94.5 ಓವರ್‌ಗಳಲ್ಲಿ 260 ರನ್‌ ತೆಗೆದು ಆಲೌಟಾಗಿತ್ತು. 

Advertisement

ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಅತ್ಯಂತ ಕಳಪೆಯ ಆಟವಾಡಿ 105 ರನ್‌ಗಳಿಗೆ ಆಲೌಟಾಗಿತ್ತು. 

ಆಸ್ಟೇಲಿಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕಪ್ತಾನ  ಸ್ಟೀವನ್‌ ಸ್ಮಿತ್‌ ಅವರು 109 ರನ್‌ ಬಾರಿಸಿರುವುದು ಗರಿಷ್ಠ ವೈಯಕ್ತಿಕ ಸ್ಕೋರ್‌ ಎನಿಸಿತು. ಉಳಿದಂತೆ ಹ್ಯಾನ್ಸ್‌ಕಾಂಬ್‌ 19 ರನ್‌, ಮ್ಯಾಟ್‌ ರೆನ್‌ಶಾ 31ರನ್‌, ಮಿಚೆಲ್‌ ಮಾರ್ಶ್‌ 31ರನ್‌, ಮ್ಯಾಥ್ಯೂ ವೇಡ್‌ 20 ರನ್‌, ಮಿಚೆಲ್‌ ಸ್ಟಾಕ್‌ರ 30 ರನ್‌ ಬಾರಿಸಿ ಮಿಂಚಿದರು. 

ಭಾರತೀಯ ಎಸೆಗಾರರ ಪೈಕಿ ರವಿಚಂದ್ರನ್‌ ಅಶ್ವಿ‌ನ್‌ ನಾಲ್ಕು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜ ಮತ್ತು ಉಮೇಶ್‌ ಯಾದವ್‌ ತಲಾ 2 ವಿಕೆಟ್‌ ಕಿತ್ತರು. ಜಯಂತ್‌ ಯಾದವ್‌ಗೆ 1 ವಿಕೆಟ್‌ ದಕ್ಕಿತು. 

Advertisement

Udayavani is now on Telegram. Click here to join our channel and stay updated with the latest news.

Next