ಮುಂಬೈ: ದೇಶದ ಗಮನ ಸೆಳೆದ ಪುಣೆಯ ಪೋರ್ಷೆ ಅಪಘಾತದಲ್ಲಿ (Pune Porsche crash) ಇಬ್ಬರು ಟೆಕ್ಕಿಗಳನ್ನು ಬಲಿತೆಗೆದುಕೊಂಡಿದ್ದ 17 ವರ್ಷದ ಬಾಲಾಪರಾಧಿಯು ತನ್ನ ಜಾಮೀನು ಷರತ್ತುಗಳನ್ನು ಅನುಸರಿಸಿ ಜುವೆನೈಲ್ ಜಸ್ಟೀಸ್ ಬೋರ್ಡ್ ಗೆ (JJB) ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಸಲ್ಲಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಕಳೆದ ಬುಧವಾರ ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಸಲ್ಲಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 19ರಂದು ಕಲ್ಯಾಣಿ ನಗರದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಜುವೆನೈಲ್ ಜಸ್ಟೀಸ್ ಬೋರ್ಡ್ ಪ್ರಬಂಧ ಬರೆಯುವ ಷರತ್ತಿನಡಿ ಬಾಲಕನಿಗೆ ಜಮೀನು ನೀಡಿತ್ತು. ಬಳಿಕ ಆತನನ್ನು ಮತ್ತೆ ಬಂಧಿಸಲಾಗಿತ್ತು. ಆದರೆ ಇತ್ತೀಚೆಗೆ ಬಾಂಬೆ ಹೈಕೋರ್ಟ್ ಅವರ ಬಂಧನ ಅಕ್ರಮ ಎಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿತ್ತು.
ಆದ ಕುಡಿದ ಅಮಲಿನಲ್ಲಿ ಪೋರ್ಷೆ ಚಾಲನೆ ಮಾಡುತ್ತಿದ್ದಾಗ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಜುಲೈ 2 ರಂದು, ಪುಣೆ ನ್ಯಾಯಾಲಯವು ಬಾಲಾಪರಾಧಿಯ ತಂದೆ ಮತ್ತು ಅಜ್ಜನಿಗೆ ಜಾಮೀನು ನೀಡಿದೆ. ಅವರು ತಮ್ಮ ಕುಟುಂಬದ ಚಾಲಕನನ್ನು ಅಪಹರಿಸಿ ಆತ ಅಪಘಾತದ ಹೊಣೆಗಾರಿಕೆಯನ್ನು ಹೊರುವಂತೆ ಒತ್ತಾಯಿಸಿದ ಆರೋಪ ಹೊಂದಿದ್ದಾರೆ.