Advertisement

Pune Porsche Case: ರಿಮಾಂಡ್ ಆದೇಶ ಕಾನೂನು ಬಾಹಿರ ಎಂದು ಆರೋಪಿಯ ಬಿಡುಗಡೆ ಮಾಡಿದ ಹೈಕೋರ್ಟ್

08:42 PM Jun 25, 2024 | Team Udayavani |

ಮುಂಬೈ: ದೇಶದಲ್ಲಿ ಸುದ್ದಿ ಮಾಡಿದ್ದ ಪುಣೆ ಪೋರ್ಷೆ ಅಪಘಾತ ಪ್ರಕರಣದಲ್ಲಿ ಬಂಧಿತನಾಗಿದ್ದ ಅಪ್ರಾಪ್ತ ವಯಸ್ಕನನ್ನು ಮಂಗಳವಾರ ಬಾಂಬೆ ಹೈಕೋರ್ಟ್ ಬಿಡುಗಡೆ ಮಾಡಲು ಆದೇಶಿಸಿದೆ. ನ್ಯಾಯಾಲಯವು ರಿಮಾಂಡ್ ಆದೇಶವನ್ನು ಕಾನೂನುಬಾಹಿರವೆಂದು ಘೋಷಿಸಿ ಅದನ್ನು ರದ್ದುಗೊಳಿಸಿತು.

Advertisement

ಅಪ್ರಾಪ್ತ ವಯಸ್ಕನ ಪೋಷಕರು ಮತ್ತು ಅಜ್ಜ ಪ್ರಸ್ತುತ ಜೈಲಿನಲ್ಲಿ ಇರುವುದರಿಂದ, ಬಾಲಕನ ಪಾಲನೆಯನ್ನು ಅವನ ಚಿಕ್ಕಮ್ಮನಿಗೆ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಮುಖ ಆರೋಪಿಯಾಗಿದ್ದ ಬಾಲಕ ಇಂದೇ ರಿಮ್ಯಾಂಡ್ ಹೋಂನಿಂದ ಹೊರ ನಡೆದಿದ್ದಾನೆ.

ನ್ಯಾ. ಭಾರ್ತಿ ದಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಅಪಘಾತ ದುರದೃಷ್ಟಕರವಾಗಿದ್ದರೂ, ಆತನನ್ನು ಅಬ್ಸರ್ವೇಶನ್ ಹೋಂನಲ್ಲಿ ಇರಿಸುವುದು ಸರಿಯಲ್ಲ ಎಂದು ಹೇಳಿದೆ.

ಮೇ ತಿಂಗಳಲ್ಲಿ ನಡೆದ ಘಟನೆಯಲ್ಲಿ 17 ವರ್ಷದ ಹುಡುಗ ಪೋರ್ಷೆ ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆದು, ಇಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಗಳ ಸಾವಿಗೆ ಕಾರಣವಾಗಿದ್ದ.

ಅದೇ ದಿನ ಜುವೆನೈಲ್ ಜಸ್ಟಿಸ್ ಬೋರ್ಡ್ (ಜೆಜೆಬಿ) ಅವರಿಗೆ ಜಾಮೀನು ನೀಡಿತ್ತು. ರಸ್ತೆ ಸುರಕ್ಷತೆಯ ಕುರಿತು 300 ಪದಗಳ ಪ್ರಬಂಧವನ್ನು ಬರೆಯಬೇಕಾದ ಷರತ್ತಿನ ಅಡಿಯಲ್ಲಿ ಅವರ ಪೋಷಕರು ಮತ್ತು ಅಜ್ಜನ ಆರೈಕೆ ಮತ್ತು ಮೇಲ್ವಿಚಾರಣೆಯಲ್ಲಿ ಇರಿಸಲು ಆದೇಶಿಸಲಾಗಿತ್ತು. ಆದರೆ ಜನರ ಆಕ್ರೋಶ ಹೆಚ್ಚಾದಂತೆ ಪೊಲೀಸರು ಮತ್ತೆ ಬೋರ್ಡ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಬಳಿಕ ಜಾಮೀನು ರದ್ದಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next