ಪುಣೆ: ವಿವಾಹವಾಗುವ ನೆಪದಲ್ಲಿ ಲೈಂಗಿಕವಾಗಿ ಕಿರುಕುಳ ನೀಡಿದ ಆರೋಪದ ಮೇಲೆ ನಟಿಯೊಬ್ಬರು ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾರೆ.
2023 ರ ಮೇನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ನಟಿಗೆ ವ್ಯಕ್ತಿ ಪರಿಚಯವಾಗಿದ್ದ. ಈ ಸಂದರ್ಭದಲ್ಲಿ ನಟಿಯೊಂದಿಗೆ ಆತ್ಮೀಯವಾಗಿದ್ದ ವ್ಯಕ್ತಿ ಪ್ರೇಮ ನಿವೇದನೆಯನ್ನು ಮಾಡಿದ್ದ. ವ್ಯಕ್ತಿ ವಿವಾಹಿತನಾಗಿದ್ದು ನಟಿಯೊಂದಿಗೆ ಸಂಬಂಧ ಬೆಳಸಲು ಪತ್ನಿಗೆ ವಿಚ್ಛೇದನ ನೀಡುತ್ತೇನೆ ಎಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ವ್ಯಕ್ತಿಯ ಮದುವೆಯ ನಿವೇದನೆಯನು ಒಪ್ಪಿದ ಬಳಿಕ ನಟಿಯೊಂದಿಗೆ ವ್ಯಕ್ತಿ ದೈಹಿಕ ಸಂಪರ್ಕ ಹೊಂದಿದ್ದ. ಆ ಬಳಿಕ ನಟಿ ಮದುವೆ ಆಗಲು ಹೇಳಿದ ವೇಳೆ ವ್ಯಕ್ತಿ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಕಾರಣದಿಂದ ನಟಿ 2023ರ ಆಗಸ್ಟ್ 27 ರಿಂದ 2024ರ ಜನವರಿ 20ರ ನಡುವೆ ಸೊಲ್ಲಾಪುರದ 35 ವರ್ಷದ ವ್ಯಕ್ತಿ ವಿವಾಹದ ನೆಪದಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ನಟಿ ಇತ್ತೀಚೆಗೆ ವಿಮಂತಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (2) (ಎನ್), 377, 323, 504, ಮತ್ತು 506 ರ ಅಡಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.