Advertisement

ಆಧಾರ್‌ ಕೊಡದ ಬಾಲಕಿನಿಗೆ ಶಿಕ್ಷಕನಿಂದ ಅಮಾನುಷ ಥಳಿತ

04:06 PM Oct 30, 2017 | Team Udayavani |

ಪುಣೆ : ಶಾಲೆಯಲ್ಲಿ ಆಧಾರ್‌ ಕಾರ್ಡ್‌ ವಿವರಗಳನ್ನು ಕೊಡಲು ವಿಫ‌ಲನಾದ 10 ವರ್ಷ ಪ್ರಾಯದ ವಿದ್ಯಾರ್ಥಿಯನ್ನು ಆತನ ಶಿಕ್ಷಕ ಹಿಗ್ಗಾ ಮುಗ್ಗಾ ಹೊಡೆದು ಥಳಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. 

Advertisement

ಶಿಕ್ಷಕನಿಂದ ವಿಪರೀತ ಥಳಿತಕ್ಕೆ ಗುರಿಯಾದ ಬಾಲಕನು ಅನಂತರ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾನೆ. ಆತನ ಮೊಣಕಾರಿಗೆ ಗಂಭೀರ ಗಾಯವಾಗಿದೆ.

ಈ ಅಮಾನುಷ ಘಟನೆ ನಡೆದದ್ದು ಚಿಂಚವಾಡಾ ಪ್ರದೇಶದಲ್ಲಿನ ಮೋರ್ಯಾ ಶಿಕ್ಷಣ ಸಂಸ್ಥಾನದ ಶಾಲೆಯಲ್ಲಿ. ಈ ಘಟನೆ ಕೆಲವು ವಾರಗಳ ಹಿಂದಯೇ ನಡೆದಿತ್ತಾದರೂ ಅದು ಬೆಳಕಿಗೆ ಬಂದದ್ದು ನಿನ್ನೆ ಭಾನುವಾರ.

ಶಿಕ್ಷಕನು ತನ್ನ ಮೇಲೆ ಅಮಾನುಷ ಕ್ರೌರ್ಯವನ್ನು ಮನೆಯವರಿಗೆ ಹೇಳಲು ಕೂಡ ಹಿಂಜರಿಯುತ್ತಿದ್ದ. ಆದರೆ ನಿಲ್ಲಲೂ ಅಗದೆ ಕುಟುಂತ್ತಿದ್ದ ಆತನ ಸ್ಥಿತಿಯನ್ನು ಕಂಡ ಹೆತ್ತವರು ಮೊದಲು ಆತನನ್ನು ಆಸ್ಪತ್ರೆಗೆ ದಾಖಲಿಸಿದರು. 

ಬಾಲಕನ ಹೆತ್ತವರು ಚಿಂಚವಾಡ ಪೊಲೀಸ್‌ ಠಾಣೆಯಲ್ಲಿ ಆರೋಪಿ ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Advertisement

ಶಿಕ್ಷಕನಿಂದ ಅಮಾನುಷ ಹಲ್ಲೆಗೆ ಗುರಿಯಾದ ಬಾಲಕನು ಗಂಭೀರವಾಗಿ ಗಾಯಗೊಂಡು ಅ.6ರಂದು ಆಸ್ಪತ್ರೆಗೆ ದಾಖಲಾಗಿದ್ದ. ಅ.15ರ ವರೆಗೂ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ; ಶಸ್ತ್ರಚಿಕಿತ್ಸೆಗೂ ಒಳಪಟ್ಟಿದ್ದ,

ಬಾಲಕ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಆತನ ಹೆತ್ತವರು ತಮ್ಮ ಮಗನಿಗೆ ಶಿಕ್ಷಕನು ನೀಡಿರುವ ಅಮಾನುಷ ಶಿಕ್ಷೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ನಿನ್ನೆ ಭಾನುವಾರದ ಕಾರಣ ಶಾಲೆಗೆ ರಜೆ ಇದ್ದು ಸೋಮವಾರ ತಾವು ಈ ಬಗ್ಗೆ ಆರೋಪಿ ಶಿಕ್ಷಕ ಹಾಗೂ ಶಾಲಾಡಳಿತೆಯ ವಿರುದ್ಧ ಕಾನೂನು ಕ್ರಮ ಆರಂಭಿಸುವುದಾಗಿ ಚಿಂಚವಾಡಾ ಪೊಲೀಸ್‌ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next