ಪುಣೆ: ಪುಣೆ ಕನ್ನಡ ಸಂಘದ ಕೇತ್ಕರ್ ರೋಡ್‌ನಲ್ಲಿರುವ ಡಾ| ಕಲ್ಮಾಡಿ ಶ್ಯಾಮರಾವ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ರಚಿಸಲಾದ ಶಾಲಾ ಪತ್ರಿಕೆ ಸ್ಪೆಕ್ಟ್ರಮ್‌ನ ಪ್ರಥಮ ಸಂಚಿಕೆಯನ್ನು ಜು. 3 ರಂದು ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ ಬಿಡುಗಡೆಗೊಳಿಸಿದರು.
ವರ್ಣರಂಜಿತ ಪುಟಗಳ ನ್ನೊಳಗೊಂಡ ಈ ಪತ್ರಿಕೆಯನ್ನು ಶಾಲಾ ಪ್ರಾಂಶು ಪಾಲೆ ಜ್ಯೋತಿ ಕಡಕೋಳ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ಸಹಕಾರದೊಂದಿಗೆ ಪ್ರಕಟಿಸಲಾಯಿತು. ಪತ್ರಿಕೆಯು ಮಕ್ಕಳಿಂದ ಹಾಸ್ಯ, ಕಥೆ, ಕಾಟೂìನ್ ಚಿತ್ರಗಳು ಹಾಗೂ ಶಿಕ್ಷಕ ವರ್ಗದಿಂದ ಇಂಗ್ಲಿಷ್, ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ವಿವಿಧ ಅಧ್ಯಾಪನಾ ವಿಷಯಗಳ ಬಗ್ಗೆ ಲೇಖನಗಳನ್ನು ಒಳಗೊಂಡಿದೆ. ಶಾಲೆಯ ವಾರ್ಷಿಕ ಚಟುವಟಿಕೆಗಳ ಬಗ್ಗೆಯೂ ಪತ್ರಿಕೆಯಲ್ಲಿ ವಿಸ್ತೃತ ವರದಿಗಳನ್ನು ಪ್ರಕಟಿಸಲಾಗಿದೆ.
ಈ ಸಂದರ್ಭ ತಬಲಾ ಕಲಿಯುತ್ತಿರುವ ಮಕ್ಕಳಿಗಾಗಿ ಮಕ್ಕಳ ಏಕಾಗ್ರತೆಗಾಗಿ ಹಾಗೂ ಸಂಸ್ಕೃತ ಉಚ್ಚಾರವನ್ನು ಹೆಚ್ಚಿಸುವಲ್ಲಿ ನೆರವಾಗುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರ್ಶ್ ಬಿಎಡ್ ಕಾಲೇಜಿನ ಪ್ರಾಂಶುಪಾಲೆ ಡಾ| ಲಲಿತಾ ವರ್ತಕ್ ಮಾರ್ಗದರ್ಶನದಲ್ಲಿ ಶಿಕ್ಷಕಿಯರಾದ ಶಿಲ್ಪಾ ಸಾಳ್ವಿ, ಅದಿತಿ ಅಭ್ಯಾನ್ಕರ್, ನಿಲೋಫì ಅನ್ಸಾರಿ, ಶ್ವೇತಾ ಇನಾಂದಾರ್, ನೀತಾ ಭಾರತಿ ಇವರುಗಳು ತಬಲಾ ವಾದನದಿಂದ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮದ ಬಗ್ಗೆ ಸಂಶೋಧನಾ ಯೋಜನೆಯನ್ನು ಕೈಗೊಂಡಿದ್ದರು.
ಅದೇ ರೀತಿ ಸಂಸ್ಕೃತ ಶ್ಲೋಕ ಶ್ರವಣದಿಂದ ಮರಾಠಿ ಉಚ್ಚಾರವನ್ನು ಉತ್ತಮಗೊಳಿಸುವ ಬಗ್ಗೆ ಡಾ| ವನಿತಾ ಪಟವರ್ಧನ್ ಮಾರ್ಗದರ್ಶನದಲ್ಲಿ ಕಾರ್ಯಾಗಾರವನ್ನು ಕೈಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥೆ ರಾಧಿಕಾ ಶರ್ಮ, ಪ್ರಾಚಾರ್ಯೆ ಜ್ಯೋತಿ ಕಡಕೋಳ ಉಪಸ್ಥಿತರಿದ್ದರು.