ಪುಣೆ: ಇತ್ತೀಚಿನ ದಿನಗಳಲ್ಲಿ ಜನ ತಮ್ಮ ಅಗತ್ಯದ ಕೆಲಸಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸ್‌ಆ್ಯಪ್, ಟ್ವಿಟರ್.. ಹೀಗೆ ಒಂದೆರಡಲ್ಲ, ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪ್ರಚಾರ ಗಿಟ್ಟಿಸಿಕೊಳ್ಳುವುದುಂಟು.
ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಗಳದ್ದೇ ಕಾರುಬಾರು ಒಬ್ಬರು ಇನ್ನೊಬ್ಬರಿಗಿಂತ ಭಿನ್ನವಾಗಿ ಏನಾದರು ಮಾಡಬೇಕೆಂದು ಹುಚ್ಚು ಸಾಹಸಕ್ಕೆ ಕೈ ಹಾಕಿ ಕೆಲವರ ಪ್ರಾಣಕ್ಕೆ ಕುತ್ತು ಬಂದಿದ್ದೂ ಇದೆ ಅದೇ ರೀತಿ ಇಲ್ಲೊಬ್ಬಳು ಯುವತಿ ರೀಲ್ಸ್ ಗಾಗಿ ಯುವಕನ ಜೊತೆ ಹಳೆಯ ಕಟ್ಟಡದ ಮೇಲೇರಿ ಯುವಕನ ಕೈ ಹಿಡಿದು ನೇತಾಡುವ ಅಪಾಯಕಾರಿ ಸಾಹಸ ಮಾಡಿದ್ದಾಳೆ, ಇಲ್ಲಿ ಒಂದು ವೇಳೆ ಯುವಕನ ಕೈಯಿಂದ ಆಕೆ ಜಾರಿ ಬಿದ್ದಿದ್ದರೆ ಆಕೆಯ ಪ್ರಾಣಕ್ಕೆ ಕುತ್ತು ಬರುವುದಂತೂ ಪಕ್ಕಾ, ಸದ್ಯ ಈ ಭಯಾನಕ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ರೀಲ್ಸ್ ಹುಚ್ಚಿನಿಂದ ಅದೆಷ್ಟೋ ಅಮಾಯಕರ ಜೀವವನ್ನು ಬಲಿ ತೆಗೆದಿದ್ದೂ ಇದೆ, ಇಷ್ಟಾದರೂ ಜನಕ್ಕೆ ಬುದ್ದಿ ಮಾತ್ರ ಬರುವ ಲಕ್ಷಣ ಕಾಣುತ್ತಿಲ್ಲ.
ರೀಲ್ಸ್ ಗಾಗಿ ಯುವಕ ಯುವತಿಯರು ತಮ್ಮ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿರುವ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ.
ಇದನ್ನೂ ಓದಿ: ಚುನಾಯಿತರು ಮತ್ತೆ ಸ್ಪರ್ಧೆಗೆ ನಿರ್ಬಂಧ, ಚುನಾವಣಾ ಕಾನೂನು ತಿದ್ದುಪಡಿ ಬೇಕಿದೆ: ಯತ್ನಾಳ