ಪುಣೆ: ದೇವಾಡಿಗ ಸಂಘ ಪುಣೆ ಇದರ 6 ನೇ ವರ್ಷದ ಶಾರದಾ ಪೂಜೆ ಹಾಗೂ ವಾರ್ಷಿಕ ಮಹಾಸಭೆಯು ಸೆ. 23 ರಂದು ನಗರದ ಸ್ವಾರ್‌ಗೆàಟ್ ಹತ್ತಿರದ ಜಯಶ್ರೀ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಶಾರದಾ ದೇವಿಯ ಅಲಂಕೃತ ಮಂಟಪಕ್ಕೆ ಸಂಘದ ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ. ದೇವಾಡಿಗ, ಅಧ್ಯಕ್ಷರಾದ ಸಚಿನ್ ದೇವಾಡಿಗ, ಕೋಶಾಧಿಕಾರಿ ಸುರೇಶ್ ಸಿರಿಯಾನ್ ಹಾಗೂ ಸಂಘದ ಪದಾಧಿಕಾರಿಗಳು, ಮಹಿಳಾ ಸದಸ್ಯರು ಬೆಳಗಿ ಪೂಜೆ ಸಲ್ಲಿಸಿದರು. ಸಂಘದ ಸದಸ್ಯರು ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಭತ್ತದ ತೆನೆಗಳನ್ನು ಪೂಜಿಸಿ ನೆರೆದಿದ್ದ ಸಮಾಜ ಬಾಂಧವರಿಗೆ ಹಂಚಲಾಯಿತು. ಪೂಜೆಯ ನಂತರ ಸಂಘದ ಅಧ್ಯಕ್ಷ ಸಚಿನ್ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಮಹಾಸಭೆಯನ್ನು ನಡೆಸಲಾಯಿತು.
ಸಂಘದ ಕೋಶಾಧಿಕಾರಿ ಸುರೇಶ್ ಶ್ರೀಯಾನ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಮಾಜ ಬಾಂಧವರೆಲ್ಲರೂ ಸಂಘದ ಅಭಿವೃದ್ಧಿಗಾಗಿ ಸಹಕಾರ ನೀಡಿ ಎಂದರು. ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ. ದೇವಾಡಿಗ ಮಾತನಾಡಿ, ನಮ್ಮ ಸಂಘವು ಸ್ಥಾಪನೆಯಾದಂದಿನಿಂದ ಸಂಘದ ಪದಾಧಿಕಾರಿಗಳು, ಸಮಾಜ ಬಾಂಧವರೆಲ್ಲರೂ ಉತ್ತಮವಾಗಿ ಸ್ಪಂದಿಸಿ ಸಂಘವನ್ನು ಬೆಳೆಸಿದ್ದಾರೆ. ಮುಂದೆಯೂ ಸಮಾಜ ಬಾಂಧವರೆಲ್ಲರೂ ನಮ್ಮದೇ ಸಂಘವೆಂಬ ನೆಲೆಯಲ್ಲಿ ಸಂಘವನ್ನು ಮಾದರಿ ಸಂಘವಾಗಿ ಬೆಳೆಸುವಲ್ಲಿ ಸಹಕರಿಸಿ ಎಂದರು.
ಸಂಘದ ಅಧ್ಯಕ್ಷ ಸಚಿನ್ ದೇವಾಡಿಗ ಅವರು ಮಾತನಾಡಿ, ಸಂಘದ ಎಲ್ಲಾ ಕಾರ್ಯಕ್ರಮಗಳಿಗೂ ಸಮಾಜ ಬಾಂಧವರೆಲ್ಲರೂ ಸಹಕಾರ ನೀಡಿದ್ದು, ಮುಂದೆಯೂ ನಿಮ್ಮೆಲ್ಲರ ಪ್ರೋತ್ಸಾಹ ಸಂಘದ ಮೇಲಿರಲಿ ಎಂದು ನುಡಿದು, ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ನಾರಾಯಣ ದೇವಾಡಿಗ, ವಿಟuಲ್ ದೇವಾಡಿಗ, ಸುಧಾಕರ್ ದೇವಾಡಿಗ, ನವೀನ್ ದೇವಾಡಿಗ, ಜಗದೀಶ್ ದೇವಾಡಿಗ, ವಾಮನ ದೇವಾಡಿಗ, ಯಶವಂತ್ ದೇವಾಡಿಗ, ಸತೀಶ್ ದೇವಾಡಿಗ, ಲತಾ ದೇವಾಡಿಗ, ವಸಂತಿ ದೇವಾಡಿಗ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು. ಪ್ರಿಯಾ ಎಚ್. ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.