Advertisement

ಪುಣೆ ದೇವಾಡಿಗ ಸಂಘ ವಾರ್ಷಿಕ  ಕ್ರೀಡೋತ್ಸವ 

11:49 AM Jan 12, 2019 | |

ಪುಣೆ: ಕ್ರೀಡೆಯಿಂದ ನಮ್ಮ ದೈಹಿಕ ಶಕ್ತಿಯು ವೃದ್ಧಿಯಾಗುತ್ತದೆ. ಮುಖ್ಯವಾಗಿ ನಮ್ಮ  ಜೀವನ ಶೈಲಿಯಲ್ಲಿ ವ್ಯಾಯಾಮ ಮತ್ತು ಕ್ರೀಡೆಗೆ ಮಹತ್ವವನ್ನು ಕೊಡಬೇಕು. ಮಕ್ಕಳಿಗೆ ಹಿರಿಯರ ಪ್ರೋತ್ಸಾಹವು ಕೂಡ ಸಿಗಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಪ್ರೋತ್ಸಾಹಿಸುವ ಮೂಲಕ ಅವರನ್ನು ಆದರ್ಶ ಪ್ರಜೆಗಳಾಗಿ ರೂಪಿಸಬೇಕು. ಮಕ್ಕಳಲ್ಲಿ ಕೂಡ ಕ್ರೀಡಾ ಮನೋಭಾವ, ಉತ್ಸಾಹ ಮೂಡಿ ಬಂದಾಗ ಇದು ಸಾಧ್ಯವಾಗುತ್ತದೆ, ಪುಣೆ ದೇವಾಡಿಗ ಸಂಘ  ಸಮಾಜದ ಬಾಂಧವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕ್ರೀಡೋತ್ಸವವನ್ನು ಆಚರಿಸುತ್ತಿದೆ. ಇಲ್ಲಿ ಒಂದೇ ಕುಟುಂಬದವರಂತೆ ಸೇರಿರುವ ಸಮಾಜ ಭಾಂದವರನ್ನು ಕಂಡಾಗ ಸಂತೋಷವಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮತ್ತ¤ಷ್ಟು ಬೆಳೆದು ಹೆಮ್ಮರವಾಗಿ ಬೆಳೆಯಲಿ. ಕ್ರೀಡೆಯು  ಆರೋಗ್ಯದ ಸಮತೋಲನ ಕಾಪಾಡಲು ಸಹಕಾರಿಯಾಗಿದೆ ಎಂದು ಬೆಂಗಳೂರಿನ ಉದ್ಯಮಿ ರಮೇಶ್‌ ದೇವಾಡಿಗ ವಂಡ್ಸೆ ಅವರು ನುಡಿದರು.

Advertisement

ಜ. 6 ರಂದು ಯೆರವಾಡ ಮೋಜೆ  ಹೈಸೂcಲ್‌ ಮೈದಾನದಲ್ಲಿ  ಪುಣೆ ದೇವಾಡಿಗ ಸಂಘದ ವತಿಯಿಂದ ಸಮಾಜ ಭಾಂದವರಿಗಾಗಿ ಆಯೋಜಿಸಿರುವ  7 ನೇ ವಾರ್ಷಿಕ ಕ್ರಿಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಇಲ್ಲಿನ ಭಾಂದವರ ಒಗ್ಗಟ್ಟು, ಕಾರ್ಯವೈಖರಿಮತ್ತು ಸ್ನೇಹದ ಭಾವನೆ ಶ್ಲಾಘನೀಯ. ಇಲ್ಲಿ ಬಂದು ನಿಮ್ಮೊಂದಿಗೆ ಒಬ್ಬನಾಗಿ ಬೆರೆತು ಈ ಮುಂಜಾನೆಯಲ್ಲಿ ಕ್ರಿಡೋತ್ಸವದಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯವಾಗಿದೆ ಎಂದರು.

ಸಂಘದ ಗೌರವಾಧ್ಯಕ್ಷ ಪಿ. ಬಿ. ಸೇರಿಗಾರ್‌, ಅಧ್ಯಕ್ಷ ನಾರಾಯಣ ದೇವಾಡಿಗ, ಮುಖ್ಯ ಸಲಹೆಗಾರ ನರಸಿಂಹ ದೇವಾಡಿಗ ಉಪಾಧ್ಯಕ್ಷರುಗಳಾದ ಮಹಾಬಲ ದೇವಾಡಿಗ, ಸುಧಾಕರ ದೇವಾಡಿಗ, ಪ್ರದಾನ ಕಾರ್ಯದರ್ಶಿ ನವೀನ್‌ ದೇವಾಡಿಗ, ಕೋಶಾಧಿಕಾರಿ ಸುರೇಶ್‌ ಸಿರಿಯಾನ್‌  ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿ, ಬಲೂನ್‌ ಹಾರಿಸುವ ಮೂಲಕ  ಕ್ರೀಡೋತ್ಸವವನ್ನು ಉದ್ಘಾಟಿಸಿದರು. ಸಂಘದ ಕ್ರೀಡಾ ಕಾರ್ಯಾಧ್ಯಕ್ಷರಾದ ಯಶವಂತ್‌ ದೇವಾಡಿಗ, ಮಾಜಿ ಕ್ರೀಡಾಧ್ಯಕ್ಷ ಜಗದೀಶ್‌ ದೇವಾಡಿಗ ಮತ್ತು ಕ್ರೀಡಾಪಟುಗಳೊಂದಿಗೆ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಸಮಾಜ ಭಾಂದವರ ಪಥ  ಸಂಚಲನದೊಂದಿಗೆ ಗಣ್ಯರಿಗೆ ಗೌರವ ಸಲ್ಲಿಸಿದರು.

ವಿವಿಧ ವಯೋಮಿತಿಗೆ ಅನುಗುಣವಾಗಿ ನಡೆದ  ವಿವಿಧ ಸ್ಪರ್ದೆಗಳಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.  ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಚಹಾದ ವ್ಯವಸ್ಥೆಯನ್ನು ಸಂಘದ ಉಸ್ತುವಾರಿಯಲ್ಲಿ  ಮಾಡಲಾಯಿತು. ಕ್ರೀಡಾಕೂಟದ ಯಶಸ್ಸಿಗೆ ಸಂಘದ ಪ್ರಮುಖರಾದ ವಾಮನ ದೇವಾಡಿಗ, ಉದಯ ದೇವಾಡಿಗ, ಜನಾರ್ಧನ ದೇವಾಡಿಗ, ಸಂತೋಷ್‌ ದೇವಾಡಿಗ, ಶಶಿಕಾಂತಿ ಎಸ್‌. ದೇವಾಡಿಗ, ವಿನೋದಾ  ಎಸ್‌. ದೇವಾಡಿಗ, ಲತಾ ಅರ್‌. ದೇವಾಡಿಗ, ವಸಂತಿ ದೇವಾಡಿಗ ಮತ್ತು ಸದಸ್ಯರು  ಸಮಾಜ ಬಾಂಧವರು ಸಹಕರಿಸಿದರು. ಪ್ರಿಯಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದಾನಿಗಳು ಊಟ, ತಿಂಡಿ, ಚಹಾದ ಪ್ರಾಯೋಜಕತ್ವ ವಹಿಸಿ ಸಹಕರಿಸಿದರು. 

ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಕ್ರೀಡಾ ಕ್ಷೇತ್ರ ಒಂದು ಸ್ಪರ್ಧಾತ್ಮಕವಾದುದು. ಇದರಲ್ಲಿ ಪಾಲ್ಗೊಳ್ಳುವುದೇ ಸ್ಪರ್ಧೆ. ಪಾಲ್ಗೊಳ್ಳುವ ಛಲ ನಮ್ಮಲ್ಲಿ ನಮ್ಮ ಮಕ್ಕಳಲ್ಲಿ ಇರಬೇಕು. ಅದಕ್ಕಾಗಿ ಎಲ್ಲರೂ ಪ್ರೋತ್ಸಾಹಿಸುವುದು ಅಗತ್ಯವಾಗಿದೆ.
-ಪಿ.ಬಿ. ಶೇರಿಗಾರ್‌, ಗೌರವಾಧ್ಯಕ್ಷರು, ದೇವಾಡಿಗ ಸಂಘ ಪುಣೆ

Advertisement

ಸಂಘದ ಯಾವುದೇ ಕಾರ್ಯಕ್ರಮವಿರಲಿ, ಅದು ನಮ್ಮ ಒಗ್ಗಟ್ಟಿಗಾಗಿ ಆಯೋಜಿಸಿರುವಂತದ್ದಾಗಿದೆ. ವಾರ್ಷಿಕಾ ಕ್ರೀಡಾಕೂಟ ಕೂಡ ನಮ್ಮ ಪುಣೆ ಸಂಘದ ಒಂದು ಅಂಗವಾಗಿದೆ. ನಾವೆಲ್ಲರೂ ಸೇರಿ, ನಮ್ಮವರಿಗಾಗಿ  ಆಯೋಜಿಸಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಸಂಘಕ್ಕೆ ನಿಡುವ ಗೌರವವಾಗಿದೆ. ಇಲ್ಲಿ ಸೇರಿರುವ ಸಮಾಜ ಬಾಂಧವರಿಗೆ, ಕ್ರೀಡಾ ಸ್ಪರ್ಧಿಗಳಿಗೆ ಶುಭ ಹಾರೈಕೆಗಳು.
-ನಾರಾಯಣ ದೇವಾಡಿಗ, ಅಧ್ಯಕ್ಷರು, ದೇವಾಡಿಗ ಸಂಘ ಪುಣೆ

ನಮ್ಮ ಜಂಜಾಟದ ದಿನ ನಿತ್ಯದ ಜೀವನದಲ್ಲಿ ಕ್ರೀಡೆಗೆ ಸಹಕಾರಿಯಾಗುವ ವ್ಯಾಯಾಮ ಮತ್ತು ಯೋಗವನ್ನು ನಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡರೆ ಅರೋಗ್ಯಕ್ಕೆ ಒಳ್ಳೆಯದು.  ಇದರಿಂದ ಕ್ರೀಡಾ ಮನೋಭಾವ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು. ದಿನನಿತ್ಯ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮೂಲಕವಾಗಿಯು ನಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬರಬಹುದು. ನಾವೆಲ್ಲರೂ ಕ್ರೀಡೆಯತ್ತ ಹೆಚ್ಚಿನ ಒಲವನ್ನು ತೋರಬೇಕು.
 – ಮಹಾಬಲ ದೇವಾಡಿಗ. ಉಪಾಧ್ಯಕ್ಷರು, ದೇವಾಡಿಗ ಸಂಘ ಪುಣೆ

ಚಿತ್ರ-ವರದಿ : ಹರೀಶ್‌  ಮೂಡಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next