Advertisement
ಹೌಸ್ ಲಿಫ್ಟಿಂಗ್ ತಂತ್ರಜ್ಞಾನವನ್ನು ಬಳಸಿ ಮೇಲಕ್ಕೆತ್ತಲಾದ ಈ ಬಂಗಲೆಯನ್ನು ನೋಡಲು ಇದೀಗ ಜನರ ದಂಡು ಹರಿದು ಬರಲಾರಂಭಿಸಿದೆ. ಸಾಮಾನ್ಯವಾಗಿ ಜ್ಯಾಕ್ ಅನ್ನು ಕಾರಿನ ಚಕ್ರ ಬಸಲಾಯಿಸುವ ಸಮಯ ದಲ್ಲಿ ಕಾರನ್ನು ಮೇಲಕ್ಕೆತ್ತಲು ಬಳಸ ಲಾಗುತ್ತದೆ. ಆದರೆ, ಹಡಪ್ಸರ್ ಮೂಲದ ಮಹಾಶಯ 250 ಜ್ಯಾಕ್‌ಗಳನ್ನು ಬಳಸಿ ತಮ್ಮ 2,000 ಚದರ ಅಡಿಯ ಬಂಗಲೆಯನ್ನೇ ಮೇಲಕ್ಕೆತ್ತಿಸುವ ಸಾಹಸವನ್ನು ಮಾಡಿದ್ದಾರೆ. ಅಂದಹಾಗೆ ಈ ಮಹಾಶಯನ ಹೆಸರು ಶಿವಕುಮಾರ್ ಅಯ್ಯರ್. ಹಡಪ್ಸರ್‌ನ ತಾರ್‌ದತ್ತ ಕಾಲೋನಿಯಲ್ಲಿ ಕಳೆದ 18 ವರ್ಷ ಗಳಿಂದ ಇವರ ಬಂಗಲೆ ನೆಲೆಗೊಂಡಿದೆ. ಇಷ್ಟು ವರ್ಷಗಳಲ್ಲಿ ದುರಸ್ತಿ, ಡಾಮರೀಕರಣ, ನವೀಕರಣದಂತಹ ಕೆಲಸಗಳ ಕಾರಣದಿಂದಾಗಿ ಬಂಗಲೆಯ ಎದುರಿನ ರಸ್ತೆಯ ಎತ್ತರವು ನಿರಂತರವಾಗಿ ಹೆಚ್ಚಲಾರಂ ಭಿಸಿತ್ತು ಹಾಗೂ ಅದರಿಂದಾಗಿ ಬಂಗಲೆಯೊಳಗೆ ಮಳೆ ನೀರು ನುಗ್ಗಲಾರಂಭಿಸಿತ್ತು. ಇದರ ಪರಿಣಾಮವಾಗಿ ಈ ಬಂಗಲೆಯಲ್ಲಿ ಯಾರೂ ವಾಸವಾಗುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಯ್ಯರ್ ಬಂಗಲೆಯ ಎತ್ತರವನ್ನು ಹೆಚ್ಚಿಸಲು ಹೌಸ್ ಲಿಫ್ಟಿಂಗ್ ತಂತ್ರಜ್ಞಾನವನ್ನು ಬಳಸುವ ತೀರ್ಮಾನವನ್ನು ತೆಗೆದುಕೊಂಡರು.
Related Articles
Advertisement
ಮನೆಯ ಎತ್ತರವನ್ನು ಹೆಚ್ಚಿಸಲು ಹೌಸ್ ಲಿಫ್ಟಿಂಗ್ ತಂತ್ರಜ್ಞಾನವನ್ನು ಇಡೀ ವಿಶ್ವದಾದ್ಯಂತ ಬಳಕೆಗೆ ತರಬಹುದಾಗಿದೆ. ಇದರ ಸಹಾಯದಲ್ಲಿ ಮನೆಯ ಫೌಂಡೇಶನ್ ಅನ್ನು ಮತ್ತೂಮ್ಮೆ ಇಡಬಹುದಾಗಿ ಅಥವಾ ಮತ್ತೂಮ್ಮೆ ಅದರ ಎತ್ತರವನ್ನು ಹೆಚ್ಚಿಸಬಹುದಾಗಿದೆ. ಹೌಸ್ ಲಿಫ್ಟಿಂಗ್ ತಂತ್ರಜ್ಞಾನದ ಮೂಲಕ ಮನೆ ಅಥವಾ ಬಂಗಲೆಯನ್ನು ಒಂದರಿಂದ ಹದಿನೈದು ಅಡಿಗಳಷ್ಟು ಎತ್ತರವರೆಗೆ ಏರಿಸ ಬಹುದಾಗಿದೆ. ಇದರಿಂದ ಮನೆಯ ಗೋಡೆ ಅಥವಾ ಆಧಾರ ಸ್ತಂಭಕ್ಕೆ ಯಾವುದೇ ರೀತಿಯ ಅಪಾಯ ಉಂಟಾಗುವುದಿಲ್ಲ. ಪುಣೆಯಲ್ಲಿ ಮೊದಲ ಬಾರಿಗೆ ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.