Advertisement
ತುಳುನಾಡ ಸಂಸ್ಕೃತಿ ಎಂದರೆ ಅದೊಂದು ವೈಶಿಷ್ಟ್ಯಮಯವಾದ ಸಂಪ್ರದಾಯದ ಅಡಿಪಾಯದಲ್ಲಿ ಜನ ಜೀವನದಲ್ಲಿ ಹಾಸುಹೊಕ್ಕಾದ ಜೀವನ ಕ್ರಮವಾಗಿದೆ. ಇಲ್ಲಿ ಜನ ಜೀವನದ ಪ್ರತಿಯೊಂದು ಮಜಲಿನಲ್ಲೂ ವಿಶೇಷತೆಯನ್ನು ಕಾಣಬಹುದಾಗಿದೆ. ಅದು ಸಂಪ್ರದಾಯಬದ್ಧವಾಗಿ ಆಚರಿಸಲಾಗುವ ಹಬ್ಬ ಹರಿದಿನಗಳೇ ಇರಲಿ, ದೈವ ದೇವರ ಆರಾಧನಾ ಪದ್ಧತಿಯೇ ಇರಲಿ. ವಾಸಯೋಗ್ಯ ನಿರ್ಮಿಸುವ ಮನೆಯ ಶೈಲಿಯೇ ಇರಲಿ, ದೈವ ದೇವಸ್ಥಾನಗಳ ನಿರ್ಮಾಣವೇ ಇರಲಿ ಪ್ರತಿಯೊಂದಕ್ಕೂ ಅದರದ್ದೇ ಆದ ವೈಶಿಷ್ಟÂತೆಯನ್ನು ಕಾಣಬಹುದಾಗಿದೆ.
Related Articles
Advertisement
ಊರಿನಿಂದಲೇ ಮರಮಟ್ಟುಗಳನ್ನು ತಂದು ಚಾವಡಿಗೆ ಬಳಸಲಾಗಿದೆ. ಇಲ್ಲಿನ ಬಾಗಿಲು, ಕಿಟಿಕಿಗಳೂ ಸೇರಿದಂತೆ ಕೈಕುಸುರಿ ಕೆಲಸಗಳ ನೋಟ ಸುಂದರವಾಗಿ ಕಂಡುಬರುತ್ತದೆ. ಅದಕ್ಕೆ ತಾಗಿಕೊಂಡೇ ಡೈನಿಂಗ್ ಹಾಲ್, ಬಲಬದಿಗೆ ಕಪ್ಪು ಕಲ್ಲಿನಿಂದ ಮೂಡಬಿದಿರೆಯಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಗುರು ನಿತ್ಯಾನಂದ ಸ್ವಾಮಿಗಳ ಭವ್ಯ ಮೂರ್ತಿ, ಇನ್ನೊಂದೆಡೆ ಬಿಳಿ ಕಲ್ಲಿನಿಂದ ರಾಜಸ್ಥಾನದಿಂದ ತಯಾರಿಸಿ ತಂದು ಪ್ರತಿಷ್ಠಾಪಿಸಿದ ಶಿರ್ಡಿ ಸಾಯಿಬಾಬಾರ ಮೂರ್ತಿ, ದೇವರ ಭವ್ಯ ಪೂಜಾ ಮಂಟಪವನ್ನೂ ಮರದ ಕೆತ್ತನೆಗಳೊಂದಿಗೆ ತಯಾರಿಸಲಾಗಿದೆ.
ಶ್ರೀ ಕ್ಷೇತ್ರ ಕಟೀಲಿನ ದುರ್ಗಾಪರಮೇಶ್ವರಿ ಅಮ್ಮನವರ ಬೆಳ್ಳಿ ಲೇಪನದ ಕಲಾಶೈಲಿಯ ಫೋಟೋ, ಮಹಾಗಣಪತಿ ದೇವರ ಫೋಟೋ ಹಾಗೂ ವೆಂಕಟ್ರಮಣ ದೇವರ ಫೋಟೋಗಳನ್ನು ಅಳವಡಿಸಲಾಗಿದ್ದು ಭವನದೊಳಗಡೆ ಸಣ್ಣದೊಂದು ದೇವಸ್ಥಾನದ ಕಲ್ಪನೆಯನ್ನು ಸಾಕಾರಗೊಳಿಸುವಂತಿದೆ.
ಭವನದೊಳಗಡೆ ಸುಮಾರು 1200 ಆಸನ ಗಳುಳ್ಳ ಭವ್ಯಾಕರ್ಷಕ ಸಾಂಸ್ಕೃತಿಕ ಸಭಾಗೃಹ ಪುಣೆಯಲ್ಲಿಯೇ ವಿನೂತನವಾಗಿ ಕಂಗೊಳಿಸುತ್ತದೆ. ವಿದ್ಯುದ್ದೀಪ, ಜನರೇಟರ್ ನಿರ್ವಹಣೆಗಾಗಿ ನಂದಾದೀಪ ಎಂಬ ಮಂಗಳೂರು ಹಂಚಿನಿಂದ ನಿರ್ಮಾಣಗೊಂಡ ಕೋಣೆ ಯೊಂದಿದೆ. ಇದರೊಂದಿಗೆ ಭವನದಲ್ಲಿ ಬಂಟ ಭೂಷಣಪ್ರಾಯ ವಿಜಯ ಬ್ಯಾಂಕಿನ ಅಭ್ಯುದಯದ ಹರಿಕಾರ ಸುಂದರರಾಮ ಶೆಟ್ಟಿ, ಬಂಟ ಸಮಾಜದ ಕೀರ್ತಿಯನ್ನು ದೇಶದಾದ್ಯಂತ ಪಸರಿಸಿದ ಜಸ್ಟಿಸ್ ಕೆ. ಎಸ್. ಹೆಗ್ಡೆ ಅವರ ಮೂರ್ತಿ ಅಲ್ಲದೆ ಭವನದ ಆವರಣದ ಒಂದು ಬದಿಯಲ್ಲಿ ಮಹಾರಾಷ್ಟ್ರದ ಆರಾಧ್ಯದೇವ ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಕರ್ನಾಟಕ-ಮಹಾರಾಷ್ಟ್ರದ ಸ್ನೇಹಸೇತುವಾಗಿ ಅಪೂರ್ವ ಪರಿಕಲ್ಪನೆಯೊಂದಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ ವಿಚಾರಗಳೂ ಸೇರಿದಂತೆ ಭವನವನ್ನು ನಿರ್ಮಿಸಲಾಗಿದೆ. ಭವನದ ಹೊರನೋಟ ಕಂಗೊಳಿಸುವಂತೆ ಮಾಡಲು ಊರಿನಿಂದ ತಂದು ಕೆಂಪು ಕಲ್ಲು ಗಳನ್ನು ಅಳವಡಿಸಲಾಗಿದೆ. ಮಹಾದಾನಿಗಳ ದೇಣಿಗೆಯಿಂದ ಬಂಟರ ಹೆಮ್ಮೆಯ ಭವನ ನಿರ್ಮಾಣಗೊಂಡು ಎ. 7ರಂದು ಪದ್ಮಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ದಿವ್ಯ ಹಸ್ತದಿಂದ ಲೋಕಾರ್ಪಣೆಗೊಳ್ಳುತ್ತಿರುವುದು ಪುಣೆ ಬಂಟರಿಗಲ್ಲದೆ ಸಮಸ್ತ ಸಮಾಜಕ್ಕೆ ಅಭಿಮಾನ ತರುವ ವಿಚಾರವಾಗಿದೆ.
ಕಿರಣ್ ಬಿ. ರೈ ಕರ್ನೂರು