Advertisement

ಪುಣೆ ಬಂಟರ ಭವನ: ದೇವಿ ಮಹಾತ್ಮೆ ಯಕ್ಷಗಾನ

04:24 PM Apr 28, 2018 | |

ಪುಣೆ: ಪುಣೆ ಬಂಟರ ಸಂಘದ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಸಂಘದ  ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಎ. 14ರಂದು  ಬಿಸು ಪರ್ಬ ಹಾಗೂ ಬಂಟರ ದಿನಾಚರಣೆ ನಿಮಿತ್ತ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಪುಣೆ ಹಾಗೂ ಊರಿನ ಹೆಸರಾಂತ ಕಲಾವಿದರೊಂದಿಗೆ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕು| ಭವ್ಯಶ್ರೀ ಮಂಡೆಕೋಲು,  ಚಂಡೆಯಲ್ಲಿ ಪ್ರವೀಣ್‌ ಕುಮಾರ್‌ ಮತ್ತು ಮದ್ದಳೆಯಲ್ಲಿ ಆನಂದ ಶೆಟ್ಟಿ ಇನ್ನ ಸಹಕರಿಸಿದರು. ಹಾಸ್ಯಕಲಾವಿದರಾಗಿ  ದಿನೇಶ್‌ ರೈ, ಕಡಬ ಮತ್ತು ಪ್ರಶಾಂತ್‌ ಸಿ. ಕೆ., ಪಾತ್ರಧಾರಿಗಳಾಗಿ ಉದಯ ಕುಮಾರ್‌ ಆಡ್ಯನಡ್ಕ, ಶ್ರೀನಿವಾಸ ರೈ. ಕಡಬ, ಬಾಲಕೃಷ್ಣ ಸೀತಾಂಗೋಳಿ, ರಂಜು ಕುಮಾರ್‌, ನಾರಾಯಣ ಮಾಲಡ್ಕ, ದಿವಾಕರ ಮಲ್ಲ, ಮಾಧವ ನೆಟ್ಟಣಿಗೆ, ಗೋಪಾಲ ಭಟ್‌ ಗುಂಡಿಮಜಲು, ಡಿ. ಸಿ. ಕುಲಾಲ್‌ ಉತ್ತಮವಾಗಿ ಅಭಿನಯಿಸಿದರು.

Advertisement

ಯಕ್ಷಗಾನ ಪ್ರದರ್ಶನದ ಮಧ್ಯಾಂತರದಲ್ಲಿ ಕಲಾವಿದರನ್ನು ಸಂಘದ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು ಗೌರವಿಸಿದರು. ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಶೆಟ್ಟಿ, ಮಾಧವ ಆರ್‌.  ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್‌ ಹೆಗ್ಡೆ, ಕೋಶಾಧಿಕಾರಿ ವೈ, ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್‌ ಶೆಟ್ಟಿ ಬೈಲೂರು, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ಸಂಘದ ಪದಾಧಿಕಾರಿಗಳಾದ ಸತೀಶ್‌ ಶೆಟ್ಟಿ, ಶ್ರೀನಿವಾಸ್‌ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಶಶೀಂದ್ರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಸುಧಾಕರ ಶೆಟ್ಟಿ, ತಾರಾನಾಥ ಕೆ. ರೈ ಮೇಗಿನಗುತ್ತು, ಮಿಯ್ನಾರ್‌ ರಾಜ್‌ ಕುಮಾರ್‌ ಶೆಟ್ಟಿ, ಗಣೇಶ್‌ ಶೆಟ್ಟಿ, ಮೋಹನ್‌ ಶೆಟ್ಟಿ, ರಂಜಿತ್‌ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹೆರ್ಡೆಬೀಡು, ಪ್ರಶಾಂತ್‌ ಶೆಟ್ಟಿ, ಗಣೇಶ್‌ ಹೆಗ್ಡೆ, ವಿವೇಕಾನಂದ ಶೆಟ್ಟಿ ಆವರ್ಸೆ ಮತ್ತಿತರರು ಉಪಸ್ಥಿತರಿದ್ದರು.  

ಚಿತ್ರ-ವರದಿ :ಕಿರಣ್‌ ಬಿ. ರೈ ಕರ್ನೂರು
 

Advertisement

Udayavani is now on Telegram. Click here to join our channel and stay updated with the latest news.

Next