Advertisement
ಆ. 6ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ… ಸಭಾಂಗಣದಲ್ಲಿ ನಡೆದ ಪುಣೆ ಬಂಟರ ಸಂಘದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತ ರಿದ್ದು ಮಾತನಾಡಿದ ಅವರು, ಇಂದಿನ ಕಾಲ ಘಟ್ಟದಲ್ಲಿ ನಾವು ಎಷ್ಟೇ ಮುಂದುವರಿದರೂ ಮನುಷ್ಯರಾಗಿ ಒಬ್ಬರನ್ನೊಬ್ಬರು ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ಎಡವುತ್ತಿದ್ದು ಇದರಿಂದಾಗಿ ನಮ್ಮ ಸಮಾಜದಲ್ಲಿ ಅನಾಚಾರಗಳು ಹೆಚ್ಚಾಗುತ್ತಿರುವುದು ದುರದೃಷ್ಟಕರವಾಗಿದೆ. ಉತ್ತಮ ಇಚ್ಛಾಶಕ್ತಿ, ಉನ್ನತ ಧ್ಯೇಯ, ಸಾಧಿಸುವ ಗುರಿಯೊಂದಿಗೆ ಉತ್ತಮ ನಾಯಕತ್ವದ ಗುಣಗಳಿಂದಾಗಿಯೇ ಸಂತೋಷ್ ಶೆಟ್ಟಿಯವರ ನೇತೃತ್ವದಲ್ಲಿ ಪುಣೆ ಬಂಟರ ಸಂಘದ ಭವನ ತಲೆಯೆತ್ತುತ್ತಿದ್ದು ಹೊಸ ಇತಿಹಾಸ ನಿರ್ಮಿಸಿದಂತಿದೆ ಎಂದರು.
ದಂತೆ ಒಗ್ಗಟ್ಟಿನಿಂದ ಸೇರಿ ನಮ್ಮ ನಾಡಿನ ಸಾಂಸ್ಕೃತಿಕ ಆಚರಣೆಯಲ್ಲಿ ಭಾಗವಹಿಸುವಂತೆ ಮಾಡಿ ನಮ್ಮ ಪ್ರಾಚೀನ ಆದರ್ಶ ಜೀವನ ಪದ್ಧತಿಯನ್ನು ಪರಿಚಯಿಸುವ ಉದ್ದೇಶದಿಂದ ಇಂದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಸಂಘದ ಮಹಿಳಾ ವಿಭಾಗ ಹಾಗೂ ಸಾಂಸ್ಕೃತಿಕ ವಿಭಾಗದ ಮುತು ವರ್ಜಿಯಿಂದಾಗಿಯೇ ಇಂದು ಇಂಥ ಉತ್ತಮ
ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗಿದ್ದು, ಅವರೆಲ್ಲರೂ ಅಭಿನಂದನಾರ್ಹರು. ಸಮಾಜ ಬಾಂಧವರೆಲ್ಲರ ಆಶೀರ್ವಾದದ ನೆರವಿನೊಂದಿಗೆ ಸಂಘದ ಮೈಲುಗಲ್ಲಾದ ಭವನದ ಕಾರ್ಯ ಪೂರ್ಣಗೊಳ್ಳುವ ಹಂತ ದಲ್ಲಿದ್ದು ಲೋಕಾರ್ಪಣೆ ದಿನಗಣನೆಗೆ ಸಜ್ಜಾಗಿದೆ.ನಿಮ್ಮ ಸಹಕಾರ ನಿರಂತರವಾಗಿರಲಿ ಎಂದರು.
Related Articles
Advertisement
ಹಿರಿಯ ಉದ್ಯಮಿ ರಘುನಾಥ ಎಸ್. ಶೆಟ್ಟಿ ಅವರು ಮಾತನಾಡಿ, ನಮ್ಮ ನಾಡಿನ ಕಟ್ಟುಕಟ್ಟಳೆಗಳನ್ನು ನೆನಪಿಸುವ ಕಾರ್ಯ ಅಭಿನಂದನೀಯವಾಗಿದೆ. ಸಂತೋಷ್ ಶೆಟ್ಟಿಯವರ ನಿಸ್ವಾರ್ಥ ಕಾರ್ಯದಿಂದ ಇಂದು ಪುಣೆ ಬಂಟರ ಭವನ ನಿರ್ಮಾಣ ಆಗಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು. ಪಡುಬಿದ್ರಿ ಬಂಟರ ಸಂಘದ ಕಾರ್ಯದರ್ಶಿ ಡಾ| ಮನೋಜ್ ಶೆಟ್ಟಿ ಮಾತನಾಡಿ, ನಮ್ಮ ನಾಡಿನಲ್ಲಿ ಆಟಿ ತಿಂಗಳಲ್ಲಿ ರೂಢಿಸಿಕೊಂಡಿರುವ ಆಹಾರ ಪದ್ಧತಿಗಳು, ಪ್ರತಿಯೊಂದು ಆಚರಣೆಗಳಿಗೆ ವಿಶೇಷ ಅರ್ಥವಿದೆ. ನಮ್ಮ ಜೀವನ ಸಂಸ್ಕಾರ ಮಾದರಿಯಾಗಿದ್ದು ಇಂದಿನ ಯಾಂತ್ರೀಕೃತ ಬದುಕಿನಲ್ಲಿ ಟಿವಿ ಮಾಧ್ಯಮಗಳ ದಾಸರಾಗದೆ ಜಾಗೃತರಾಗಬೇಕಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ, ಮಹಿಳಾ ವಿಭಾಗದ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಶಮ್ಮಿ ಅಜಿತ್ ಹೆಗ್ಡೆ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಂಪಾ ಎಸ್. ಶೆಟ್ಟಿ, ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ ಬೈಲೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಬಿ. ಶೆಟ್ಟಿ ಉಪಸ್ಥಿತರಿದ್ದರು.ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆಯಿತ್ತರು. ಸುಲತಾ ಎಸ್. ಶೆಟ್ಟಿ ಮತ್ತು ಸುಮಾ ಶೆಟ್ಟಿ ಪ್ರಾರ್ಥಿಸಿದರು. ಈ ಸಂದರ್ಭ ಅತಿಥಿ-ಗಣ್ಯರನ್ನು ಶಾಲು ಹೊದೆಸಿ, ಪೇಟ ತೊಡಿಸಿ, ಹೂವಿನ ಗಿಡ, ಸ್ಮರಣಿಕೆ, ಪುಷ್ಪಗುತ್ಛಗಳನ್ನು ನೀಡಿ ಸಮ್ಮಾನಿಸಲಾಯಿತು. ಸುಲತಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿ ಸಿದರು. ಸಂತೋಷ್ ಶೆಟ್ಟಿ ಸ್ವಾಗತಿಸಿದರು. ಅಜಿತ್ ಹೆಗ್ಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಮಹಿಳಾ ಸದಸ್ಯರು, ಯುವ ವಿಭಾಗ, ಉತ್ತರ ಹಾಗೂ ದಕ್ಷಿಣ ಪ್ರಾದೇಶಿಕ ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಉಪಸ್ಥಿತರಿದ್ದರು. ಮನೋರಂಜನೆಯ ಅಂಗವಾಗಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಹೆಸರಾಂತ ಕಲಾವಿದರ ಕೂಡುವಿಕೆಯೊಂದಿಗೆ ಕು| ಕಾವ್ಯಶ್ರೀ ಅಜೇರು ಭಾಗವತಿಕೆಯಲ್ಲಿ ಸ್ವಾಮಿ ಭಕ್ತ ಮಂಜಣ್ಣೆ ತುಳು ಯಕ್ಷಗಾನ ಪ್ರದರ್ಶನಗೊಂಡಿತು. ಈ ಸಂದರ್ಭ ಪ್ರಾಚೀನ ಸೊಗಡನ್ನು ನೆನಪಿಸಿದ ಆಟಿ ಅಟಿಲ…ನಲ್ಲಿ ಬಗೆಬಗೆಯ ಖಾದ್ಯಗಳು ಗಮನ ಸೆಳೆದವು. ತಿಮರೆದ ಚಟ್ನಿ, ಎಟ್ಟಿದ ಚಟ್ನಿ, ನುಗ್ಗೆಸೊಪ್ಪು$ ಪಲ್ಯ, ಉಪ್ಪಡಚ್ಚಿರ್, ಮೆದಡ್ಡೆ, ಕುಕ್ಕುದ ಚಟ್ನಿ, ಪತ್ರೊಡೆ, ಪುಂಡಿ, ಪದೆಂಗಿ ಸಲಾಯಿ ಪಾಯಸ, ಮೆತ್ತೆದ ಗಂಜಿ, ಕಂಚೊಲ್ ಪಲ್ಯ, ಕೋರಿರೊಟ್ಟಿ, ಗೆಂಡದಡ್ಡೆ, ಕೋರಿ ಸುಕ್ಕ ಮುಂತಾದ ಬಗೆಬಗೆಯ ವ್ಯಂಜನಗಳು ಆಟಿದ ಅಟಿಲ್ ರುಚಿಯನ್ನು ಹೆಚ್ಚಿಸಿದ್ದವು.