Advertisement
ಎ. 14ರಂದು ಬಾಣೇರ್‌ನ ಸಂಘದ ನಿರ್ಮಾಣ ಹಂತದ ಸಾಂಸ್ಕೃತಿಕ ಭವನದ ಆವರಣದಲ್ಲಿ ಬಿಸುಪರ್ಬ ಹಾಗೂ ಬಂಟರ ದಿನಾಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಇಂದು ಮಹಿಳೆಯರ ಬಳಗದಿಂದ ಸುಶ್ರಾವ್ಯ ಭಜನಾ ಕಾರ್ಯಕ್ರಮದ ಮೂಲಕ ವಾತಾವರಣವನ್ನು ಧನಾತ್ಮಕವಾಗಿ ಪರಿವರ್ತಿಸಿ ಆಧ್ಯಾತ್ಮಿಕ ಭಾವನೆ ಜಾಗೃತಿಗೊಳಿಸಿ ನಮ್ಮ ಅಳಿವಿ ನಂಚಿನಲ್ಲಿರುವ ಆಧ್ಯಾತ್ಮಿಕ ವಿಚಾರಗಳನ್ನು ಪುನರು ಜ್ಜೀವನಗೊಳಿಸುವ ಕಾರ್ಯ ಆಗುತ್ತಿರುವುದು ಅಭಿನಂದಾರ್ಹವಾಗಿದೆ. ಈ ದಿನವನ್ನು ನಾವು ಹೆಮ್ಮೆಯಿಂದ ಬಂಟರ ದಿನಾಚರಣೆಯನ್ನೂ ಆಚರಿಸಿ
Related Articles
ಸಂಘದ ಮಾಜಿ ಅಧ್ಯಕ್ಷರೂ ಹಾಗೂ ಪುಣೆ ರಾಯಲ್ ಕೊನೊಟ್ ಬೋಟ್ ಕ್ಲಬ್‌ನ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮಾತನಾಡಿ, ನಮ್ಮ ಸಾಂಸ್ಕೃತಿಕ ಮಹತ್ವದ ಈ ದಿನ ಆಚರಿಸುತ್ತಿರುವುದಕ್ಕೆ ಅಭಿಮಾನವೆನಿಸುತ್ತಿದೆ. ನಮ್ಮ ಸಾಂಸ್ಕೃತಿಕ ಭವನವು ಸಂತೋಷ್ ಶೆಟ್ಟಿಯವರ ನೇತೃತ್ವದಲ್ಲಿ ಸುಂದರವಾಗಿ ರೂಪುಗೊಂಡಿದ್ದು ಮುಂದಿನ ದಿನಗಳಲ್ಲಿ ಸಂಘದ ಮುಖಾಂತರ ಕಾರ್ಯಕ್ರಮಗಳನ್ನು ಆಯೋ ಜಿಸುವಲ್ಲಿ ಇದೊಂದು ಉತ್ತಮ ವ್ಯವಸ್ಥೆ. ನಾವು ಬಂಟರು ಯಾವುದೇ ಕ್ಷೇತ್ರದಲ್ಲಿದ್ದರೂ ವಿಶೇಷ ನಾಯಕತ್ವದ ಗುಣದೊಂದಿಗೆ ಗುರುತಿಸಿಕೊಂಡು ಯಶಸ್ಸನ್ನು ಸಾಧಿಸುತ್ತಿರುವುದು ನಮ್ಮ ಹೆಮ್ಮೆ ಯಾಗಿದೆ. ಬಂಟ ಸಮಾಜದಲ್ಲಿ ಹುಟ್ಟಿರುವುದೇ ನಮ್ಮ ಸೌಭಾಗ್ಯವಾಗಿದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಮಾಧವ ಆರ್. ಶೆಟ್ಟಿ ಮತ್ತು ರಾಮಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ, ಕೋಶಾಧಿಕಾರಿ ಎರ್ಮಾಳ್ ಚಂದ್ರಹಾಸ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿಶ್ವನಾಥ್ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.
Advertisement
ಧ್ವಜಾರೋಹಣ/ಬಂಟ ಗೀತೆಮೊದಲಿಗೆ ಭವನದ ಎದುರುಗಡೆಯಲ್ಲಿ ಬಂಟ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಬಂಟ ಗೀತೆಯನ್ನು ಮೊಳಗಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವೀಣಾ ಪಿ. ಶೆಟ್ಟಿ ಬಳಗದಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಿಸುಪರ್ಬದ ನಿಮಿತ್ತ ದೇವರ ಆಕರ್ಷಕ ಅಲಂಕೃತ ಮಂಟಪ ರಚಿಸಿ ವಿವಿಧ ರೀತಿಯ ಬಗೆಬಗೆಯ ತರಕಾರಿಗಳನ್ನು ದೇವರೆದುರು ಇಟ್ಟು ಪೂಜಿಸಿ ಮಹಿಳಾ ಸದಸ್ಯೆಯರು ಆರತಿ ಬೆಳಗಿದರು. ಕಾರ್ಯಕ್ರಮದ ಕೊನೆಗೆ ತುಳುನಾಡಿನ ಸಾಂಪ್ರದಾಯಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಹಲವಾರು ರೀತಿಯ ತುಳುನಾಡ ಶೈಲಿಯ ವ್ಯಂಜನಗಳು ಗಮನಸೆಳೆಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಚಿತ್ರ-ವರದಿ : ಕಿರಣ್ ಬಿ. ರೈ ಕರ್ನೂರು