ಪುಣೆ: ಬಿಲ್ಲವ ಸಮಾಜ ಸೇವಾ ಸಂಘ ಪುಣೆ ಇದರ ಬೈದಶ್ರೀ ಕ್ರೀಡಾಕೂಟಕ್ಕೆ ಪೂರಕವಾಗಿ ಪುಣೆಯ ಬಿಲ್ಲವ ಸಮಾಜದ ಬಾಂಧವರಿಗಾಗಿ ಫೆ. 11ರಂದು ನಡೆದ ಬೈದಶ್ರೀ ಟ್ರೋಫಿ -2019 ಕ್ರಿಕೆಟ್ ಪಂದ್ಯಾಟದಲ್ಲಿ ಕಾತ್ರಾಜ್‌ನ ಅಂಬಿಕಾ ಗ್ರೂಪ್ ತಂಡವು ಪ್ರಶಸ್ತಿ ಹಾಗೂ ಬೈದಶ್ರೀ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕ್ರೀಡಾಕೂಟದಂದು ನಡೆದ ಸಮಾರೋಪ ಸಮಾರಂಭದಲ್ಲಿ ಸಂಘದ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಕಡ್ತಲ, ಮುಖ್ಯ ಅತಿಥಿ ಯಾದ ಸುಯಾಶ್ ಜಾಧವ್, ಪುಣೆ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ ಸುಂದರ್ ಪೂಜಾರಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಪುರಂದರ ಪೂಜಾರಿ ಮೊದಲಾವರು ಈ ಟ್ರೋಫಿಯನ್ನು ಅಂಬಿಕಾ ತಂಡಕ್ಕೆ ಪ್ರಾದಾನಿಸಿದರು.
ಪುಣೆಯ ತಲಜೈ ಕ್ರೀಡಾ ಮೈದಾನದಲ್ಲಿ ಪುಣೆ ಬಿಲ್ಲವ ಸಮಾಜ ಬಾಂಧವರಿಗಾಗಿ ಆಯೋಜಿಸಿದ್ದ ಈ ಕ್ರಿಕೆಟ್ ಪಂದ್ಯಾಟವನ್ನು ಪುಣೆ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷ ಸುಂದರ್ ಪೂಜಾರಿ ಹಾಗೂ ಅಧ್ಯಕ್ಷರಾದ ವಿಶ್ವನಾಥ್ ಪೂಜಾರಿ ಅವರು ತೆಂಗಿನ ಕಾಯಿ ಒಡೆದು ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.
ಸಂಘದ ಕ್ರೀಡಾ ಕಾರ್ಯಾದ್ಯಕ್ಷ ರಾಜೇಶ್ ಪೂಜಾರಿ ಮತ್ತು ಸಂಘದ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪಂದ್ಯಾಟದಲ್ಲಿ ಈ ಬಾರಿ ಪ್ರಥಮವಾಗಿ ಪುಣೆ ಬಿಲ್ಲವ ಮಹಿಳಾ ಎರಡು ಕ್ರಿಕೆಟ್ ತಂಡಗಳಾದ ಲೇಡಿಸ್ ವಾರಿಯರ್ಸ್ ಮತ್ತು ಶ್ರೀ ಶಕ್ತಿ ತಂಡದ ಜತೆಯಲ್ಲಿ, ಅಂಬಿಕಾ ಗ್ರೂಪ್, ಕೊಥ್ರೋಡ್ ವಾರಿಯರ್ಸ್, ದುರ್ಗಾ ಪರಮೇಶ್ವರಿ ಲಯನ್ಸ್, ಕೋಟಿ ಚೆನ್ನಯ ಗ್ರೂಪ್, ಗಾಯತ್ರಿ ಇಲೆವನ್, ಪ್ರಸ್ಸಿಯಂಟ್ ಗ್ರೂಪ್, ಅಚಾನಕ್ ಪ್ಲೇಯರ್ಸ್, ಜಾಹ್ನವಿ ಎಂಬ 8 ತಂಡಗಳು ಭಾಗವಹಿಸಿದ್ದವು.
ಲೀಗ್ ಮಾದರಿಯಲ್ಲಿ ನಡೆದ ಈ ಪಂದ್ಯಾಟದಲ್ಲಿ ಕೊನೆಯದಾಗಿ ಅಂಬಿಕಾ ಗ್ರೂಪ್ ಮತ್ತು ಗಾಯತ್ರಿ ತಂಡಗಳು ಫೈನಲ್‌ನಲ್ಲಿ ಮುಖಾಮುಖೀಯಾಗಿದ್ದು, ಅತ್ಯಂತಜಿದ್ದಿನ ಹೋರಾಟದಲ್ಲಿ ಅಂಬಿಕಾ ತಂಡವು ಗಾಯತ್ರಿ ತಂಡವನ್ನು ಸೋಲಿ ಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಗಾಯತ್ರಿ ತಂಡರನ್ನರ್ಸ್ ಪ್ರಶಸ್ತಿ ಮತ್ತು ಟ್ರೋಫಿಯನ್ನು ಪಡೆಯಿತು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ