Advertisement

ಮಹಾರಾಷ್ಟ್ರ: ಗಣಪತಿ ಮಂಡಲದಲ್ಲಿ ಶಿಂಧೆ-ಉದ್ಧವ್‌ ಠಾಕ್ರೆ ಮೂರ್ತಿ!

11:04 PM Aug 26, 2022 | Team Udayavani |

ಮುಂಬೈ: ಮಹಾರಾಷ್ಟ್ರದಾದ್ಯಂತ ಗಣಪನ ಹಬ್ಬವೆಂದರೆ ಅತ್ಯಂತ ವಿಶೇಷವಾಗಿಯೇ ಆಚರಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ಸಂಘ-ಸಂಸೆœಗಳು ವಿವಿಧ ಶೈಲಿಯ ಗಣೇಶನ ವಿಗ್ರಹಗಳನ್ನು ಕೂರಿಸಲಿವೆ.

Advertisement

ಮಹಾರಾಷ್ಟ್ರದ ಪ್ರಮುಖ ನಗರ ಪುಣೆಯ ಸ್ಥಳೀಯ ಸಮಿತಿಯೊಂದು ಕೂರಿಸಲಿರುವ ಗಣೇಶನ ವಿಗ್ರಹಕ್ಕೆ ರಾಜಕೀಯ ಟಚ್‌ ಸಿಗಲಿದೆ. ಈ ಬಾರಿ ಶಿವಸೇನೆಯ ಶಿಂಧೆ ಹಾಗೂ ಉದ್ಧವ್‌ ಠಾಕ್ರೆ ಅವರ ಬಣಗಳಿರಲಿವೆ!

ಗಣೇಶ ಮಂಡಲದ ಅಲಂಕಾರಕ್ಕಾಗಿ ಶಿಂಧೆ ಬಣ ಹಾಗೂ ಉದ್ಧವ್‌ ಠಾಕ್ರೆ ಅವರ ಪ್ರತಿಮೆ ಸಿದ್ಧಮಾಡಿಕೊಡಲು ಪ್ರಸಿದ್ಧ ಕಲಾಕಾರ ಸತೀಶ್‌ ತರು ಅವರಿಗೆ ಆರ್ಡರ್‌ ಕೊಟ್ಟಿವೆ. ಈ ಪ್ರತಿಮೆಗಳ ಮೂಲಕ ರಾಜ್ಯದ ರಾಜಕೀಯ ಹೊಯ್ದಾಟವನ್ನು ಪ್ರತಿಬಿಂಬಿಸುವ ಪ್ರಯತ್ನವನ್ನು ಯುವಕರ ತಂಡ ಮಾಡಲಿದೆಯಂತೆ.

ಇತ್ತೀಚೆಗಷ್ಟೇ ಮಹಾ ವಿಕಾಸ ಅಘಾಡಿ ಸರ್ಕಾರ ಪತನಗೊಂಡು ಶಿವಸೇನೆಯ ಏಕನಾಥ ಶಿಂಧೆ ಬಣ ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next