Advertisement

ಬಟ್ಟೆ ಶೋ ರೂಮ್ ನೊಳಗೆ ಬೆಂಕಿ; ಮಲಗಿದ್ದ ಐವರು ಕೆಲಸಗಾರರ ಸಾವು

09:44 AM May 10, 2019 | Team Udayavani |

ಪುಣೆ: ಬಟ್ಟೆ ಶೋರೂಂನೊಳಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಐದು ಮಂದಿ ಸಾವನ್ನಪ್ಪಿರುವ ಘಟನೆ ಪುಣೆಯ ಉರೂಲಿ ದೇವಾಚಿ ಗ್ರಾಮದಲ್ಲಿ ಗುರುವಾರ ನಡೆದಿದೆ.

Advertisement

ಇಂದು ಮುಂಜಾನೆ ರಾಜ್ ಯೋಗ್ ಸೀರೆ ಮಳಿಗೆಯೊಳಗೆ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಹೊತ್ತಿನಲ್ಲಿ ಬೆಂಕಿ ಇತರೆಡೆಗೂ ಹಬ್ಬತೊಡಗಿತ್ತು. ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನ ಹಾಗೂ 10 ನೀರಿನ ಟ್ಯಾಂಕರ್ ಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿವೆ ಎಂದು ವರದಿ ಹೇಳಿದೆ.

ಸುಮಾರು ಎರಡು, ಮೂರು ಗಂಟೆಗಳ ಕಾಲ ಕಾರ್ಯಾಚರಣೆ ಮೂಲಕ ಬೆಂಕಿಯನ್ನು ಹತೋಟಿಗೆ ತರಲು ಯಶಸ್ವಿಯಾಗಿವೆ. ಏತನ್ಮಧ್ಯೆ ಶೋರೂಂನೊಳಗೆ ಮಲಗಿದ್ದ ಕೆಲಸಗಾರರು ಬೆಂಕಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಶರೀರಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಅಗ್ನಿ ಅವಘಡದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರುಬಹುದು ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next