Advertisement
ದೊಡ್ಡ ನಾಯಕರ “ಪಂಚಿಂಗ್ ಬ್ಯಾಗ್’ ಆಗಿರುವ ಸಿಎಂಗೆ ಅಧಿಕಾರ ಉಳಿಸಿಕೊಳ್ಳುವುದೇ ಕೆಲಸವಾಗಿದೆ ಎಂದು ಗೇಲಿ ಮಾಡಿದರು. ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಎಷ್ಟು ರೈತರಿಗೆ ಸಾಲ ಮನ್ನಾ ಲಾಭ ತಲುಪಿದೆ ಹೇಳಿ ಎಂದು ಪ್ರಶ್ನಿಸಿದರಲ್ಲದೆ, 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ಇದುವರೆಗೆ ಕೇವಲ 60 ಸಾವಿರ ಜನರಿಗೆ ಮಾತ್ರ ಇದರ ಅಲ್ಪ ಪ್ರಯೋಜನ ತಲುಪಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಂದು ಭರವಸೆ ನೀಡಿ, ಈಗ 10 ವರ್ಷಗಳ ಸಾಲ ಮನ್ನಾ ಯೋಜನೆ ಜಾರಿಗೆ ಸಮ್ಮಿಶ್ರ ಸರಕಾರ ಮುಂದಾಗಿದ್ದು, ಕಳೆದ ಹಲವಾರು ವರ್ಷಗಳಿಂದ ರೈತರು, ಜನರನ್ನು ವಂಚಿಸುವ ಹಾಗೂ ಮತಕ್ಕಾಗಿ ಇಂತಹ ಆಟವನ್ನು ವಿಪಕ್ಷಗಳು ಮಾಡುತ್ತ ಬಂದಿವೆ. ಕರ್ನಾಟಕದಲ್ಲಿನ ಸಾಲ ಮನ್ನಾ ಯೋಜನೆ ಪ್ರಯೋಜನ ಅಲ್ಪ ಜನರಿಗೆ ತಲುಪಿದ್ದರೆ, ಇದರಲ್ಲೂ ಕೆಲವರ ಜೇಬಿಗೆ ಈ ಹಣ ಹೋಗಿದೆ ಎಂದು ಸಾಲ ಮನ್ನಾದಲ್ಲೂ ಅವ್ಯವಹಾರದ ಶಂಕೆ ವ್ಯಕ್ತಪಡಿಸಿದರು.
Related Articles
ರವಿವಾರ ವಸಂತ ಪಂಚಮಿ. ಇಂದಿನಿಂದ ವಾತಾವರಣದಲ್ಲಿ ಬದಲಾವಣೆ ಆಗಲಿದೆ. ಅದೇ ರೀತಿ ಕರ್ನಾಟಕ ರಾಜನೀತಿ ವಾತಾವರಣದಲ್ಲೂ ಬದಲಾವಣೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚ್ಯವಾಗಿ ಹೇಳಿದರು.
Advertisement
ರೆಸಾರ್ಟ್‌ನಲ್ಲಿ ಹೊಡೆದಾಟಕರ್ನಾಟಕದ ಸಮ್ಮಿಶ್ರ ಸರಕಾರ ದಲ್ಲಿನ ಗೊಂದಲ, ಆಡಳಿತ ಪಕ್ಷದ ಶಾಸಕರೇ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಳ್ಳು ತ್ತಾರೆ. ಬಡವರ ಬಗ್ಗೆ ಮಾತನಾಡುವವರ ಯೋಜನೆಗಳು ಐಷಾರಾಮಿ ಬಂಗಲೆಗಳಲ್ಲಿ ನಿರ್ಧರಿತವಾಗುತ್ತಿವೆ.
-ನರೇಂದ್ರ ಮೋದಿ, ಪ್ರಧಾನಿ ಭಾಗವಹಿಸದ ಸಿಎಂ
ಮೋದಿ ಹುಬ್ಬಳ್ಳಿಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರ ಉಳಿದಿದ್ದಾರೆ. ರಾಜ್ಯ ಸರಕಾರದ ಪರ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಭಾಗವಹಿಸಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ ಕಾರವೂ ಹಣ ನೀಡುತ್ತದೆ. ಆದರೆ ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಪ್ರಧಾನಿ ಮೋದಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ಬಲಿಷ್ಠ ಸರಕಾರ ಜನರ ಆಯ್ಕೆ
ನರೇಂದ್ರ ಮೋದಿಯವರೆ, ಕರ್ನಾಟಕದ ಜನತೆ ನಿಮ್ಮನ್ನು ಸಾಮಾಜಿಕ ಜಾಲ ತಾಣದ ಮೂಲಕ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಭ್ರಷ್ಟಾಚಾರ, ಆಡಳಿತ ವೈಫಲ್ಯ, ಸುಳ್ಳು ಭರವಸೆಗಳು, ಯಾಮಾರಿಸುವ ತಂತ್ರಗಾರಿಕೆ, ಕರ್ನಾಟಕಕ್ಕೆ ಮಾಡಿರುವ ಮೋಸದ ಬಗ್ಗೆ ಪ್ರಶ್ನಿಸಿದ್ದಾರೆ. ಯಾವ ಪ್ರಶ್ನೆಗೂ ಉತ್ತರಿಸಲು ನಿಮ್ಮ 56 ಇಂಚಿನ ಎದೆ ಧೈರ್ಯ ನೀಡಲಿಲ್ಲವೇ ? ಮೋದಿ ಯವರೇ ತಮಗೂ ಸತ್ಯಕ್ಕೂ ಹೊಂದಾಣಿಕೆ ಆಗುವುದಿಲ್ಲವೇ? ನಿಮ್ಮ ಬಾಯಿಂದ ಸತ್ಯ ಮತ್ತು
ವಾಸ್ತವ ಹೊರಡುವುದಿಲ್ಲವೇ?
ಟ್ವೀಟ್ ಮೂಲಕ ಕಾಂಗ್ರೆಸ್ ಪ್ರಶ್ನೆ ಮೋದಿ ಹೇಳಿದ್ದೇನು?
ರೆಸಾರ್ಟ್‌ನಲ್ಲಿ ಶಾಸಕರು ಹೊಡೆದಾಡುತ್ತಿದ್ದಾರೆ. ಬಡವರ ಬಗ್ಗೆ ಮಾತನಾಡುವವರ ಯೋಜನೆಗಳು ಬಂಗಲೆಗಳಲ್ಲಿ ನಿರ್ಧರಿತವಾಗುತ್ತಿವೆ. ನವಭಾರತ ನಿರ್ಮಾಣಕ್ಕೆ ಕರ್ನಾಟಕದಂತಹ ದುರ್ಬಲ ಸರಕಾರ ಬೇಕೋ ಅಥವಾ ಬಲಿಷ್ಠ, ಸದೃಢ ಸರಕಾರ ಬೇಕೋ ನಿರ್ಧರಿಸಿ. ವಿಧಾನಸಭೆ ಚುನಾವಣೆ ವೇಳೆ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. 43 ಲಕ್ಷ ರೈತರ ಪೈಕಿ 60 ಸಾವಿರ ಮಂದಿಗೆ ಮಾತ್ರ ಲಾಭ. ಅದರಲ್ಲಿ ಕೆಲವು ಪ್ರಮಾಣ ಹಲವರ ಜೇಬಿಗೆ ಕೂಡ ಹೋಗಿರುವ ಸಾಧ್ಯತೆ ಇದೆ. ಬಡವರಿಗೆ ಎಂದು ಸರಕಾರದಿಂದ ಪ್ರಕಟಗೊಂಡಿರುವ ಯೋಜನೆಗಳು ಅರ್ಹರಿಗೇ ತಲಪುತ್ತದೆಂದು ಈ ಚೌಕಿದಾರ ವಾಗ್ಧಾನ ಮಾಡುತ್ತಾನೆ. ಇಂದಿನಿಂದ ವಾತಾವರಣದಲ್ಲಿ ಬದ ಲಾವಣೆ ಆಗಲಿದೆ. ಅದೇ ರೀತಿ ಕರ್ನಾಟಕ ರಾಜನೀತಿ ವಾತಾವರಣ ದಲ್ಲೂ ಬದಲಾವಣೆ ಆಗಲಿದೆ.