Advertisement
ಇದು ಅವರ ಕಡೆಯ ಚುನಾವಣೆಯಾಗಿದ್ದು, ಈ ಬಾರಿ ಕಾಂಗ್ರೆಸ್‌ಗೆ ವೋಟ್ ಹಾಕಿ. ಅಕಾಲಿದಳ ಸರ್ಕಾರ ಕೆಟ್ಟ ಆಡಳಿತ ನಡೆಸಿದ್ದು ರಾಜ್ಯದಲ್ಲಿ ಮಾದಕ ವಸ್ತುಗಳ ಹಾವಳಿ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದ ರಾಹುಲ್, ಭ್ರಷ್ಟಾಚಾರ ಕಡೆಗಣಿಸುವ ಮಾತುಗಳನ್ನಾಡುತ್ತಿರುವವರು, ಇಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಶಿರೋಮಣಿ ಅಕಾಲಿ ದಳದೊಂದಿಗೆ ದೋಸ್ತಿ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಜಲಂಧರ್: ಬೆಳಗ್ಗೆ ರಾಹುಲ್ ಗಾಂಧಿ ಕಾಂಗ್ರೆಸ್ ಪರ ಪ್ರಚಾರ ನಡೆಸಿದರೆ, ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ಅಭ್ಯರ್ಥಿಗಳ ಪರ ಜಲಂಧರ್‌ನಲ್ಲಿ ಭರ್ಜರಿ ರ್ಯಾಲಿ ನಡೆಸಿದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಮತ ಹಾಕಲು ಹೋಗಬೇಡಿ. ಹಿಂದೆ ನೀಡಿದ್ದ ಭರವಸೆಗಳನ್ನೇ ಅವರು ಈಡೇರಿಸಿಲ್ಲ ಎಂದರು. ಸಟ್ಲೆàಜ್ ಕಾಲುವೆಯ ವಿವಾದವನ್ನು ಪ್ರಸ್ತಾಪಿಸಿ, ಈ ನದಿಯಿಂದ ಪಾಕ್‌ನತ್ತ ಹೋಗುವಾಗ ನೀರನ್ನು ಬಳಸಿಕೊಳ್ಳುವ ಹಕ್ಕುಗಳು ಪಂಜಾಬ್‌ಗಿದೆ ಎಂದರು. ಮುಗಿಯದ ಸೀಟಿನ ಹಗ್ಗಜಗ್ಗಾಟ
ಲಕ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆಯಷ್ಟೇ, ಆದರೆ ಇನ್ನೂ ಸೀಟು ಹಂಚಿಕೆಯ ಹಗ್ಗಜಗ್ಗಾಟ ಮುಗಿದೇ ಇಲ್ಲ. ರಾಯ್‌ಬರೇಲಿ ಮತ್ತು ಅಮೇಥಿಯ ಎಲ್ಲ 10 ವಿಧಾನಸಭಾ ಕ್ಷೇತ್ರಗಳು ತನಗೇ ಬೇಕು ಎಂಬುದು ಕಾಂಗ್ರೆಸ್‌ನ ಬೇಡಿಕೆ. ಆದರೆ ಈಗಾಗಲೇ ಎಸ್ಪಿ ಈ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ 5 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ. ಮೈತ್ರಿ ಘೋಷಣೆಯಾದ ಮೇಲೆ ಈ ಅಭ್ಯರ್ಥಿಗಳ ಹೆಸರನ್ನು ವಾಪಸ್ ತೆಗೆದುಕೊಳ್ಳಬಹುದು ಎಂದೇ ಹೇಳಲಾಗಿತ್ತು. ಆದರೆ ಇದುವರೆಗೂ ಎಸ್ಪಿ ಈ ನಿರ್ಧಾರ ತೆಗೆದುಕೊಳ್ಳದೇ ಇರುವುದು ಸ್ಥಳೀಯ ಕಾಂಗ್ರೆಸ್ ಮುಖಂಡರ ಆತಂಕಕ್ಕೆ ಕಾರಣವಾಗಿದೆ.
Related Articles
Advertisement