Advertisement

ಜ.31ಕ್ಕೆ ಲೋಕಾರ್ಪಣೆಗೊಳ್ಳಲಿದೆ ‘ಪಂಪ್ ವೆಲ್’ ಫ್ಲೈಓವರ್

10:00 AM Jan 31, 2020 | Hari Prasad |

ಮಂಗಳೂರು: ಕಳೆದ ಹತ್ತು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇದ್ದ ಪಂಪ್ ವೆಲ್ ಫ್ಲೈ ಓವರ್ ಮೇಲೆ ವಾಹನಗಳ ಓಡಾಟಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶುಕ್ರವಾರದಂದು ಪಂಪ್ ವೆಲ್ ಮೇಲ್ಸೇತುವೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ.

Advertisement

ನವಯುಗ ನಿರ್ಮಾಣ ಸಂಸ್ಥೆಯ ಉಸ್ತುವಾರಿಯಲ್ಲಿ ನಡೆಯುತ್ತಿದ್ದ ತಲಪಾಡಿಯಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಅಡಿಯಲ್ಲಿ ಈ ಫ್ಲೈ ಓವರ್ ನಿರ್ಮಾಣವೂ ಒಂದಾಗಿತ್ತು.

ಆದರೆ ವಿವಿಧ ಕಾರಣಗಳಿಂದ ಈ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿತ್ತು. ಮಾತ್ರವಲ್ಲದೇ ಮಂಗಳೂರು ನಗರಕ್ಕೆ ಪ್ರವೇಶ ಕಲ್ಪಿಸುವ ಮತ್ತು ಎರಡು ಪ್ರಮುಖ ಹೆದ್ದಾರಿಗಳು ಸಂಗಮಿಸುವ ಜಾಗದಲ್ಲೇ ಈ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದುದರಿಂದ ಇದರ ನಿಧಾನ ಕಾಮಗಾರಿ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಸದಾ ಕಿರಿ ಕಿರಿ ಉಂಟು ಮಾಡುತ್ತಿತ್ತು. ಮಾತ್ರವಲ್ಲದೇ ಅರೆ ಬರೆ ನಿರ್ಮಾಣ ಕಾಮಗಾರಿಯಿಂದಾಗಿ ಈ ಭಾಗದಲ್ಲಿ ಹಲವಾರು ಅಪಘಾತಗಳೂ ಸಂಭವಿಸಿದ್ದವು.

ಇದೀಗ ಬಹುಚರ್ಚಿತ ಪಂಪ್ ವೆಲ್ ಫ್ಲೈ ಓವರ್ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವುದರೊಂದಿಗೆ ಈ ಭಾಗದಲ ವಾಹನ ದಟ್ಟಣೆ ಸಮಸ್ಯೆಗೊಂದು ಮುಕ್ತಿ ಸಿಗುವ ನಿರೀಕ್ಷೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next