ಭರಮಸಾಗರ (ಚಿತ್ರದುರ್ಗ):ಒಂದೆಡೆ ಬರದಿಂದ ಬಸವಳಿದಿರುವ ಅನ್ನದಾತನಿಗೆ ಇದೀಗ ಪಂಪ್ ಸೆಟ್ ಗಳಿಗೆ ಅಳವಡಿಸಿರುವ ಕೇಬಲ್ ಕಳ್ಳತನ ಮಾಡುತ್ತಿರುವ ಕಳ್ಳರ ಕಾಟಾದಿಂದ ಕಂಗಲಾಗಿದ್ದಾರೆ.
ಸಮೀಪದ ಕೋಗುಂಡೆ ಗ್ರಾಮದ ಬಳಿಯ ಮುಚ್ಚನೂರು ರಸ್ತೆಯಿಂದ ಸಾಗಲಗಟ್ಟೆ ರಸ್ತೆವರೆಗೆ ಸುಮಾರು ಮೂರು ಕಿ.ಮೀ ದೂರದ ಅಂತರದಲ್ಲಿ 30 ಕ್ಕೂ ಹೆಚ್ಚು ಪಂಪ್ ಸೆಟ್‌ಗಳಲ್ಲಿ ಅಳವಡಿಸಿದ್ದ ಕೇಬಲ್ ಕಟ್ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ನಡೆದು ಒಂದು ದಿನದ ಬಳಿಕ ಗುರುವಾರ ರಾತ್ರಿ ಕೊಳಹಾಳ್ ಬಳಿಯ ಎಸ್ ಕೆಎಂ ಪ್ಯಾಕ್ಟರೀ ಹಿಂಭಾಗದಿಂದ ಬೇಡರಶಿವನಕೆರೆ ಗ್ರಾಮದ ಮಾರ್ಗದ ಸುಮಾರು 30 ಕ್ಕೂ ಹೆಚ್ಚು ರೈತರಿಗೆ ಸೇರಿದ ಪಂಪ್ ಸೆಟ್ ಗಳಿಗೆ ಮೇಲ್ಭಾಗದಲ್ಲಿ ಅಳವಡಿಸಿದ ಕೇಬಲ್ ಕಟ್ ಮಾಡಿಕೊಂಡು ಪರಾರಿಯಾಗಿದ್ದಾರೆ.
ಕೆಲವೆಡೆ ಪಂಪ್ ಸೆಟ್ ಅಪರೇಟ್ ಮಾಡುವ ಬೋಡ್೯, ಪೈಪ್ ಗಳು, ಸ್ಪ್ರಿಂಕ್ಲರ್ ಸೆಟ್ ಸೇರಿದಂತೆ ರೈತರು ಬಳಸುವ ನೀರಾವರಿ ಉಪಕರಣಗಳು ಕಳ್ಳತನವಾಗುತ್ತಿವೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಭರಮಸಾಗರ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
ಘಟನೆ ನಡೆದ ಗ್ರಾಮಗಳಿಗೆ ಭರಮಸಾಗರ ಪೊಲೀಸರು ಭೇಟಿ ನೀಡಿ ಕಳ್ಳತನಕ್ಕೆ ಒಳಗಾದ ರೈತರ ಹೆಸರುಗಳನ್ನು ಬರೆದುಕೊಂಡು ಈ ಬಗ್ಗೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ ಎಂದು ರೈತರು ಪತ್ರಿಕೆಗೆ ತಿಳಿಸಿದ್ದಾರೆ.