Advertisement

ಪೋಷಕಾಂಶಗಳ ಕಣಜ: ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ

04:09 PM Sep 11, 2020 | Nagendra Trasi |

ಯಾವುದೇ ಪರ್ಯಾಯ ವ್ಯವಸ್ಥೆಗಳಿಲ್ಲದೆ ತುಂಬಾ ದಿನಗಳವರೆಗೆ ಕೆಡದೆ ಉಳಿಯುವಂತಹ ಒಂದು ತರಕಾರಿ ಎಂದರೆ ಈ ಬೂದು ಕುಂಬಳಕಾಯಿ. ಇದರಿಂದ ಹಲವಾರು ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಪಲ್ಯ, ಸಾಂಬಾರು, ಗೊಜ್ಜು, ಕುಂಬಳಕಾಯಿಹುಳಿ ಇತ್ಯಾದಿ ಬಗೆಯ ಖಾದ್ಯಗಳಾಗಿ ಕುಂಬಳಕಾಯಿಯನ್ನು ಸೇವಿಸಬಹುದು. ಇದರಿಂದ ತಯಾರಿಸುವ ಹಲ್ವ ಬಹಳ ರುಚಿಯಾಗಿರುತ್ತದೆ.

Advertisement

ಎಲ್ಲರಿಗೂ ಚಿರಪರಿಚಿತವಾಗಿರುವ “ಕಾಶಿ ಹಲ್ವ’ವನ್ನು ಕುಂಬಳಕಾಯಿಯಿಂದಲೇ ತಯಾರಿಸಲಾಗುತ್ತದೆ. ತನ್ನೊಳಗೆ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುವ ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ. ಬೂದು ಕುಂಬಳಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ. ಇದನ್ನು ಪೋಷಕಾಂಶಗಳ ಕಣಜವೆಂದೇ ಕರೆಯಬಹುದು.ಕಾರ್ಬೋಹೈಡ್ರೇಟ್‌, ಸಕ್ಕರೆ ಅಂಶ, ಫೈಬರ್‌ ಕೊಬ್ಬು, ಪ್ರೋಟೀನ್‌, ವಿಟಮಿನ್‌ ಎ, ಬಿ1, ಬಿ2, ಬಿ3, ಬಿ5, ಬಿ6, ಬಿ9, ಸಿ, ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನೇಶಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್ ‌ಅಂಶಗಳನ್ನು ಹೊಂದಿರುವ ಕುಂಬಳಕಾಯಿಯನ್ನುಇಷ್ಟ ಪಡದವರೂ ಕೂಡ ಅದರೊಳಗಿರುವ ಆರೋಗ್ಯವೃದ್ಧಿ ಅಂಶಗಳಿಗಾದರೂ ಸೇವಿಸಲೇಬೇಕು.

ಇದನ್ನೂ ಓದಿ: ಬಹುಪಯೋಗಿ ಕಪ್ಪು ಉಪ್ಪು

ಇದರ ಸೇವನೆಯು ಶೈತ್ಯಾಕಾರಕ ಮತ್ತು ಮೂತ್ರಕೋಶದ ತೊಂದರೆಗಳನ್ನು ಕಡಿಮೆಗೊಳಿಸುತ್ತದೆ. ಬೂದು ಕುಂಬಳಕಾಯಿಯಲ್ಲಿದೇಹದ ಶಕ್ತಿವರ್ಧನೆಯ ಗುಣಗಳೂ ಇವೆ.ಉರಿಯೂತ, ಸ್ಟುನ್‌, ಪ್ರತ್ಯಾಮ್ಲ, ಅಲ್ಸರ್‌ಇತ್ಯಾದಿಗಳ ವಿರುದ್ಧ ಹೋರಾಡುವ ಗುಣವನ್ನುಇದು ಹೊಂದಿದೆ ಎಂದು ಸಂಶೋಧನೆಗಳು ಹೇಳುತ್ತವೆ. ಬೂದು ಕುಂಬಳಕಾಯಿಯ ಎಲೆ, ಹೂ, ಕಾಯಿಬೀಜ ಹೀಗೆ ಎಲ್ಲ ಭಾಗಗಳೂ ಉಪಯೋಗಕ್ಕೆ ಬರುತ್ತದೆ.

ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬೂದುಕುಂಬಳಕ್ಕೆ ಹೆಚ್ಚಿನ ಆದ್ಯತೆ ಇದೆ. ಇದರ ಬೀಜಗಳಲ್ಲಿ ಜಂತು ನಾಶಕ ಗುಣಗಳಿವೆ. ಕುಂಬಳಕಾಯಿಯ ಉಪಯೋಗ ಅದರ ಬೆಳವಣಿಗೆಯ ಮೇಲೆ ನಿರ್ಧಾರವಾಗುತ್ತದೆ. ಕುಂಬಳಕಾಯಿ ಬೀಜಗಳನ್ನು ತಿನ್ನಬಹುದು. ಇವು ಸಹ ಪ್ರೊಟೀನ್‌, ಜಂಕ್‌, ಟುನ್‌, ಮ್ಯಾಂಗನೀಸ್‌, ಫಾಸ್ಫ³ರಸ್‌ ಅಂಶಗಳನ್ನುಒಳಗೊಂಡಿವೆ ಮತ್ತು ಕೊಬ್ಬು ಕರಗಿಸುವ ಗುಣಹೊಂದಿವೆ. ಕುಂಬಳಕಾಯಿ ಬೀಜಗಳಿಂದ ಎಣ್ಣೆಯನ್ನುತಯಾರಿಸುತ್ತಾರೆ.

Advertisement

ಇದು ರಕ್ತನಾಳ ಮತ್ತು ನರಗಳನ್ನುಶಕ್ತಿ ಯುತವಾಗಿಸು ತ್ತವೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ಫೈಬರ್‌ ಅಂಶಹೆಚ್ಚಿರುವುದರಿಂದ ಮಲಬದ್ಧತೆ ನಿವಾರಿಸುತ್ತದೆ. ಖಾಲಿ ಹೊಟ್ಟೆಗೆ ಇದರ ರಸ ಸೇವನೆ ಯಿಂದ ವಿಶೇಷವಾಗಿ ಕರುಳಿನ ಹುಣ್ಣಿಗೆ ಉತ್ತಮ ಔಷಧಿ. ಬೂದು ಕುಂಬಳಕಾಯಿಯಲ್ಲಿ ನೀರಿನ ಅಂಶ ಹೆಚ್ಚು.ಇದ ರಿಂದ ಮೂತ್ರವನ್ನು ಹೆಚ್ಚಿಸಿ ಮೂತ್ರಕೋಶವನ್ನು ಶುದ್ಧಿಗೊಳಿಸುತ್ತದೆ.

ಇದನ್ನೂ ಓದಿ: ಬೀಟ್‌ರೂಟ್‌….ಕೆಂಪುಗಡ್ಡೆಯಲ್ಲಿ ಅಡಗಿದೆ ಸಹಸ್ರಾರು ಪೋಷಕಾಂಶ

ದೇಹದ ತೂಕ ಇಳಿಸಿಕೊಳ್ಳಲುಹಾಗೂ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೂದುಕುಂಬಳ ಬಲು ಉಪಯೋಗಿ. ಕೊಬ್ಬರಿ ಎಣ್ಣೆಯಲ್ಲಿ ಬೂದುಕುಂಬಳ ಕಾಯಿ ಯಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಬೆಳೆಯಲು ಸಹಕಾರಿ. ಒಣ ಮತ್ತು ಒರಟು ತಲೆಗೆಮೃದುತ್ವ ನೀಡುತ್ತದೆ. ಇದರ ತಿರುಳಿನಿಂದ ಕುಷ್ಮಾಂಡ ಲೇಹವನ್ನು ತಯಾರಿಸಲಾಗುತ್ತದೆ. ಇದರ ತೈಲವನ್ನುತಲೆಗೆ ಹಚ್ಚಿಕೊಳ್ಳುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next