· ಕುಂಬಳಕಾಯಿ- 2 ಕಪ್
· ತುಪ್ಪ- 1/4 ಕಪ್
· ಸಕ್ಕರೆ- 1/2 ಕಪ್
· ಏಲಕ್ಕಿ- ಸ್ವಲ್ಪ
· ಗೋಡಂಬಿ- 5-6
· ಒಣದ್ರಾಕ್ಷಿ -ಸ್ವಲ್ಪ
Advertisement
ಮಾಡುವ ವಿಧಾನ:ಮೊದಲು ಕುಂಬಳಕಾಯಿಯ ದಪ್ಪ ಸಿಪ್ಪೆ ತೆಗೆದು ಸಣ್ಣದಾಗಿ ತುಂಡುಮಾಡಿಕೊಳ್ಳಿ. ಅನಂತರ ಅದನ್ನು ತುರಿದುಕೊಳ್ಳಿ. ತುರಿದ ಕುಂಬಳಕಾಯಿಯನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ಕುಂಬಳಕಾಯಿ ತುರಿ ಮೆದುವಾದ ಅನಂತರ ಅದರಲ್ಲಿರುವ ನೀರನ್ನು ತೆಗೆಯಬಹುದು ಅಥವಾ ನೀರು ಆವಿಯಾಗುವವರೆಗೆ ಬೇಯಿಸಿಕೊಳ್ಳಬಹುದು. 1/2 ಕಪ್ ಸಕ್ಕರೆಯನ್ನು ನೀರಿಗೆ ಹಾಕಿ ಅಥವಾ ಕುಂಬಳಕಾಯಿಯ ನೀರು ಇದ್ದರೆ ಅದಕ್ಕೆ ಹಾಕಿ ನೀರು ದಪ್ಪವಾಗುವವರೆಗೆ ಕುದಿಸಿ. ನಂತರ ಅದನ್ನು ಮೊದಲೇ ಬೇಯಿಸಿದ ಕುಂಬಳಕಾಯಿ ತುರಿಗೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ. ನೀರು ಆವಿಯಾಗುವವರೆಗೆ ಹಾಗೆಯೇ ಇಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಅದು ಬಿಸಿ ಮಾಡಿಕೊಳ್ಳಿ. ಅನಂತರ ಅದಕ್ಕೆ ಒಣದ್ರಾಕ್ಷಿ, ಗೋಡಂಬಿ, ಏಲಕ್ಕಿ ಹಾಕಿ ಅದು ಕಂದು ಬಣ್ಣಕ್ಕೆ ಬಂದಾಗ ಕುಂಬಳಕಾಯಿ ಗಟ್ಟಿಗೆ ಹಾಕಿ. ಸ್ವಲ್ಪ ಸಣ್ಣ ಉರಿಯಲ್ಲಿ ನೀರು ಆವಿಯಾಗಲು ಬಿಡಿ. ಗಟ್ಟಿಯಾದ ಹದಕ್ಕೆ ಬಂದರೆ ಅದನ್ನು ತೆಗೆಯಿರಿ. ಈಗ ಕುಂಳಕಾಯಿ ಹಲ್ವ ತಿನ್ನಲು ಸಿದ್ಧ.