Advertisement

ಮೂಲರಪಟ್ಣ: ಅಪಾಯಕಾರಿ ಸ್ಥಿತಿಯಲ್ಲಿ ಪಂಪ್‌ ಹೌಸ್‌

02:15 AM Jun 30, 2018 | Team Udayavani |

ಬಂಟ್ವಾಳ: ಅರ್ಲ ಗ್ರಾ.ಪಂ. ವ್ಯಾಪ್ತಿಯ ಮೂಲರಪಟ್ಣ ನೀರು ಸರಬರಾಜು ಪಂಪ್‌ ಹೌಸ್‌ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿದ್ದು, ತೀರಾ ಅಪಾಯಕಾರಿ ಸ್ಥಿತಿಯಲ್ಲಿದೆ. ಪಂಪ್‌ ಹೌಸ್‌ ಗೆ ಸರಿಯಾದ ಬಾಗಿಲು ಇಲ್ಲದೆ ವಿದ್ಯುತ್‌ ಸಂಪರ್ಕವು ತೆರೆದ ಸ್ಥಿತಿಯಲ್ಲಿದ್ದು, ಮಳೆ ನೀರು ಪಂಪ್‌ ಹೌಸ್‌ ಒಳಗೆ ನುಗ್ಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಪಂಪ್‌ ಹೌಸ್‌ ಒಳಗೆ ಹೋಗಲು ಕೆಂಪು ಕಲ್ಲು ಹಾಕಿದ್ದು, ವಿದ್ಯುತ್‌ ತಂತಿಗಳು ನೀರಲ್ಲಿದ್ದು ಅಪಾಯ ಎದುರಾಗಬಹುದು. ಕೆಸರು ತುಂಬಿಕೊಂಡು ಅಪಾಯಕಾರಿ ಸ್ಥಿತಿಯಲ್ಲಿದೆ. ಹತ್ತಿರದಲ್ಲಿ ಶ್ರೀ ಚಂದ್ರನಾಥ ಸ್ವಾಮಿ ಹಿ.ಪ್ರಾ. ಶಾಲೆ ಇದ್ದು, ಶಾಲಾ ಮಕ್ಕಳು ಹೋಗಿ ಬರುವ ದಾರಿಯಾಗಿದೆ. ಯಾವುದೇ ಸಂದರ್ಭ ಅಪಾಯ ಎದುರಾಗಬಹುದು. ದುರ್ಘ‌ಟನೆ ನಡೆಯುವ ಮೊದಲು ಸಂಬಂಧಪಟ್ಟವರು ಗಮನ ಹರಿಸಿ ಸೂಕ್ತ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದು ನಾಗರಿಕ ಹಿತರಕ್ಷಣ ಸಮಿತಿ ಮನವಿ ಮಾಡಿದೆ.


Advertisement

Udayavani is now on Telegram. Click here to join our channel and stay updated with the latest news.

Next