Advertisement
ಸೋಮವಾರ ಮುಂಜಾವ ಪುಲ್ವಾಮಾದ ಪಿಂಗ್ಲಾನ್‌ನಲ್ಲಿ ಜೈಶ್-ಎ-ಮೊಹಮ್ಮದ್ ಸಂಘ ಟನೆಯ ಮೂವರು ಉಗ್ರರು ಅಡಗಿರುವ ಬಗ್ಗೆ ಸುಳಿವು ರಾಷ್ಟ್ರೀಯ ರೈಫಲ್, ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸರ ಕಾರ್ಯಾಚರಣೆಯ ತಂಡಕ್ಕೆ ಸಿಕ್ಕಿತು. ಅದನ್ನು ಆಧರಿಸಿ ಶೋಧ ಕಾರ್ಯ ಶುರು ಮಾಡಿದ ವೇಳೆ ಉಗ್ರರು ಗುಂಡು ಹಾರಿಸಿದರು. ಬಿರುಸಿನ ಕಾಳಗದಲ್ಲಿ ದಾಳಿಯ ರೂವಾರಿ ಕಮ್ರಾನ್‌ನನ್ನು ಕೊಲ್ಲಲಾಯಿತು. ಈತ ಜೈಶ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನ ಅತ್ಯಂತ ನಿಷ್ಠಾವಂತ ನಿಕಟವರ್ತಿ ಎಂದು ಹೇಳ ಲಾಗಿದೆ. ಜತೆಗೆ ಆತ ಪಾಕಿಸ್ಥಾನದ ಪ್ರಜೆ ಯಾಗಿ ದ್ದಾನೆ. ಈತ ಐಇಡಿ ಸಿದ್ಧಪಡಿಸುವಲ್ಲಿ ನಿಷ್ಣಾತ. ಉಗ್ರ ಆದಿಲ್ ದರ್‌ಗೆ ತರಬೇತಿ ನೀಡಿದ್ದ. ಮತ್ತೋರ್ವ ಉಗ್ರ ಹಿಲಾಲ್ ಅಹ್ಮದ್ ಸ್ಥಳೀಯನಾಗಿದ್ದು, ಬಾಂಬ್ ತಯಾರಿಕೆ ಯಲ್ಲಿ ಸಿದ್ಧಹಸ್ತ. ಜತೆಗೆ ಯುವಕರನ್ನು ಉಗ್ರಗಾಮಿ ಸಂಘಟನೆಗೆ ಸೇರಿಸುತ್ತಿದ್ದ. ಸಂಜೆ 3ನೇ ಉಗ್ರನನ್ನು ಹತ್ಯೆಗೈಯಲಾಗಿದೆ.
ಸೋಮವಾರ ಮುಂಜಾನೆ ಶೋಧ ಕಾರ್ಯ ಆರಂಭಗೊಂಡ ಗೊಳ್ಳುತ್ತಿದ್ದಂತೆ ಯಾವುದೇ ಪ್ರತಿ ರೋಧ ಎದುರಾಗಲಿಲ್ಲ. ಬಳಿಕ ಮನೆ ಮನೆಗಳಲ್ಲಿ ಹುಡುಕಾಟ ನಡೆಸುತ್ತಿದ್ದಾಗ ಉಗ್ರರು ಯೋಧರ ಮೇಲೆ ಹೊಂಚು ಹಾಕಿ ದಾಳಿ ನಡೆಸಿದರು. ಈ ಸಂದರ್ಭ ಮೇಜರ್ ಹುತಾತ್ಮರಾದರು. ಕಾರ್ಯಾಚರಣೆ ಸಂದರ್ಭ ಒಂದು ಮನೆಯಿಂದ ಇನ್ನೊಂದು ಮನೆಗೆ ಓಡಿ ತಪ್ಪಿಸಿಕೊಳ್ಳುತ್ತಿದ್ದ ಕಮ್ರಾನ್ ಅಲ್ಲಿಂದ ಅಡಗಿ ಕುಳಿತು ದಾಳಿ ನಡೆಸುತ್ತಿದ್ದ. ಇದರಿಂದಾಗಿ ಹೆಚ್ಚಿನ ಹಾನಿಯಾ ಯಿತು. ಕತ್ತಲು ಇದ್ದುದರಿಂದ ಕಾರ್ಯಾ ಚರಣೆಗೆ ತೊಂದರೆಯಾಯಿತು ಎಂದು ಸೇನಾಧಿಕಾರಿಗಳು ತಿಳಿಸಿದರು. ಮೇಜರ್ ಹುತಾತ್ಮ
ಕಾರ್ಯಾಚರಣೆಯಲ್ಲಿ ಉತ್ತರಾಖಂಡದ ಮೇ| ವಿ.ಎಸ್. ಧೋಂಡಿಯಾಲ್, ಹವಾಲ್ದಾರ್ ಶಿಯೋ ರಾಮ್, ಸಿಪಾಯಿ ಗಳಾದ ಹರಿ ಸಿಂಗ್ ಮತ್ತು ಅಜಯ ಕುಮಾರ್ ಹುತಾತ್ಮ ರಾಗಿದ್ದಾರೆ. ಅವರೆಲ್ಲರೂ 55 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರು. ಪೊಲೀಸ್ ಇಲಾಖೆಯ ಹೆಡ್ ಕಾನ್‌ಸ್ಟೆಬಲ್ ಓರ್ವರು ಹುತಾತ್ಮ ರಾಗಿದ್ದಾರೆ. ಗುಂಡಿನ ಚಕಮಕಿ ವೇಳೆ ಗಾಯಗೊಂಡ ನಾಗರಿಕರೋರ್ವರು ಅಸುನೀಗಿದ್ದಾರೆ. ಕಾರ್ಯಾಚರಣೆಯಲ್ಲಿ ದಕ್ಷಿಣ ಕಾಶ್ಮೀರದ ಐಜಿಪಿ ಅಮಿತ್ ಕುಮಾರ್, ಓರ್ವ ಬ್ರಿಗೇಡಿಯರ್, ಲೆಫ್ಟಿನೆಂಟ್ ಕರ್ನಲ್ ಸಹಿತ ಏಳು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಸ್ಥಿರವಾಗಿದೆ. ಡಿಐಜಿಗೆ ಕಿಬ್ಬೊಟ್ಟೆಯ ಭಾಗಕ್ಕೆ ಗುಂಡೇಟು ತಗಲಿದ್ದರೆ, ಬ್ರಿಗೇಡಿಯರ್ ಕಾಲಿಗೆ ಗುಂಡೇಟು ತಗುಲಿದೆ.
Related Articles
ಉಗ್ರರ ದಾಳಿ ಖಂಡಿಸಿರುವ ಅಖೀಲ ಭಾರತೀಯ ಚಿತ್ರ ಕಲಾವಿದರ ಸಂಸ್ಥೆ (ಎಐಸಿಡಬ್ಲುಎ), ಪಾಕಿ ಸ್ಥಾನದ ಯಾವುದೇ ಕಲಾವಿದರಿಗೆ ಮತ್ತು ಗಾಯಕರಿಗೆ ಭಾರತದ ಚಿತ್ರರಂಗದಲ್ಲಿ ಅವಕಾಶ ನೀಡದಂತೆ ಬಹಿಷ್ಕಾರ ಹೇರಿದೆ. ಈ ನಿಷೇಧವನ್ನು ಉಲ್ಲಂಸುವ ಚಿತ್ರ ನಿರ್ಮಾಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
Advertisement
“ಶಾಂತಿ ಬಸ್’ ಸಂಚಾರ ರದ್ದುಪುಲ್ವಾಮಾ ಘಟನೆ ಬಳಿಕ ಸೋಮವಾರ ಭಾರತ ಮತ್ತು ಪಾಕ್ ನಡುವಿನ ಬಸ್ ಸಂಚಾರ ವನ್ನೇ ರದ್ದು ಮಾಡಲಾಗಿದೆ. ಜಮ್ಮು-ಕಾಶ್ಮೀರದ ಪೂಂಛ…ನಿಂದ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್ ನಡುವೆ ವಾರಕ್ಕೊಮ್ಮೆ ಸಂಚರಿಸುತ್ತಿದ್ದ “ಶಾಂತಿ ಬಸ್’ ಸಂಚಾರವನ್ನು ರದ್ದು ಮಾಡಿರುವುದಾಗಿ ಪೂಂಛ… ಜಿಲ್ಲಾಡಳಿತ ಘೋಷಣೆ ಮಾಡಿದೆ. ಜಮ್ಮು-ಕಾಶ್ಮೀರ ಹಾಗೂ ಪಿಒಕೆ ನಡುವಿನ ಪ್ರಯಾಣ ಮತ್ತು ವ್ಯಾಪಾರಕ್ಕೆ ತಡೆ ಹೇರುವಂತೆ ಕೇಂದ್ರ ಗೃಹ ಸಚಿವಾಲಯದಿಂದ ಸೂಚನೆ ಬಂದಿದ್ದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಲಾಗಿದೆ. ಪೂಂಛ… ಜಿಲ್ಲೆಯ ಚಕನ್-ದಾ-ಬಾಗ್ ಮತ್ತು ಪಿಒಕೆ ನಡುವಿನ ಬಸ್ ಸಂಚಾರವು ಮಾಜಿ ಸಿಎಂ ಮುಫ್ತಿ ಮೊಹಮ್ಮದ್ ಸಯೀದ್ ಅವರ ಕನಸಿನ ಕೂಸಾಗಿತ್ತು. 18 ಗಂಟೆ ಕಾರ್ಯಾಚರಣೆ ಅವಧಿ
03 ಜೈಶ್-ಎ- ಮೊಹಮ್ಮದ್ ಉಗ್ರರು ಹತ
04 ಸೇನೆಯ ಹುತಾತ್ಮ ಯೋಧರು
01 ಪೊಲೀಸ್ ಮುಖ್ಯ ಪೇದೆ ಸಾವು
01 ಮೃತ ಪಟ್ಟ ನಾಗರಿಕ
07 ಗಾಯಗೊಂಡ ಪೊಲೀಸ್, ಸೇನೆ ಅಧಿಕಾರಿಗಳು