Advertisement

Pulwama ದಾಳಿಯ ಆರೋಪಿ ಹೃದಯಾಘಾತದಿಂದ ಸಾವು

12:43 AM Sep 25, 2024 | Team Udayavani |

ಜಮ್ಮು: 5 ವರ್ಷಗಳ ಹಿಂದೆ ನಡೆದಿದ್ದ ಪುಲ್ವಾಮಾ ಉಗ್ರ ದಾಳಿಯ ಆರೋಪಿಯೊಬ್ಬ ಹೃದಯಾಘಾತದಿಂದ ಜಮ್ಮು ವಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

Advertisement

ದಾಳಿಯ 19 ಆರೋಪಿಗಳಲ್ಲಿ ಒಬ್ಬನಾಗಿದ್ದ ಬಿಲಾಲ್‌ ಅಹ್ಮದ್‌ ಕುಚೆಯನ್ನು ಸೆ.17ರಂದು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಲಾಲ್‌ ಜೈಶ್‌-ಎ- ಮೊಹ ಮ್ಮದ್‌ ಉಗ್ರರಿಗೆ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಲ್ಲದೇ, ಉಗ್ರರಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾಗಿ ಆರೋಪಿಸಲಾಗಿತ್ತು.

ಫೆ.14ರಂದು ಪುಲ್ವಾಮಾದಲ್ಲಿ ಸ್ಫೋಟಕ ತುಂಬಿದ್ದ ಕಾರು ಢಿಕ್ಕಿ ಹೊಡೆದು 40 ಸಿಆರ್‌ಪಿಎಫ್ ಯೋಧರು ಮೃತರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next