Advertisement

ಪುಲ್ವಾಮಾ ದಾಳಿ ಅತ್ಯಂತ ಘೋರ ಪರಿಸ್ಥಿತಿ: ಡೊನಾಲ್ಡ್‌ ಟ್ರಂಪ್‌ ಕಿಡಿ

05:28 AM Feb 20, 2019 | udayavani editorial |

ಹೊಸದಿಲ್ಲಿ : ಕನಿಷ್ಠ  40 ಭಾರತೀಯ ಯೋಧರನ್ನು ಬಲಿಪಡೆದಿರುವ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಪುಲ್ವಾಮಾ ದಾಳಿಯನ್ನು ಅತ್ಯಂತ ಘೋರ ಪರಿಸ್ಥಿತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

Advertisement

“ನಾನು ಆ ದಾಳಿಯ ಚಿತ್ರಿಕೆಗಳನ್ನು ಕಂಡಿದ್ದೇನೆ; ಆ ಬಗ್ಗೆ ಸಾಕಷ್ಟು ವರದಿಗಳನ್ನು ಪಡೆದಿದ್ದೇನೆ; ಸರಿಯಾದ ಹೊತ್ತಿನಲ್ಲಿ ನಾವು ಅದಕ್ಕೆ ಸರಿಯಾದ ಉತ್ತರವನ್ನು ನೀಡುತ್ತೇವೆ; ಹಾಗಿದ್ದರೂ ಭಾರತ ಮತ್ತು ಪಾಕಿಸ್ಥಾನ ಈ ಘೋರ ಸನ್ನಿವೇಶವನ್ನು ದಾಟಿ ಮುನ್ನಡೆಯಲು ಸಾಧ್ಯವಾದರೆ ಅದೊಂದು ನಿಜಕ್ಕೂ ದೊಡ್ಡ ಅದ್ಭುತ’ ಎಂದು ಟ್ರಂಪ್‌ ತಮ್ಮ ಪತ್ರಿಕಾ ಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಯೊಂದರಕ್ಕೆ ಉತ್ತರವಾಗಿ ಹೇಳಿದರು.

ಪುಲ್ವಾಮಾ ದಾಳಿಯನ್ನು ಅನುಸರಿಸಿ ಟ್ರಂಪ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಅವರು ಭಾರತಕ್ಕೆ ಸ್ವಯಂ ರಕ್ಷಣೆಯ ಹಕ್ಕು ಇದೆ ಎಂದು ಸಾರುವ ಮೂಲಕ ಪಾಕ್‌ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಳ್ಳುವ ಭಾರತದ ಒಂದು ಆಯ್ಕೆಯನ್ನು ಸಮರ್ಥಿಸಿದ್ದರು. 

ಇದೇ ವೇಳೆ ಅಮೆರಿಕದ ವಿದೇಶ ಸಚಿವ ಮೈಕ್‌ ಪಾಂಪಿಯೋ, ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್‌ ಬೋಲ್ಟನ್‌ ಮತ್ತು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಸ್ಯಾಂಡರ್ಸ್‌ ಅವರು ಪತ್ಯೇಕ ಹೇಳಿಕೆಗಳನ್ನು ಹೊರಡಿಸಿ ಪಾಕಿಸ್ಥಾನ ಕೂಡಲೇ ಪುಲ್ವಾಮಾ ದಾಳಿ ನಡೆಸಿದ ಜೈಶ್‌ ಎ ಮೊಹಮ್ಮದ್‌ ಮತ್ತು ಅದರ ನಾಯಕರ ವಿರುದ್ಧ ಕಠಿನ ಕ್ರಮ ತೆಗೆದಕೊಳ್ಳಬೇಕು ಮತ್ತು ಭಯೋತ್ಪಾಕರ ಸುರಕ್ಷಿತ ತಾಣಗಳಿಗೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next