Advertisement

“ಮಾಸ್ಟರ್‌’ನಲ್ಲಿ ಪುಲ್ವಾಮಾ ಅಟ್ಯಾಕ್‌!

09:11 AM May 10, 2019 | Lakshmi GovindaRaj |

ಕನ್ನಡ ಚಿತ್ರರಂಗದ ಮಾಸ್‌ ಚಿತ್ರಗಳ ಮಾಸ್ಟರ್‌ ಖ್ಯಾತಿಯ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಮತ್ತೂಂದು ಆ್ಯಕ್ಷನ್‌ ಕಹಾನಿಯನ್ನು ತೆರೆಮೇಲೆ ತರೋದಕ್ಕೆ ರೆಡಿಯಾಗಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಓಂ ಪ್ರಕಾಶ್‌ ರಾವ್‌ ಇಟ್ಟಿರುವ ಹೆಸರು “ಮಾಸ್ಟರ್‌’. ಕಳೆದ ಕೆಲ ತಿಂಗಳಿನಿಂದ ಸದ್ದಿಲ್ಲದೆ ಈ ಸ್ಕ್ರಿಪ್ಟ್ ಕೆಲಸಗಳಲ್ಲಿ ನಿರತರಾಗಿದ್ದ ಓಂ ಪ್ರಕಾಶ್‌ ರಾವ್‌ ಸರಳವಾಗಿ ಚಿತ್ರದ ಮುಹೂರ್ತವನ್ನು ನೆರವೇರಿಸುವುದರ ಮೂಲಕ ಮಾಸ್ಟರ್‌ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.

Advertisement

ಇನ್ನು “ಮಾಸ್ಟರ್‌’ ಚಿತ್ರದಲ್ಲಿ “ಡೆಡ್ಲಿ ಸೋಮ’ ಖ್ಯಾತಿಯ ನಟ ಆದಿತ್ಯ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಆದಿತ್ಯ ಖಡಕ್‌ ಖಾಕಿ ತೊಟ್ಟು ಎಸಿಪಿ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಓಂ ಪ್ರಕಾಶ್‌ ರಾವ್‌ ಚಿತ್ರದಲ್ಲಿ ನಿರೀಕ್ಷಿಸಬಹುದಾದ ಭರ್ಜರಿ ಆ್ಯಕ್ಷನ್‌, ಮಾಸ್‌ ಡೈಲಾಗ್ಸ್‌, ಮಸ್ತ್ ಸಾಂಗ್ಸ್‌ ಹೀಗೆ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ ಎಲ್ಲವೂ ಈ ಚಿತ್ರದಲ್ಲಿ ಇರಲಿದೆ.

“ಮಾಸ್ಟರ್‌’ ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಓಂ ಪ್ರಕಾಶ್‌ ರಾವ್‌, “ನಮ್ಮ ದೇಶ ಸುಂದರವಾಗಿದ್ದರೂ, ದೇಶದ ಒಳಗಿರುವ ಮನಸ್ಸುಗಳು ಸುಂದರವಾಗಿಲ್ಲ. ಸಾವಿಗೆ ಏನು ಬೇಕೋ ಎಲ್ಲಾವನ್ನೂ ಕಂಡುಕೊಂಡಿದ್ದೇವೆ. ಆದರೆ ನಗುವುದಕ್ಕೆ ಏನೂ ಬೇಕೋ ಅದನ್ನು ಕಂಡುಕೊಂಡಿಲ್ಲ. ಇದೇ ಎಳೆಯನ್ನ ಇಟ್ಟುಕೊಂಡು ಈ ಚಿತ್ರವನ್ನು ಮಾಡುತ್ತಿದ್ದೇವೆ.

ಕೆಲ ತಿಂಗಳ ಹಿಂದೆ ನಡೆದ ಪುಲ್ವಾಮಾ ದಾಳಿ, ಅದರ ನಂತರದ ಬೆಳವಣಿಗೆಗಳು, ಇತ್ತೀಚೆಗೆ ನಡೆದ ಶ್ರೀಲಂಕಾ ಸ್ಫೋಟ ಹೀಗೆ ಕೆಲವು ನೈಜ ಘಟನೆಗಳನ್ನು ಆಧರಿಸಿ ಈ ಚಿತ್ರದ ಸ್ಕ್ರಿಪ್ಟ್ ಮಾಡಲಾಗಿದೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ವಿವರಣೆ ಕೊಡುತ್ತಾರೆ.

“ಮಾಸ್ಟರ್‌’ ಚಿತ್ರದಲ್ಲಿ ನಾಯಕ ಆದಿತ್ಯ ಅವರಿಗೆ ಇಬ್ಬರು ನಾಯಕಿಯರು ಜೋಡಿಯಾಗಿ ಹೆಜ್ಜೆ ಹಾಕಲಿದ್ದಾರೆ. ತೆಲುಗಿನ ಖ್ಯಾತ ನಟರೊಬ್ಬರು ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಸದ್ಯ ಚಿತ್ರದ ನಾಯಕಿಯರು ಮತ್ತು ಇತರೆ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರದ ಕಲಾವಿದರ ವಿವರ ಕೊಡುತ್ತೇವೆ’ ಎನ್ನುತ್ತಾರೆ ಓಂ ಪ್ರಕಾಶ್‌ ರಾವ್‌.

Advertisement

ಮೂರು ದಿನಗಳ ಹಿಂದಷ್ಟೇ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಿರುವ ಓಂ ಪ್ರಕಾಶ್‌ ರಾವ್‌ ಇದೇ ಶುಕ್ರವಾರದಿಂದ ಚಿತ್ರದ ಚಿತ್ರೀಕರಣ ಶುರು ಮಾಡಲಿದ್ದಾರೆ. ಸುಮಾರು 60 ದಿನಗಳ ಕಾಲ ಬೆಂಗಳೂರು, ಮೈಸೂರು, ಕಾಶ್ಮೀರ, ಮಹಾರಾಷ್ಟ್ರ ಮುಂತಾದ ಕಡೆಗಳಲ್ಲಿ ಚಿತ್ರದ ಶೂಟಿಂಗ್‌ಗೆ ಪ್ಲಾನ್‌ ಮಾಡಿಕೊಳ್ಳಲಾಗಿದೆ.

“ಶ್ರೀ ರೇಣುಕಾ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಎ.ಎಂ ಉಮೇಶ್‌ ರೆಡ್ಡಿ ನಿರ್ಮಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ತೆಲುಗು ಮೂಲದ ಜೀವನ್‌ ಬಾಬು (ಜೆ.ಬಿ) ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಹಿರಿಯ ಛಾಯಾಗ್ರಹಕ ಅಣಜಿ ನಾಗರಾಜ್‌ ಛಾಯಾಗ್ರಹಣ, ಲಕ್ಷ್ಮಣ್‌ ರೆಡ್ಡಿ ಸಂಕಲನ ಕಾರ್ಯವಿದೆ.

ಚಿತ್ರದ ಸಾಹಸ ದೃಶ್ಯಗಳಿಗೆ ಪಳನಿ ರಾಜ್‌ ಸಾಹಸ ಸಂಯೋಜಿಸುತ್ತಿದ್ದಾರೆ. ಎಲ್ಲಾ ನಮ್ಮ ಪ್ಲಾನ್‌ ಪ್ರಕಾರ ನಡೆದರೆ ಮುಂಬರುವ ದಸರಾ ಹಬ್ಬದ ವೇಳೆಗೆ ಮಾಸ್ಟರ್‌ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಿದೆ ಎನ್ನುತ್ತಾರೆ ಓಂ ಪ್ರಕಾಶ್‌ ರಾವ್‌. ಒಟ್ಟಾರೆ ಡೆಡ್ಲಿ ಸ್ಟಾರ್‌ ಆದಿತ್ಯ ಸದ್ಯ “ಮುಂದುವರೆದ ಅಧ್ಯಾಯ’ ಸೇರಿದಂತೆ ಒಂದಷ್ಟು ಚಿತ್ರಗಳಲ್ಲಿ ಅನಯಿಸುತ್ತಿದ್ದಾರೆ.

ಮತ್ತೂಂದೆಡೆ ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಕೂಡ ಸಾಲು ಸಾಲು ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇಷ್ಟೊಂದು ಚಿತ್ರಗಳ ನಡುವೆ ಈ ಇಬ್ಬರ ಕಾಂಬಿನೇಶನ್‌ನ “ಮಾಸ್ಟರ್‌’ ಚಿತ್ರ ಯಾವಾಗ ಬರುತ್ತದೆ, ಎಷ್ಟರ ಮಟ್ಟಿಗೆ ಮಾಸ್‌ ಆಡಿಯನ್ಸ್‌ ಮನಗೆಲ್ಲಲಿದೆ ಅನ್ನೋದು ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next