Advertisement
ಪ್ರತ್ಯೇಕಗೊಳಿಸಿದ್ದೇಕೆ?: ಯಶಸ್ವಿ ವೃತ್ತಿ ಬದುಕಿನ ತುತ್ತ ತುದಿಯಲ್ಲಿದ್ದಾಗ ಗೋಪಿಚಂದ್ ಅಕಾಡೆಮಿಯಲಿದ್ದ ಸೈನಾ ಕಿರಿಕ್ ಮಾಡಿಕೊಂಡು ಅಕಾಡೆಮಿ ತೊರೆದಿದ್ದರು. ಬಳಿಕ ಮಾಜಿ ಬ್ಯಾಡ್ಮಿಂಟನ್ ಆಟಗಾರ ವಿಮಲ್ ಕುಮಾರ್ ಅವರೊಂದಿಗೆ ಸೈನಾ ತರಬೇತಿ ಪಡೆದುಕೊಂಡರು. ಆದರೆ ಫಲಿತಾಂಶ ಮಾತ್ರ ಕಾಣಲಿಲ್ಲ. ಅತ್ತ ಗೋಪಿಚಂದ್ ಅಕಾಡೆಮಿಯಲ್ಲಿದ್ದ ಸಿಂಧು ಭರ್ಜರಿ ಪ್ರದರ್ಶನ ನೀಡುವ ಮೂಲಕ ಸೈನಾರನ್ನೇ ಮೀರಿ ನಿಂತರು. ಇದಾದ ಕೆಲವು ವರ್ಷದ ಬಳಿಕ ಸೈನಾ ಮರಳಿ ಗೋಪಿಚಂದ್ ಅಕಾಡೆಮಿಗೆ ಬಂದಿದ್ದಾರೆ. ಇದೀಗ ಸೈನಾ ಮತ್ತೆ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಸಿಂಧು, ಸೈನಾ ಜತೆಯಾಗಿಯೇ ತರಬೇತಿ ಪಡೆಯುತ್ತಿದ್ದು ಸಿಂಧು ದೌರ್ಬಲ್ಯವನ್ನು ಸೈನಾ ಕಲಿತು ಈಗ ಸಿಂಧು ಸೋಲಿಸುವ ಮಟ್ಟಿಗೆ ಬೆಳೆದಿದ್ದಾರೆ. ಇದೇ ಕಾರಣದಿಂದ ಇಬ್ಬರನ್ನು ಪ್ರತ್ಯೇಕಗೊಳಿಸಲಾಗಿದೆ.
ಸಿಂಧು ಮೇಲಿನ ಎಲ್ಲ ಕಾರಣದಿಂದ ಅಕಾಡೆಮಿ ಬದಲಾಯಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಿಂಧು ತಂದೆ ರಮಣ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹೊಸ ಅಕಾಡೆಮಿಯಲ್ಲಿ ಸಿಂಧುಗೆ ಹಿತವೆನ್ನಿಸಲಿಲ್ಲ. ಈಗ ಸ್ಪರ್ಧೆ ಹೆಚ್ಚಿದೆ. ಸೈನಾ ಜತೆಗೆ ಸಿಂಧು ಒಂದೇ ಅಕಾಡೆಮಿಯಲ್ಲಿದ್ದರೆ ಸಿಂಧುವಿನ ಬಲ-ದೌರ್ಬಲ್ಯ ಗೊತ್ತಾಗುತ್ತದೆ. ಆಕೆಯದ್ದೇ ಆದ ತಂತ್ರಗಾರಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಳೆಯ ಅಕಾಡೆಮಿ ತೊರೆದಿದ್ದಾಳೆ ಎಂದು ತಿಳಿಸಿದ್ದಾರೆ.