Advertisement

ವೇಗಿಗಳು ನಮ್ಮನ್ನು ಕಟ್ಟಿಹಾಕಿದರು: ಫಿಂಚ್‌

12:29 AM Jun 11, 2019 | Sriram |

ಲಂಡನ್‌: ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಭಾರತದೆದುರಿನ ಪಂದ್ಯದಲ್ಲಿ ಹೊಡಿ-ಬಡಿ ಶೈಲಿಗೆ ಹೊರತಾಗಿ ನಿಧಾನವಾಗಿ ಬ್ಯಾಟ್‌ ಮಾಡಿದ್ದು ನಮ್ಮ ಕಾರ್ಯತಂತ್ರವೇನೂ ಆಗಿರಲಿಲ್ಲ. ಭಾರತೀಯ ವೇಗಿಗಳ ಉತ್ಕೃಷ್ಟ ಬೌಲಿಂಗ್‌ ವಾರ್ನರ್‌ ಅವರನ್ನು ಕಟ್ಟಿಹಾಕಿತು ಎಂದು ಆಸ್ಟ್ರೇಲಿಯ ತಂಡದ ನಾಯಕ ಆರನ್‌ ಫಿಂಚ್‌ ಹೇಳಿದ್ದಾರೆ.

Advertisement

ಅಫ್ಘಾನಿಸ್ಥಾನದ ವಿರುದ್ಧ ವಾರ್ನರ್‌ 114 ಎಸೆತಗಳಲ್ಲಿ ಅಜೇಯ 89 ರನ್‌ ಬಾರಿಸಿ, ತಂಡದ ಗೆಲುವಿನ ರೂವಾರಿಯಾಗಿದ್ದರು. ಆದರೆ ಭಾರತದ 353 ರನ್‌ಗಳ ಬೃಹತ್‌ ಮೊತ್ತವನ್ನು ಬೆನ್ನಟ್ಟುವಲ್ಲಿ ವಾರ್ನರ್‌ ಬೀಡು ಬೀಸಿನ ಹೊಡೆತಗಳು ಕಾಣಸಿಗುತ್ತವೆ ಎಂಬ ಪ್ರೇಕ್ಷಕರ ನಿರೀಕ್ಷೆ ಹುಸಿಯಾಯಿತು. ಅವರು 84 ಎಸೆತಗಳನ್ನೆದುರಿಸಿ 56 ರನ್‌ ಗಳಿಸಿದರು. ಆಸ್ಟ್ರೇಲಿಯ ಈ ಪಂದ್ಯವನ್ನು 36 ರನ್‌ಗಳಿಂದ ಸೋತಿತು.

“ಈ ಬಗೆಯ ನಿಧಾನಗತಿಯ ಆಟ ತಂಡ ಅಥವಾ ಡೇವಿಡ್‌ ವಾರ್ನರ್‌ ಅವರ ಯೋಜನೆಯಾಗಿರಲಿಲ್ಲ. ಭಾರತೀಯ ವೇಗಿಗಳು ನಿಜವಾಗಿಯೂ ಉತ್ತಮ ಬೌಲಿಂಗ್‌ ಮಾಡಿದರು. ಭುವನೇಶ್ವರ್‌ ಹಾಗೂ ಬುಮ್ರಾ ಅವರ ಎಸೆತಗಳು ನೇರವಾಗಿದ್ದವು, ನಿಖರವಾಗಿದ್ದವು. ಅವರ ಯೋಜನೆ ಸರಳವಾಗಿತ್ತು. ಆದರೆ, ಆ ಪಿಚ್‌ನಲ್ಲಿ ಅದೇ ಸೂಕ್ತವಾಗಿತ್ತು. ನಮಗೆ ದೊಡ್ಡ ಹೊಡೆತಗಳನ್ನು ಬಾರಿಸಲು ಅವಕಾಶವೇ ಸಿಗಲಿಲ್ಲ’ ಎಂದು ಫಿಂಚ್‌ ಶ್ಲಾಘಿಸಿದರು. ಝಂಪ ಮತ್ತು ಮ್ಯಾಕ್ಸ್‌ವೆಲ್‌ ಅವರಿಗೆ ಹೋಲಿಸಿದರೆ ಕುಲದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ ಪಿಚ್‌ ಅನ್ನು ಚೆನ್ನಾಗಿ ಬಳಸಿಕೊಂಡರೆಂದು ಫಿಂಚ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next