ಪುದುಚೇರಿ: ಗಾನ ಗಂಧರ್ವ ಎಸ್ ಪಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಸವಿನೆನಪಿಗಾಗಿ ಪುದುಚೇರಿಯಲ್ಲಿ ಚಾಕೊಲೇಟ್ ಪ್ರತಿಮೆಯೊಂದನ್ನು ನಿರ್ಮಿಸಲಾಗಿದ್ದು, ಇದೀಗ ಈ ಪ್ರತಿಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಚೆನ್ನೈ ನ ಪದುಚೇರಿಯಲ್ಲಿರುವ ಮಿಷನ್ ಸ್ಟ್ರೀಟ್ ನ ಬೇಕರಿಯೊಂದರಲ್ಲಿ ಈ ಪ್ರತಿಮೆಯನ್ನು ತಯಾರಿಸಿ ಪ್ರದರ್ಶನಗೊಳಿಸಲಾಗಿದೆ. ಈ ಪ್ರತಿಮೆಯು ಬರೋಬ್ಬರಿ 330 ಕೆ.ಜಿ ತೂಕವನ್ನು ಹೊಂದಿದ್ದು ಒಟ್ಟು 5.8 ಅಡಿ ಎತ್ತರವನ್ನು ಹೊಂದಿದೆ.
ಈ ಚಾಕಲೇಟ್ ಪ್ರತಿಮೆಯನ್ನು ರಾಜೇಂದ್ರನ್ ಎಂಬುವವರು ತಯಾರಿಸಿದ್ದು, ಒಟ್ಟು 161 ಗಂಟೆಗಳ ಸತತ ಪರಿಶ್ರಮದಿಂದ ಈ ಪ್ರತಿಮೆ ರೂಪುಗೊಂಡಿದೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಈ ಪ್ರತಿಮೆಯನ್ನು ಜನವರಿ 3 ರವರೆಗೆ ಪ್ರದರ್ಶನಕ್ಕೆ ಇಡಲಾಗುವುದು ರಾಜೇಂದ್ರನ್ ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ರಿಸ್ಮಸ್ ಸಂಭ್ರಮಕ್ಕೆ ಅಡ್ಡಿಯಾದ ಕೋವಿಡ್
ಇದೇ ಬೇಕರಿಯಲ್ಲಿ ಈ ಹಿಂದೆ ಎ.ಪಿ.ಜೆ ಅಬ್ದುಲ್ ಕಲಾಂ, ನಟ ರಜನಿಕಾಂತ್ ಮುಂತಾದ ಪ್ರಸಿದ್ದ ವ್ಯಕ್ತಿಗಳು ಸೇರಿದಂತೆ ಹಲವಾರು ಕ್ರಿಕೆಟಿಗರ ಚಾಕೊಲೇಟ್ ಪ್ರತಿಮೆಗಳನ್ನು ತಯಾರಿಸಿ ಪ್ರದರ್ಶನಗೊಳಿಸಲಾಗಿತ್ತು ಎಂದು ವರದಿಯಾಗಿದೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಕಳೆದ ಆಗಸ್ಟ್ 5ರಂದು ಕೋವಿಡ್ ಸೋಂಕಿಗೆ ಒಳಗಾಗಿ. ತದನಂತರ ಸೆಪ್ಟೆಂಬರ್ 25 ರಂದು ಶ್ವಾಸಕೋಶದ ವೈಫಲ್ಯದಿಂದ ಇಹಲೋಕ ತ್ಯೆಜಿಸಿದ್ದರು.